relationship

ಗೌರ್ ಗೋಪಾಲ್ ದಾಸ್ ಸಲಹೆಗಳು

ಆಧ್ಯಾತ್ಮಿಕ ಗುರು ಮತ್ತು  ಸ್ಪೂರ್ತಿ ನೀಡುವ  ಭಾಷಣಕ್ಕೆ ಪ್ರಸಿದ್ಧರಾಗಿರುವ ಗೌರ್ ಗೋಪಾಲ್ ದಾಸ್ ತಮ್ಮ ಆಲೋಚನೆಗಳಿಂದ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದವರು.

ವಿಶ್ವಾಸ ಬಲಪಡಿಸಿ ಮತ್ತು ಸಂಶಯ ಮಾಡಿ

ಆಧ್ಯಾತ್ಮಿಕ ಗುರು ಗೌರ್ ಗೋಪಾಲ್ ದಾಸ್ ಹೇಳುವಂತೆ  ಪರಸ್ಪರ ವಿಶ್ವಾಸವನ್ನು ಬಲಪಡಿಸಬೇಕು ಹಾಗೂ ಸಂಶಯಗಳನ್ನು ದೂರ ಮಾಡಬೇಕು. ಸಂಶಯ ಹಾಗೂ ವಿಶ್ವಾಸದ ಕೊರತೆಯೇ ಸಂಬಂಧ ಹಳಸಲು ಕಾರಣ

ಸಂಗಾತಿಯ ನ್ಯೂನತೆಗಳನ್ನು ದ್ವೇಷಿಸಬೇಡಿ

ಗೌರ್ ಗೋಪಾಲ್ ದಾಸ್ ಜೀ ಹೇಳುವಂತೆ ನಿಮ್ಮ ಸಂಗಾತಿಯ ನ್ಯೂನತೆಗಳನ್ನು ದ್ವೇಷಿಸಬಾರದು, ಬದಲಿಗೆ ಅವುಗಳನ್ನು ಸರಿಪಡಿಸಲು ಪ್ರಯತ್ನಿಸಬೇಕು. ಕೆಲವು ಸರಿಪಡಿಸಲಾಗದ್ದನ್ನು ನಿರ್ಲಕ್ಷಿಸಬೇಕು.

ಸಮರ್ಪಣೆ ಬೇಡುವ ಸಂಬಂಧ

ಯಾವುದೇ ಸಂಬಂಧವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಇದಕ್ಕೆ ಸಮಯ, ಪ್ರಯತ್ನ ಮತ್ತು ಸಮರ್ಪಣೆ ಅಗತ್ಯ. ನಿಜವಾದ ಉದ್ದೇಶದಿಂದ ಮಾತ್ರ ನೀವು ಅದನ್ನು ದೀರ್ಘಕಾಲ ಉಳಿಸಿಕೊಳ್ಳಬಹುದು.

ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡಬೇಡಿ

ದಂಪತಿಗಳ ನಡುವೆ ಬಿರುಕು ಮೂಡಲು ಮೂರನೇ ವ್ಯಕ್ತಿ ಕಾರಣವಾಗುತ್ತಾನೆ. ಆದ್ದರಿಂದ ನಿಮ್ಮ ನಡುವೆ ಮೂರನೇ ವ್ಯಕ್ತಿ ಬರಲು ಬಿಡಬಾರದು.

ಸಂಬಂಧದ ಪರೀಕ್ಷೆ ಯಾವಾಗ?

ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ ಯಾರನ್ನಾದರೂ ಒಪ್ಪಿಕೊಳ್ಳುವುದು ಸುಲಭ. ಆದರೆ ನಿಮ್ಮ ಸುತ್ತಲಿನ ವಿಷಯಗಳು ಹದಗೆಡುತ್ತಿರುವಾಗ ನೀವು ಒಟ್ಟಿಗೆ ಇದ್ದರೆ ಅದು ನಿಜವಾದ ಸಂಬಂಧದ ಪರೀಕ್ಷೆ.

ಹಠಾತ್ ನಿರ್ಧಾರ ತೆಗೆದುಕೊಳ್ಳುವುದು ದೊಡ್ಡ ತಪ್ಪು

ಬ್ರೇಕಪ್ ಮಾಡಬೇಕೋ ಅಥವಾ ಪ್ಯಾಚಪ್ ಮಾಡಬೇಕೋ ಎಂಬ ನಿರ್ಧಾರವನ್ನು ಹಠಾತ್ ತೆಗೆದುಕೊಳ್ಳಬೇಡಿ. ಯೋಚಿಸಿ ಮುಂದಿನ ಹೆಜ್ಜೆ ಇಡಿ, ಅದ್ದರಿಂದ ಮುಂದೆ ನಿಮಗೆ ಅಪರಾಧ ಭಾವನೆ ಬರಬಾರದು.

ಜನರಲ್ಲಿ ಚಿನ್ನ ಹುಡುಕಿ, ಕೊಳಕಲ್ಲ

ಗೌರ್ ಗೋಪಾಲ್ ದಾಸ್ ಜೀ ಹೇಳುವಂತೆ ಯಾರಾದರೂ ಯಾರಲ್ಲಾದರೂ ಕೊಳಕು ಹುಡುಕಬಹುದು. ಆದರೆ ನೀವು ಚಿನ್ನವನ್ನು ಹುಡುಕುವವರಾಗಿರಿ. ಅಂದರೆ ಒಳ್ಳೆಯದನ್ನು ಹುಡುಕಿ

ಪ್ರೀತಿ ತ್ಯಾಗ ಮತ್ತು ಲಾಭವನ್ನು ಬಯಸುತ್ತದೆ

ಜನರ ಜೀವನದಲ್ಲಿ ಪ್ರೀತಿ ಪ್ರಮುಖ ಪರಿಣಾಮ ಬೀರುತ್ತದೆ. ಇದಕ್ಕೆ ಸಮರ್ಪಣೆ ಅಗತ್ಯ. ಪ್ರೀತಿಗಾಗಿ ತ್ಯಾಗ ಅಗತ್ಯ ಮತ್ತು ಪರಸ್ಪರ ಲಾಭ ಎರಡೂ ಆರೋಗ್ಯಕರ ಸಂಬಂಧಕ್ಕೆ ತುಂಬಾ ಅಗತ್ಯ.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಐಎಎಸ್‌ ಪುತ್ರಿಯ ವಿವಾಹ; ವರ ಯಾರು?

ಸ್ಟೈಲಿಸ್ಟ್‌ ಶ್ರಾವ್ಯ ವರ್ಮಾ ಕೈ ಹಿಡಿದ ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ

ಪತ್ನಿಯ ಮುಂದೆ ಈ ನಾಲ್ವರನ್ನು ಹೊಗಳಬೇಡಿ

ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ಅಪ್ಪಿ ತಪ್ಪಿಯೂ ಮೌನವಾಗಿರಬಾರದು!