Sandalwood
ಚಂದನವನದ ಕೃಷ್ಣ ಎಂದೇ ಖ್ಯಾತಿ ಪಡೆದ ನಟ ಅಜಯ್ ರಾವ್. ತಮ್ಮ ಲವ್ ಸ್ಟೋರಿ ಸಿನಿಮಾಗಳಿಂದ ಜನಪ್ರಿಯತೆ ಪಡೆದ ನಟ ಇದೀಗ ಸಂಭ್ರಮದಲ್ಲಿದ್ದಾರೆ.
ಅಜಯ್ ರಾವ್ ಹಾಗೂ ಸ್ವಪ್ನಾ ದಂಪತಿ ವೈವಾಹಿಕ ಜೀವನ ಹತ್ತು ವರ್ಷಗಳನ್ನು ಪೂರೈಸಿದ್ದು, ಈ ಸಂಭ್ರಮದಲ್ಲಿ ಇಬ್ಬರ ಮುದ್ದಾದ ಫೋಟೊಗಳ ವಿಡಿಯೋ ಹಂಚಿ ಸಂಭ್ರಮಿಸಿದ್ದಾರೆ ಅಜಯ್ ರಾವ್.
ನಮ್ಮ incredible 10 Years of togetherness ಸೆಲೆಬ್ರೇಷನ್ ಎನ್ನುತ್ತಾ ತುಂಬಾನೆ ಕ್ಯೂಟ್ ಆಗಿರುವ ಇಬ್ಬರ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಅಜಯ್ ರಾವ್ 2014 ಡಿಸೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಜಯ್ ರಾವ್ ಹಾಗೂ ಸಪ್ನ ಒಂದೇ ಊರಿನವರು. ಇಬ್ಬರದ್ದು ಲವ್ ಕಂ ಅರೇಂಜ್ ಮ್ಯಾರೇಜ್.
ಅಜಯ್ ಹೊಸಪೇಟೆಗೆ ಭೇಟಿ ನೀಡಿದ್ದಾಗ ಇಬ್ಬರ ಪರಿಚಯವಾಗಿ, ಇದು ಸ್ನೇಹಕ್ಕೆ ತಿರುಗಿ, ಪ್ರೇಮವಾಗಿ ಇಬ್ಬರು ಮದುವೆಯಾಗಿದ್ದರು. ಇಬ್ಬರು ಸಿಂಪಲ್ ಆಗಿ ದೇವಸ್ಥಾನದಲ್ಲಿ ಮದುವೆಯಾಗೋ ಮೂಲಕ ಸುದ್ದಿಯಾಗಿದ್ದರು.
ಈ ಜೋಡಿಗೆ ಈಗ ಒಂದು ಮುದ್ದಾದ ಮಗುವಿದೆ. ಮಗುವಿನ ಹೆಸರು ಚೆರಿಷ್ಮಾ . ಇತ್ತೀಚೆಗಷ್ಟೇ ಮಗಳು ತಮ್ಮ 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು.
ಅಜಯ್ ರಾವ್, ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಈ ಗೃಹ ಪ್ರವೇಶ ಸಮಾರಂಭಕ್ಕೆ ತಾರಾಬಳಗವೇ ಬಂದಿತ್ತು. ಅದ್ಧೂರಿಯಾಗಿ ಸಮಾರಂಭ ನಡೆದಿತ್ತು.
ಅಜಯ್ ರಾವ್ ಸುದೀಪ್ ಅಭಿನಯದ ಕಿಚ್ಚ ಸಿನಿಮಾದಲ್ಲಿ ಸುದೀಪ್ ಸ್ನೇಹಿತನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಎಕ್ಸ್ ಕ್ಯೂಸ್ ಮಿ ಸಿನಿಮಾ ಮೂಲಕ ನಾಯಕನಾಗಿ ಮಿಂಚಿದರು.
ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ - ಲೀಲಾ, ಕೃಷ್ಣ - ರುಕ್ಕು, ಕೃಷ್ಣ ಸನ್ ಆಫ್ ಸಿಎಂ, ಕೃಷ್ಣ ಟಾಕೀಸ್ ಸಿನಿಮಾ ಮೂಲಕ ಚಂದನವನದ ಕೃಷ್ಣ ಆಗಿದ್ದಾರೆ ಅಜಯ್ ರಾವ್.