relationship

ಲಾರೆನ್ ಸ್ಯಾಂಚೆಜ್ ಯಾರು?

ಅಮೆಜಾನ್ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್ ಮತ್ತು ಗೆಳತಿ ಲಾರೆನ್ ಸ್ಯಾಂಚೆಜ್ ಈ ಕ್ರಿಸ್ಮಸ್‌ನಲ್ಲಿ ಎ-ಲಿಸ್ಟ್ ಸ್ನೇಹಿತರೊಂದಿಗೆ ಅದ್ಡೂರಿ ಮದುವೆಗೆ ಸಿದ್ಡತೆ ನಡೆಸಿದ್ದಾರೆ.

ಜೆಫ್ ಬೆಜೋಸ್ ಅವರ ಮದುವೆ

ಅಮೆಜಾನ್ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್ (Jeff Bezos) 60 ನೇ ವಯಸ್ಸಿನಲ್ಲಿ ಮದುವೆಯಾಗಲಿದ್ದಾರೆ. ವರದಿಗಳ ಪ್ರಕಾರ, ಅವರು ಕ್ರಿಸ್‌ಮಸ್‌ನಲ್ಲಿ ತಮ್ಮ ಗೆಳತಿಯನ್ನು ವಿವಾಹವಾಗಲಿದ್ದಾರೆ.

ಜೆಫ್ ಬೆಜೋಸ್ ಅವರ ಗೆಳತಿ ಯಾರು

ಅನಾಮಧೇಯ ಮೂಲವನ್ನು ಉಲ್ಲೇಖಿಸಿ 'ದಿ ಸನ್' ವರದಿ ಮಾಡಿದೆ, ಜೆಫ್ ಬೆಜೋಸ್ ತಮ್ಮ ದೀರ್ಘಕಾಲದ ಗೆಳತಿ ಮತ್ತು ಈಗ ನಿಶ್ಚಿತಾರ್ಥಿ ಲಾರೆನ್ ಸ್ಯಾಂಚೆಜ್ (Lauren Sanchez) ಅವರನ್ನು ವಿವಾಹವಾಗಲಿದ್ದಾರೆ.

ಜೆಫ್ ಬೆಜೋಸ್-ಲಾರೆನ್ ಸ್ಯಾಂಚೆಜ್ ಮದುವೆಯ ಅತಿಥಿಗಳು

ವರದಿಯಂತೆ, ಈ ವಿವಾಹ ಸಮಾರಂಭದಲ್ಲಿ ಜೆಫ್ ಮತ್ತು ಲಾರೆನ್ ಅವರ ಆಪ್ತ ಸ್ನೇಹಿತರು ಮತ್ತು ಹೈ-ಪ್ರೊಫೈಲ್ ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಅವರ ಮದುವೆ ಆಸ್ಪೆನ್ (ಕೊಲೊರಾಡೋ) ನಲ್ಲಿ ನಡೆಯಲಿದೆ.

ಜೆಫ್ ಬೆಜೋಸ್ ಎಷ್ಟು ಶ್ರೀಮಂತರು

\ಬೆಜೋಸ್, ಎಲಾನ್ ಮಸ್ಕ್ ನಂತರ ವಿಶ್ವದ ೨ನೇ ಶ್ರೀಮಂತ ವ್ಯಕ್ತಿ. ನಿವ್ವಳ ಮೌಲ್ಯ 235 ಬಿಲಿಯನ್ ಡಾಲರ್. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈ ವರ್ಷ  ಅವರ ಸಂಪತ್ತು 57.7 ಬಿಲಿಯನ್ ಡಾಲರ್ ಹೆಚ್ಚಾಗಿದೆ

ಲಾರೆನ್ ಸ್ಯಾಂಚೆಜ್ ಯಾರು

54 ವರ್ಷದ ಲಾರೆನ್ ಸ್ಯಾಂಚೆಜ್ ಒಬ್ಬ ಮಾಧ್ಯಮ ವ್ಯಕ್ತಿ, ಅವರು ದಿ ವ್ಯೂ, KTTV ಮತ್ತು ಫಾಕ್ಸ್ 11 ನಂತಹ ಹಲವಾರು ಸುದ್ದಿ ವಾಹಿನಿಗಳಲ್ಲಿ ವರದಿಗಾರ್ತಿ ಮತ್ತು ನಿರೂಪಕಿಯಾಗಿದ್ದಾರೆ.

ಜೆಫ್ ಬೆಜೋಸ್ ಮತ್ತು ಲಾರೆನ್ ಸಂಬಂಧ ಎಷ್ಟು ಹಳೆಯದು

ಜೆಫ್ ಬೆಜೋಸ್ ಮತ್ತು ಲಾರೆನ್ ಅವರ ಸಂಬಂಧವು 2018 ರಲ್ಲಿ ಬಹಿರಂಗವಾಯಿತು. ಆಗ ಇಬ್ಬರೂ ವಿವಾಹಿತರಾಗಿದ್ದರು. ವರದಿಗಳ ಪ್ರಕಾರ, ಆ ಸಮಯದಲ್ಲಿ ಸ್ಯಾಂಚೆಜ್ ತಮ್ಮ ಪತಿ ವೈಟ್‌ಸೆಲ್‌ನಿಂದ ವಿಚ್ಛೇದನ ಪಡೆಯುತ್ತಿದ್ದರು.

ಜೆಫ್ ಬೆಜೋಸ್ ಅವರ ವಿಚ್ಛೇದನ

ಬೆಜೋಸ್ ಮತ್ತು ಲಾರೆನ್ ಅವರ ಸಂಬಂಧದಿಂದಾಗಿ ಜೆಫ್ ಬೆಜೋಸ್ ಅವರ ಪತ್ನಿ ಮೆಕೆಂಜಿ ಸ್ಕಾಟ್‌ರಿಂದ ವಿಚ್ಛೇದನ ಪಡೆದರು. ನಂತರ ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ಮೇ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಸುಖಿ ಸಂಬಂಧಕ್ಕೆ ಗೌರ್ ಗೋಪಾಲ್‌ದಾಸ್ ಅವರ 10 ಬೆಸ್ಟ್ ಸಲಹೆಗಳು

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಐಎಎಸ್‌ ಪುತ್ರಿಯ ವಿವಾಹ; ವರ ಯಾರು?

ಸ್ಟೈಲಿಸ್ಟ್‌ ಶ್ರಾವ್ಯ ವರ್ಮಾ ಕೈ ಹಿಡಿದ ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ

ಪತ್ನಿಯ ಮುಂದೆ ಈ ನಾಲ್ವರನ್ನು ಹೊಗಳಬೇಡಿ