relationship

ಬದಲಾವಣೆ

ಮದುವೆಯ ನಂತರ ಬಹುತೇಕ ಮಹಿಳೆಯರು ಬದಲಾಗುತ್ತಾರೆ. ಕೆಲವೊಬ್ಬರು ಹೆಚ್ಚು ಮೌನವಾಗುತ್ತಾರೆ. ಇನ್ನು ಕೆಲವರಲ್ಲಿ ಸಿಡುಕಿನ ಸ್ವಭಾವ ಕಾಣಿಸಿಕೊಳ್ಳುತ್ತದೆ. 

ಮನಸ್ಥಿತಿ ಬದಲಾಗುತ್ತದೆ

ಮದುವೆಯಾದ ನಂತರ ಮಹಿಳೆಯರ ಮನಸ್ಥಿತಿ ಬದಲಾವಣೆಯಾಗುತ್ತದೆ ಅನ್ನೋದು ನಿಜ. ಕೆಲವು ಸಾಮಾಜಿಕ ಅಂಶಗಳು ಇದಕ್ಕೆ ಕಾರಣವಾಗಿವೆ. ಕೆಲವು ಹಾರ್ಮೋನ್ ಬದಲಾವಣೆಗಳು ಸಹ ಈ ಚೇಂಜಸ್‌ಗೆ ಕಾರಣವಾಗುತ್ತದೆ.

ಜಗಳವಾಗುವುದು ಯಾಕೆ?

ಸೈಕಾಲಜಿ ಟುಡೇಯಲ್ಲಿ ಪ್ರಕಟವಾಗಿರುವ ಸಮೀಕ್ಷಾ ವರದಿಯ ಪ್ರಕಾರ, ದಂಪತಿಗಳಲ್ಲಿ ಡೇಟಿಂಗ್, ಮದುವೆ ನಂತರ ಜಗಳ ಸಹಜ. ಯಾಕೆಂದರೆ ಮದುವೆಯ ನಂತರದ ಬದುಕು ಭಿನ್ನವಾಗಿರುತ್ತದೆ.

ಹೊಂದಾಣಿಕೆ ಕಷ್ಟ

ಲವ್‌, ಡೇಟಿಂಗ್‌ನಲ್ಲಿ ಇರುವುದಕ್ಕಿಂತ ವಿಭಿನ್ನವಾಗಿ ಮಹಿಳೆ ಹೊಸ ಮನೆಯಲ್ಲಿ ಎಲ್ಲಾ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದು ಕೆಲವು ಅಸಹನೆಗೆ ಕಾರಣವಾಗಬಹುದು. 

ಹೊಸ ಮನೆ

ಮದುವೆಯಾದ ನಂತರ ಹೆಣ್ಣುಮಕ್ಕಳು ತಮ್ಮ ಮನೆ ಬಿಟ್ಟು ಹೊಸ ಮನೆಗೆ ಬರುತ್ತಾರೆ. ಅಪರಿಚಿತ ಮನೆಗೆ ಒಗ್ಗಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ. ಹೀಗಾಗಿ ಅವರು ಹೆಚ್ಚು ಮೌನವಾಗಿರುತ್ತಾರೆ.

ಪರಿಚಿತರ ಕೊರತೆ

ಹೆಣ್ಣು ಹೊಸ ಮನೆ ಸೇರಿದಾಗ ಆಕೆಗೆ ಅಲ್ಲಿ ಪರಿಚಿತರ ಕೊರತೆ ಇರುತ್ತದೆ. ಅನೇಕ ಹುಡುಗಿಯರು ತಮ್ಮ ತಾಯಿಯ ಮನೆಯಲ್ಲಿದ್ದ ಅದೇ ಬಾಂಧವ್ಯವನ್ನು ಹೊಸ ಮನೆಯಲ್ಲಿ ಪಡೆಯುವುದಿಲ್ಲ.

ಉದ್ಯೋಗವಿಲ್ಲದ ಸಿಟ್ಟು

ಮದುವೆಯ ನಂತರ ಅನೇಕ ಮಹಿಳೆಯರು ಉದ್ಯೋಗವನ್ನು ಬಿಡಬೇಕಾಗುತ್ತದೆ. ಇಷ್ಟಪಟ್ಟ ಕೆಲಸ ಬಿಡುವುದು ಅವರನ್ನು ಕೆರಳುವಂತೆ ಮಾಡುತ್ತದೆ. ಹೀಗಾಗಿ ಸ್ವಭಾವದಲ್ಲೂ ಬದಲಾವಣೆಯಾಗುತ್ತದೆ.

Find Next One