relationship
ಔರಂಗಜೇಬನ ಮಗಳು ಜೆಬುನ್ನಿಸಾ ಕಲಿಕೆಯಲ್ಲಿ ತುಂಬಾ ಚತುರಳಾಗಿದ್ದಳು. ತತ್ವಶಾಸ್ತ್ರ, ಭೂಗೋಳ ಶಾಸ್ತ್ರ ಮತ್ತು ಇತಿಹಾಸದಂತಹಾ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದ್ದಳು.
ಜೆಬುನ್ನಿಸಾ, ಒಳ್ಳೆಯ ಕವಯಿತ್ರಿಯಾಗಿದ್ದಳು. ಆಗಾಗ ತನ್ನ ತಂದೆಯ ಕಣ್ಣು ತಪ್ಪಿಸಿ ರಹಸ್ಯವಾಗಿ ಕವಿಕೂಟಗಳಿಗೆ ಹೋಗುತ್ತಿದ್ದಳು. ಮಾತ್ರವಲ್ಲ ಜೆಬುನ್ನಿಸಾ ಕೃಷ್ಣನ ಪರಮಭಕ್ತೆಯಾಗಿದ್ದಳು.
ಚಿಕ್ಕ ವಯಸ್ಸಿನಲ್ಲೇ ಜೆಬುನ್ನಿಸಾ ತನ್ನ ಸೋದರ ಸಂಬಂಧಿ ಸುಲೈಮಾನ್ ಶಿಕೋಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆದರೆ ಚಿಕ್ಕವಯಸ್ಸಿನಲ್ಲೇ ಸುಲೈಮಾನ್ ನಿಧನರಾದ ಕಾರಣ ಇಬ್ಬರಿಗೂ ಮದುವೆ ಆಗಲ್ಲಿಲ್ಲ.
ಜೆಬುನ್ನಿಸಾ ಚಿಕ್ಕ ವಯಸ್ಸಿನಲ್ಲೇ ಬೃಹತ್ ಗ್ರಂಥಾಲಯದ ಪುಸ್ತಕಗಳನ್ನು ಓದಿದ್ದಳು. ಪುಸ್ತಕಗಳು ಮುಗಿದ ನಂತರ ಜೆಬುನ್ನಿಸಾಗಾಗಿ ಬಿಹಾರದಿಂದ ಪುಸ್ತಕಗಳನ್ನು ತರಿಸಲಾಯಿತು.
ಜೆಬುನ್ನಿಸಾ ಉಡುಗೆ ಸಹ ವಿಭಿನ್ನವಾಗಿತ್ತು. ಅವಳು ಹೆಚ್ಚು ಕುಸೂರಿ ಕೆಲಸ ಮಾಡಿದ ದಿರಿಸುಗಳನ್ನು ಧರಿಸುತ್ತಿದ್ದಳು. ಬಿಳಿ ಮುತ್ತುಗಳನ್ನು ಧರಿಸಲು ಇಷ್ಟಪಡುತ್ತಿದ್ದಳು.
ಜೆಬುನ್ನಿಸಾ ಹಿಂದು ಬುಂದೇಲಾ ಮಹಾರಾಜ್ ಛತ್ರಸಾಲ್ ಅವರನ್ನು ಪ್ರೀತಿಸುತ್ತಿದ್ದಳು. ಔರಂಗಜೇಬ್ ಅವರೊಂದಿಗೆ ಅತೀವ ಶತ್ರುತ್ವವವನ್ನು ಹೊಂದಿದ್ದ. ಹಾಗಾಗಿ ಮಗಳನ್ನು ಶಿಕ್ಷಿಸಲು ನಿರ್ಧರಿಸಿದ.
ಈ ಕಾರಣಕ್ಕಾಗಿ ಔರಂಗಜೇಬ್ ಆಕೆಯನ್ನು ಸಲೀಂಘರ್ ಕೋಟೆಯಲ್ಲಿ ಗೃಹಬಂಧನದಲ್ಲಿಟ್ಟರು. ಜೀವಾವಧಿ ಶಿಕ್ಷೆಯ ಸಮಯದಲ್ಲಿ ಜೆಬುನ್ನಿಸಾ ಕೃಷ್ಣನ ಪರಮ ಭಕ್ತೆಯಾದಳು. 20 ವರ್ಷಗಳಲ್ಲಿ 5000 ಸಂಯೋಜನೆಗಳನ್ನು ಬರೆದಳು.