Kannada

ಲಕ್ಷ್ಮಿ ಕಟಾಕ್ಷಕ್ಕಾಗಿ ಮನೆಯಲ್ಲಿಟ್ಟುಕೊಳ್ಳಬೇಕಾದ ಏಳು ವಸ್ತುಗಳು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಪವಿತ್ರ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ನೆಗೆಟಿವ್ ಎನರ್ಜಿ ದೂರವಾಗಿ, ಐಶ್ವರ್ಯ, ಅದೃಷ್ಟ ಮನೆಗೆ ಬರುತ್ತದೆ.

Kannada

ಕ್ರಿಸ್ಟಲ್ ಪಿರಮಿಡ್

ಸ್ಫಟಿಕ/ ಕ್ರಿಸ್ಟಲ್‌ಗಳು ಸುತ್ತಲಿನ ಶಕ್ತಿಯನ್ನು ಶುದ್ಧೀಕರಿಸಿ, ಸಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ. ನೆಗೆಟಿವಿಟಿ ತೊಡೆದುಹಾಕಲು ಕ್ರಿಸ್ಟಲ್ ಪಿರಮಿಡ್ ಸಹಾಯ ಮಾಡುತ್ತೆ. ಹಾಲ್‌ನ ಈಶಾನ್ಯ/ಉತ್ತರ ದಿಕ್ಕಿನಲ್ಲಿಡಿ.

Image credits: AI Generated images
Kannada

ಬಿದಿರಿನ ಗಿಡ, ಕೊಳಲು

ಹಳದಿ/ಕೆಂಪು ದಾರದಿಂದ ಕಟ್ಟಿದ ಎರಡು ಬಿದಿರಿನ ಕೊಳಲುಗಳನ್ನು ಮುಖ್ಯ ದ್ವಾರದ ಮೇಲೆ ಇಟ್ಟರೆ, ಅದು ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿದಂತೆ. ಸಣ್ಣ ಲಕ್ಕಿ ಬ್ಯಾಂಬೂ ಬೆಳೆಸುವುದರಿಂದ ಸಮೃದ್ಧಿ ಉಂಟಾಗುತ್ತದೆ.

Image credits: AI Generated images
Kannada

ಲಾಫಿಂಗ್ ಬುದ್ಧ

ಇದು ಸಂತೋಷ, ಮಾನಸಿಕ ಶಾಂತಿ ಮತ್ತು ಆರ್ಥಿಕ ಪ್ರಗತಿಯ ಸಂಕೇತ. ಮುಖ್ಯ ದ್ವಾರದ ಎದುರು, ಕನಿಷ್ಠ 30 ಇಂಚು ಎತ್ತರದ ಟೇಬಲ್ ಅಥವಾ ಸ್ಟ್ಯಾಂಡ್ ಮೇಲೆ ಇಡಬೇಕು. ನೆಲದ ಮೇಲೆ ಅಥವಾ ಬೆಡ್‌ರೂಮ್, ಬಾತ್‌ರೂಮ್‌ಗಳ ಬಳಿ ಇಡಬಾರದು.

Image credits: AI Generated images
Kannada

ಕುಬೇರ ಯಂತ್ರ / ಲಕ್ಷ್ಮಿ ಯಂತ್ರ

ಸಂಪತ್ತಿನ ಅಧಿಪತಿ ಕುಬೇರನ ಅನುಗ್ರಹಕ್ಕಾಗಿ ಈ ಯಂತ್ರವನ್ನು ಮನೆಯಲ್ಲಿ ಸ್ಥಾಪಿಸಲಾಗುತ್ತದೆ. ಉತ್ತರ ದಿಕ್ಕು ಧನಕ್ಕೆ ಅಧಿಪತಿಯಾಗಿರುವುದರಿಂದ, ಕುಬೇರ ಯಂತ್ರವನ್ನು ಪೂಜಾ ಕೋಣೆಯ ಉತ್ತರ ಗೋಡೆ/ಗಲ್ಲಾ ಪೆಟ್ಟಿಗೆಯಲ್ಲಿಡಿ

Image credits: AI Generated images
Kannada

ಶಂಖ

ಶಂಖವನ್ನು ಲಕ್ಷ್ಮಿ ಸಹೋದರಿ ಅಂತಾರೆ.   ಮನೆಯಲ್ಲಿನ ದುಷ್ಟಶಕ್ತಿ ಮತ್ತು ವಾಸ್ತು ದೋಷಗಳನ್ನು ಓಡಿಸುತ್ತವೆ. ಪೂಜಾ ಕೋಣೆಯ ಈಶಾನ್ಯ ದಿಕ್ಕಿನಲ್ಲಿ ಅಕ್ಕಿ ಅಥವಾ ನೀರಿನ ಮೇಲೆ ಶಂಖವನ್ನು ಇಡುವುದು ಶ್ರೇಯಸ್ಕರ.

Image credits: AI Generated images
Kannada

ನವಿಲುಗರಿ

ನವಿಲುಗರಿಗಳು ಲಕ್ಷ್ಮಿ, ಶ್ರೀಕೃಷ್ಣನ ಅನುಗ್ರಹ ತರುತ್ತವೆ.  ರಾಹು ದೋಷ, ಆರ್ಥಿಕ ಸಂಕಷ್ಟ ನಿವಾರಿಸಲು ಸಹಾಯ ಮಾಡುತ್ತವೆ. ಮನೆಯ ಆಗ್ನೇಯ ಮೂಲೆಯಲ್ಲಿ ಇಡುವುದರಿಂದ ಧನಾಕರ್ಷಣೆ ಹೆಚ್ಚು. ಪೂಜಾ ಕೋಣೆಯಲ್ಲಿ ಉತ್ತಮ ಫಲಿತಾಂಶ

Image credits: AI Generated images
Kannada

ಮನಿ ಪ್ಲಾಂಟ್

ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಇದನ್ನು ಯಾವಾಗಲೂ ಮನೆಯ ಆಗ್ನೇಯ (South-East) ದಿಕ್ಕಿನಲ್ಲಿ ಇಡಬೇಕು. 

Image credits: AI Generated images

Rose Plant Vastu: ಮನೆಯಲ್ಲಿ ಗುಲಾಬಿ ಗಿಡ ಇದ್ಯಾ? ವಾಸ್ತು ಪ್ರಕಾರ ಈ ತಪ್ಪುಗಳನ್ನು ಮಾಡಲೇಬೇಡಿ

Vastu Tips: ಅದೃಷ್ಟ ಬರಬೇಕಾ? ಹಾಗಿದ್ರೆ ಮನೆಯ ಹೊರಗೆ ಈ ದಿಕ್ಕಿನಲ್ಲಿ ದೀಪ ಹಚ್ಚಿ!

ತುಳಸಿ ಗಿಡ ನೀಡುತ್ತೆ ಈ 5 ಎಚ್ಚರಿಕೆ.. ಇಂದೇ ಗಮನಿಸಿ

ಮನಿ ಪ್ಲಾಂಟ್ ಮಾತ್ರವಲ್ಲ, ಈ 4 ಗಿಡದಲ್ಲಿ ಒಂದು ತಂದ್ರೂ ಲಾಭ