ಡ್ರೈ ಕ್ಲೀನ್ ಇಲ್ಲದೆ ಸೋಫಾ ಕುಶನ್ ಕ್ಲೀನ್ ಮಾಡಲು DIY ಹ್ಯಾಕ್ಸ್
ಸೋಫಾ ಕುಶನ್‌ಗಳನ್ನು ಡ್ರೈ ಕ್ಲೀನಿಂಗ್‌ಗೆ ಹಾಕದೆ ಮನೆಯಲ್ಲೇ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದಕ್ಕಾಗಿ ಇಲ್ಲಿ ಕೆಲವು ಸರಳ ಉಪಾಯಗಳನ್ನು ನೀಡಲಾಗಿದೆ.
life Aug 23 2026
Author: Mahmad Rafik Image Credits:social media
Kannada
ಕುಶನ್‌ಗಳ ಸ್ವಚ್ಛತೆ
ಸೋಫಾದ ಮೇಲಿರುವ ಕುಶನ್‌ಗಳಲ್ಲಿ ಕಾಲಕ್ರಮೇಣ ಧೂಳು, ಕೊಳೆ ಮತ್ತು ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಹಾಗಾಗಿ, ಕಾಲಕಾಲಕ್ಕೆ ಕುಶನ್‌ಗಳನ್ನು ಡೀಪ್ ಕ್ಲೀನ್ ಮಾಡುವುದು ಬಹಳ ಮುಖ್ಯ.
Image credits: Freepik
Kannada
ಕುಶನ್ ಕವರ್ ತೆಗೆಯಿರಿ
ಮೊದಲಿಗೆ, ಕುಶನ್‌ಗಳ ಮೇಲಿನ ಕವರ್‌ಗಳನ್ನು ತೆಗೆಯಿರಿ. ಈ ಕವರ್‌ಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಮೈಲ್ಡ್ ಡಿಟರ್ಜೆಂಟ್ ಬಳಸಿ ತೊಳೆಯಬಹುದು.
Image credits: Freepik
Kannada
ಕುಶನ್‌ಗಳಿಗೆ ವ್ಯಾಕ್ಯೂಮ್ ಕ್ಲೀನಿಂಗ್ ಮಾಡಿ
ಕುಶನ್‌ಗಳನ್ನು ಕೈಯಿಂದ ಅಥವಾ ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಬಹುದು. ಇದು ಕುಶನ್‌ಗಳಲ್ಲಿರುವ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Image credits: Freepik
Kannada
ಬಿಸಿಲಿನಲ್ಲಿ ಒಣಗಿಸಿ
ಕುಶನ್‌ಗಳನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಕೆಟ್ಟ ವಾಸನೆ ದೂರವಾಗುತ್ತದೆ. ತಿಂಗಳಿಗೊಮ್ಮೆ ಕುಶನ್‌ಗಳನ್ನು ಬಿಸಿಲಿನಲ್ಲಿ ಒಣಗಿಸುವುದು ಒಳ್ಳೆಯದು.
Image credits: Freepik
Kannada
ಸೋಡಿಯಂ ಬೈಕಾರ್ಬನೇಟ್ ಬಳಕೆ
ಕುಶನ್‌ಗಳ ಮೇಲೆ ಸೋಡಿಯಂ ಬೈಕಾರ್ಬನೇಟ್ ಅಥವಾ ಅಡುಗೆ ಸೋಡಾವನ್ನು ಸಿಂಪಡಿಸಿ. ನಂತರ ವ್ಯಾಕ್ಯೂಮ್ ಕ್ಲೀನರ್ ಸಹಾಯದಿಂದ ಸ್ವಚ್ಛಗೊಳಿಸಿ. ಇದು ಕುಶನ್‌ನಲ್ಲಿರುವ ತೇವಾಂಶ ಮತ್ತು ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ.
Image credits: Freepik
Kannada
ಬ್ಲೀಚ್ ಬಳಸಿ
ಒಂದು ಬಟ್ಟಲಿನಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಬ್ಲೀಚ್ ಮಿಶ್ರಣ ಮಾಡಿ ಸ್ಪ್ರೇ ತಯಾರಿಸಿ. ನಂತರ ಕುಶನ್ ಮೇಲೆ ಸ್ಪ್ರೇ ಮಾಡಿ 15 ನಿಮಿಷ ಬಿಡಿ. ಸ್ಪಾಂಜ್/ ಬ್ರಷ್ ಸಹಾಯದಿಂದ ಕುಶನ್ ಸ್ವಚ್ಛಗೊಳಿಸಿ.
Image credits: Freepik
Kannada
ವಿನೆಗರ್ ಮತ್ತು ನೀರು
ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಸ್ಪ್ರೇ ತಯಾರಿಸಿ. ಕುಶನ್ ಮೇಲೆ ಸ್ಪ್ರೇ ಮಾಡಿದ ನಂತರ, ತಕ್ಷಣವೇ ಬಟ್ಟೆಯಿಂದ ಒರೆಸಿ. ಇದು ಕುಶನ್ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Image credits: Freepik
Kannada
ಸ್ಟೀಮ್ ಕ್ಲೀನಿಂಗ್
ಕುಶನ್‌ಗಳು ತುಂಬಾ ಕೊಳಕಾಗಿದ್ದರೆ, ಸ್ಟೀಮ್ ಕ್ಲೀನಿಂಗ್ ಮಾಡಬಹುದು. ಇದು ಕುಶನ್‌ಗಳನ್ನು ಆಳವಾಗಿ ಸ್ವಚ್ಛಗೊಳಿಸಲು (ಡೀಪ್ ಕ್ಲೀನ್) ಸಹಾಯ ಮಾಡುತ್ತದೆ.