ಈಗ ಎಲ್ಲೆಲ್ಲೂ ಕಲಬೆರಕೆಗಳೇ ಆಗಿಬಿಟ್ಟಿವೆ. ಹಣಕ್ಕಾಗಿ ಜನರ ಜೀವನದ ಮೇಲೆ ಚೆಲ್ಲಾಟ ಆಡುವುದು ಹೆಚ್ಚಾಗಿದೆ. ಹಾಗಿದ್ದರೆ, ಕೆಲವೊಂದು ಪದಾರ್ಥಗಳಲ್ಲಿ ನಕಲಿ, ಅಸಲಿ ನೋಡುವುದು ಹೇಗೆ ಎನ್ನೋದನ್ನು ಇಲ್ಲಿ ವಿವರಿಸಲಾಗಿದೆ.
life Aug 23 2026
Author: Suchethana D Image Credits:ferofactz Instagram
Kannada
ನಕಲಿ ಪನೀರ್ ಗುರುತಿಸೋದು ಹೇಗೆ?
ಬಿಸಿಯಾಗಿರುವ ತವೆಯ ಮೇಲೆ ಪನೀರ್ ಪೀಸ್ ಇಡಿ. ಒಂದು ವೇಳೆ ಅದು ಸೀದು ಹೋಗಿ ಕಪ್ಪಾದರೆ ನಕಲಿ ಎಂದೂ, ಬ್ರೌನ್ ಕಲರ್ ಬಂದರೆ ಅಸಲಿ ಎಂದೂ ಅರ್ಥ.
Image credits: ferofactz Instagram
Kannada
ಅಕ್ಕಿಯ ಸತ್ಯಾಸತ್ಯತೆ ಹೀಗೆ ಪರೀಕ್ಷಿಸಿ
ಅಕ್ಕಿ ಕೂಡ ಈಗ ನಕಲಿ ಬರಲು ಶುರುವಾಗಿದೆ. ಇದನ್ನು ಕಂಡು ಹಿಡಿಯೋದು ಸುಲಭ. ಒಂದು ಅಕ್ಕಿ ಕಾಳನ್ನು, ಮೇಣದ ಬತ್ತಿಗೆ ಹಿಡಿಕೆ ಸಹಾಯದಿಂದ ಹಿಡಿಯಿರಿ. ಬೆಂಕಿ ಹಿಡಿದು ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ಲಾಸ್ಟಿಕ್ ಎಂದರ್ಥ .
Image credits: ferofactz Instagram
Kannada
ಐಸ್ಕ್ರೀಂನಲ್ಲಿ...
ಐಸ್ಕ್ರೀಂನಲ್ಲಿ ಕೆಮಿಕಲ್ಸ್ ಮಿಕ್ಸ್ ಆಗಿದ್ಯಾ ನೋಡಲು ಸ್ವಲ್ಪ ಲಿಂಬೆ ಹಣ್ಣಿನ ರಸವನ್ನು ಅದರ ಮೇಲೆ ಹಾಕಿ. ರಸ ಹಾಕಿದಾಗ ನೊರೆ ಬಂದರೆ ಐಸ್ಕ್ರೀಂನಲ್ಲಿ ಕೆಮಿಕಲ್ಸ್ ಮಿಕ್ಸ್ ಆಗಿದೆ ಎಂದು ಅರ್ಥ
Image credits: ferofactz Instagram
Kannada
ಕಲ್ಲಂಗಡಿ ಹಣ್ಣಿನಲ್ಲಿ...
ಕಲ್ಲಂಗಡಿ ಹಣ್ಣಿನ ಪೀಸ್ ಅನ್ನು ನೀರಿನಲ್ಲಿ ಹಾಕಿ. ನೀರಿನಲ್ಲಿ ಕಲರ್ ಬಿಟ್ಟರೆ ಅದಕ್ಕೆ ಕೆಮಿಕಲ್ಸ್ ಮಿಕ್ಸ್ ಆಗಿದೆ ಎಂದರ್ಥ. ಇಲ್ಲದಿದ್ದರೆ, ಕಲರ್ ಬಿಡುವುದಿಲ್ಲ.
Image credits: ferofactz Instagram
Kannada
ಜೇನುತುಪ್ಪದ ರಿಯಾಲಿಟಿ
ಒಂದು ಗ್ಲಾಸ್ ನೀರಿನಲ್ಲಿ ಒಂದು ತೊಟ್ಟು ಜೇನುತುಪ್ಪ ಹಾಕಿ. ಅಸಲಿ ಆಗಿದ್ದರೆ, ಈ ತೊಟ್ಟು ನೇರವಾಗಿ ನೀರಿನ ಒಳಗೆ ಹೋಗಿ ಅಡಿಯಲ್ಲಿ ಕುಳಿತುಕೊಳ್ಳುತ್ತದೆ, ನಕಲಿಯಾಗಿದ್ದರೆ ನೀರಿನಲ್ಲಿ ಮಿಕ್ಸ್ ಆಗಿ ಬಣ್ಣ ಬಿಡುತ್ತದೆ.