Kannada

ಹಿರಿಯರ ಕಾಲದಿಂದಲೂ ಇರೊ ಸಂಪ್ರದಾಯ

ಬಾಗಿಲು ಅಥವಾ ಹೊಸ್ತಿಲ ಬಳಿ ಸ್ವಲ್ಪ ಸುಣ್ಣ ಮತ್ತು ಉಪ್ಪು ಉದುರಿಸುವುದು ನಮ್ಮ ಹಿರಿಯರ ಕಾಲದಿಂದಲೂ ನಡೆದುಬಂದ ಸಂಪ್ರದಾಯ. ಆದರೆ ಇದರ ಹಿಂದಿರುವ ಪ್ರಯೋಜನಗಳು ಆಶ್ಚರ್ಯಕರ!

Kannada

ಇರುವೆಗಳ ಕಾಟಕ್ಕೆ ಮುಕ್ತಿ

ಮನೆಯೊಳಗೆ ಇರುವೆಗಳ ಕಾಟ ಹೆಚ್ಚಾಗಿದ್ದರೆ, ಬಾಗಿಲಿನ ಬಳಿ ಸ್ವಲ್ಪ ಉಪ್ಪು ಉದುರಿಸಿ. ಉಪ್ಪು ಇರುವೆಗಳಿಗೆ ನೈಸರ್ಗಿಕ ಶತ್ರು, ಇದು ಅವುಗಳನ್ನು ಮನೆಯೊಳಗೆ ಬರದಂತೆ ತಡೆಯುತ್ತದೆ.

Image credits: AI Image
Kannada

ನಕಾರಾತ್ಮಕ ಶಕ್ತಿ ದೂರ (Negative Energy)

ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದೆ. ಬಾಗಿಲ ಬಳಿ ಉಪ್ಪು ಹಾಕುವುದರಿಂದ ಮನೆಯೊಳಗೆ ಕೆಟ್ಟ ದೃಷ್ಟಿ ಅಥವಾ ನೆಗೆಟಿವ್ ವೈಬ್ಸ್ ಪ್ರವೇಶಿಸುವುದಿಲ್ಲ.

Image credits: Social Media
Kannada

ವಿಷಕಾರಿ ಜಂತುಗಳಿಗೆ ತಡೆ

ಸುಣ್ಣದ ಖಾರಕ್ಕೆ ಹಾವು ಅಥವಾ ಚೇಳುಗಳಂತಹ ವಿಷಕಾರಿ ಕ್ರಿಮಿಕೀಟಗಳು ಬಾಗಿಲ ಹತ್ತಿರ ಸುಳಿಯುವುದಿಲ್ಲ. ಮಳೆಗಾಲದಲ್ಲಿ ಇದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ.

Image credits: Social Media
Kannada

ತೇವಾಂಶ ಮತ್ತು ಬ್ಯಾಕ್ಟೀರಿಯಾ ನಿವಾರಣೆ

ಮಳೆಗಾಲದಲ್ಲಿ ಬಾಗಿಲ ಬಳಿ ತೇವಾಂಶ (Moisture) ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಹರಡುತ್ತವೆ. ಉಪ್ಪು ಮತ್ತು ಸುಣ್ಣ ಈ ತೇವಾಂಶವನ್ನು ಹೀರಿಕೊಂಡು ಜಾಗವನ್ನು ಸ್ವಚ್ಛವಾಗಿಡುತ್ತವೆ.

Image credits: Social Media
Kannada

ವಾಸ್ತು ಮತ್ತು ಸಮೃದ್ಧಿ

ಹೊಸ್ತಿಲನ್ನು ಸ್ವಚ್ಛವಾಗಿಟ್ಟು ಸುಣ್ಣ-ಉಪ್ಪಿನಿಂದ ರಕ್ಷಣೆ ನೀಡುವುದು ಲಕ್ಷ್ಮಿ ದೇವಿಯ ಆಗಮನಕ್ಕೆ ದಾರಿಯಾಗುತ್ತದೆ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಪುರಾತನ ನಂಬಿಕೆ.

Image credits: Social Media
Kannada

ಹೀಗೆ ಮಾಡಿ

ದಿನಾ ಸಾಧ್ಯವಾಗದಿದ್ದರೂ, ವಾರಕ್ಕೊಮ್ಮೆ/ವಿಶೇಷ ದಿನಗಳಲ್ಲಿ ಬಾಗಿಲನ್ನು ತೊಳೆದು ಸ್ವಲ್ಪ ಸುಣ್ಣ, ಉಪ್ಪನ್ನು ಉದುರಿಸಿ ಮನೆಯ ಸುರಕ್ಷತೆ  ಹೆಚ್ಚಿಸಿಕೊಳ್ಳಿ! ಬೇಕಾದರೆ ಹೊಸ್ತಿಲನ್ನು ತೊಳೆಯುವಾಗ ನೀರಿಗೆ ಉಪ್ಪು ಸೇರಿಸಿ.

Image credits: Social Media

ಅಕ್ಕಿ, ಪನೀರ್​, ಜೇನುತುಪ್ಪ, ಕಲ್ಲಂಗಡಿ, ಐಸ್​ಕ್ರೀಂನಲ್ಲಿ ಕೆಮಿಕಲ್ಸ್ ಪರೀಕ್ಷೆ

Korean Rings: ನಿಮ್ಮ ಗರ್ಲ್‌ಫ್ರೆಂಡ್‌ಗೆ ಕೊಡಿ ಈ ಕೊರಿಯನ್ ಉಂಗುರ: ನೋಡಿದ ತಕ್ಷಣ ಫಿದಾ ಆಗ್ತಾರೆ!

'ಜೆನ್‌ ಝೀ'ಗಳ ಟಾಪ್ 5 ಫ್ಯಾಷನ್ ಟ್ರೆಂಡ್‌ಗಳು; ಯುವಜನರ ಡೈಲಿ ಸ್ಟೈಲ್ ಗೈಡ್

Indoor Plants: ಮಳೆಗಾಲದ ತೇವಾಂಶ ಓಡಿಸಲು ಮನೆಯಲ್ಲಿ ಈ 6 ಗಿಡಗಳನ್ನು ಬೆಳೆಸಿ!