relationship
ಚಿಕ್ಕಂದಿನಲ್ಲಿ ಮಕ್ಕಳ ಸ್ವಭಾವ ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಬ್ಬರು ಹೆಚ್ಚು ಅಳುತ್ತಾರೆ. ಕೆಲ ಮಕ್ಕಳು ಹೆಚ್ಚು ನಗುತ್ತಿರುತ್ತಾರೆ.
ಇನ್ನೂ ಕೆಲ ಮಕ್ಕಳು ಅಪರಿಚಿತರನ್ನು ಕಂಡರೆ ಭಯ ಪಡುತ್ತಾರೆ.
ಹೊಸಬರನ್ನು ಕಂಡರೆ ಮಕ್ಕಳು ಅಳುವುದು ಸಾಮಾನ್ಯವಾಗಿದೆ. ಅಪರಿಚಿತರನ್ನು ನೋಡಿದಾಗ ಮಕ್ಕಳು ಜೋರಾಗಿ ಅಳುತ್ತಾರೆ. ಪೋಷಕರ ಹಿಂದೆ ಬಚ್ಚಿಟ್ಟುಕೊಳ್ಳುತ್ತಾರೆ. ಈ ಭಯದ ಹಿಂದಿನ ಕಾರಣಗಳನ್ನು ತಿಳಿಯೋಣ
ಅಪರಿಚಿತರ ಬಗ್ಗೆ ಮಕ್ಕಳ ಭಯವು ತುಂಬಾ ಸಾಮಾನ್ಯವಾಗಿದೆ. ಶಿಶುಗಳು ಪರಿಚಿತರಿಗೆ ಆದ್ಯತೆ ನೀಡುತ್ತಾರೆ. ಮುಖ, ಧ್ವನಿ ಯಾವುದೂ ಪರಿಚಯವಿಲ್ಲದ ವ್ಯಕ್ತಿಯನ್ನು ನೋಡಿದಾಗ ಸಹಜವಾಗಿಯೇ ತುಂಬಾ ಭಯಪಡುತ್ತಾರೆ.
ಸ್ಟ್ರೇಂಜರ್ ಆತಂಕವು ಶಿಶುಗಳು ಭೇಟಿಯಾದಾಗ ಅಥವಾ ಅವರಿಗೆ ಪರಿಚಯವಿಲ್ಲದ ಜನರನ್ನು ಆರೈಕೆಯಲ್ಲಿ ಬಿಟ್ಟಾಗ ಅನುಭವಿಸುವ ಸಂಕಟವಾಗಿದೆ.ಇದು ಸಾಮಾನ್ಯವಾಗಿ 6 ರಿಂದ 8 ತಿಂಗಳುಗಳಲ್ಲಿ ಪ್ರಾರಂಭವಾಗುತ್ತದೆ.
ಮಕ್ಕಳು ಯಾವಾಗಲೂ ತಮ್ಮ ಹೆತ್ತವರ ಬಳಿ ತಾವು ಸೇಫ್ ಆಗಿದ್ದೇವೆ ಎಂಬ ಭಾವನೆಯನ್ನು ಅನುಭವಿಸುತ್ತಾರೆ. ಆದರೆ ಅಪರಿಚಿತರನ್ನು ನೋಡಿದಾಗ ಆ ಭಾವನೆ ಬರುವುದಿಲ್ಲ. ಹೀಗಾಗಿ ಸಹಜವಾಗಿಯೇ ಭಯವಾಗುತ್ತದೆ.
ಚಿಕ್ಕ ಮಕ್ಕಳು ಅಂದರೆ 18 ತಿಂಗಳೊಳಗಿನ ಮಕ್ಕಳು ಈ ರೀತಿ ವರ್ತಿಸುವುದು ಸಹಜ. ಆದರೆ 18 ತಿಂಗಳ ಮೇಲ್ಪಟ್ಟ ಮಕ್ಕಳು ಈ ರೀತಿ ವರ್ತಿಸಿದರೆ ಅದು ಆತಂಕಕಾರಿ.. ಇಂಥಾ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.