Kannada

ಜಸ್ಟ್ 60 ಸೆಕೆಂಡ್ಸ್.. ಎನಿರ್ಜಿ ಬೂಸ್ಟ್

ದಿನನಿತ್ಯದ ಸಣ್ಣ ಅಭ್ಯಾಸಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ.

Kannada

1. 4-7-8 ಉಸಿರಾಟದ ತಂತ್ರ ಬಳಸಿ

ಈ ಉಸಿರಾಟದ ತಂತ್ರ ನಿಮ್ಮ ಹೃದಯದ ಬಡಿತವನ್ನು ನಿಧಾನಗೊಳಿಸಿ, ತಕ್ಷಣವೇ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ನರಮಂಡಲಕ್ಕೆ ಶಾಂತಿಯ ಸಂದೇಶ ರವಾನಿಸಿ, ಮನಸ್ಸನ್ನು ನಿರಾಳವಾಗಿಸುತ್ತದೆ. 

Image credits: Freepik
Kannada

2. 30 ಸೆಕೆಂಡ್ ಬಿಸಿಲಿಗೆ ಮೈಯೊಡ್ಡಿ

ಬೆಳಗಿನ ಎಳೆಬಿಸಿಲು ನಿಮ್ಮ ದೇಹದಲ್ಲಿ 'ಸೆರೊಟೋನಿನ್' ಎಂಬ ಹಾರ್ಮೋನ್ ಹೆಚ್ಚಿಸುತ್ತದೆ. ಕಿಟಕಿ ಬಳಿ ನಿಂತು ಸ್ವಲ್ಪ ಹೊತ್ತು ಸೂರ್ಯನ ಬೆಳಕಿಗೆ ಮೈಯೊಡ್ಡಿದರೂ ನಿಮ್ಮ ಮೂಡ್ ತಕ್ಷಣವೇ ಫ್ರೆಶ್ ಆಗುತ್ತದೆ.

Image credits: Freepik
Kannada

3. ಭುಜಗಳ ರಿಲ್ಯಾಕ್ಸ್

ಭುಜಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ತಿರುಗಿಸುವುದರಿಂದ ಬೆನ್ನಿನ ಮೇಲ್ಭಾಗದ ಒತ್ತಡ ಕಡಿಮೆಯಾಗುತ್ತದೆ. ಕೇವಲ 10 ಸೆಕೆಂಡ್‌ಗಳ ಈ ವ್ಯಾಯಾಮ ನಿಮ್ಮ ದೇಹವನ್ನು ಹಗುರಗೊಳಿಸುತ್ತದೆ.

Image credits: Freepik
Kannada

4. ಒಂದು ಲೋಟ ನೀರು

ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಸುಸ್ತು ಮತ್ತು ಕಿರಿಕಿರಿ ಶುರುವಾಗುತ್ತದೆ. ಒಂದು ಲೋಟ ನೀರು ಕುಡಿಯುವುದರಿಂದ ನಿಮ್ಮ ದೇಹ ರಿಫ್ರೆಶ್ ಆಗಿ, ಮೆದುಳು ಚುರುಕಾಗುತ್ತದೆ.

Image credits: Freepik
Kannada

5. ನಿಮ್ಮನ್ನು ನೀವೇ ಹೊಗಳಿಕೊಳ್ಳಿ

ಇಂದು ನಾನು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ ಎಂಬ ಸಣ್ಣ ಪಾಸಿಟಿವ್ ಮಾತು ನಿಮ್ಮ ಯೋಚನಾ ಲಹರಿಯನ್ನೇ ಬದಲಾಯಿಸುತ್ತದೆ. ಈ ಅಭ್ಯಾಸ ದಿನವಿಡೀ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

Image credits: Freepik
Kannada

6. ನಿಮಗಿಷ್ಟವಾದ ಪರಿಮಳ ತೆಗೆದುಕೊಳ್ಳಿ

ಕಾಫಿ, ಪರ್ಫ್ಯೂಮ್ ಅಥವಾ ಎಸೆನ್ಷಿಯಲ್ ಆಯಿಲ್‌ನ ಪರಿಮಳ ಮೆದುಳಿನ ಭಾವನಾತ್ಮಕ ಕೇಂದ್ರವನ್ನು ಆಕ್ಟಿವ್ ಮಾಡುತ್ತದೆ. ಇಷ್ಟವಾದ ಪರಿಮಳಗಳು ತಕ್ಷಣವೇ ಮನಸ್ಸಿಗೆ ನೆಮ್ಮದಿ ಮತ್ತು ಪಾಸಿಟಿವಿಟಿ ನೀಡುತ್ತವೆ.

Image credits: Freepik
Kannada

7. ಕೈ ಮತ್ತು ಬೆರಳುಗಳನ್ನು ಸ್ಟ್ರೆಚ್ ಮಾಡಿ

ಮೊಬೈಲ್ ಬಳಕೆಯಿಂದ ನಮ್ಮ ಅಂಗೈ ಮತ್ತು ಮುಂದೋಳುಗಳಲ್ಲಿ ಹೆಚ್ಚು ಆಯಾಸವಾಗಿರುತ್ತದೆ. ಕೈಗಳನ್ನು ಸ್ಟ್ರೆಚ್ ಮಾಡುವುದರಿಂದ ರಕ್ತಸಂಚಾರ ಹೆಚ್ಚಾಗಿ, ತಕ್ಷಣವೇ ರಿಲ್ಯಾಕ್ಸ್ ಅನಿಸುತ್ತದೆ.

Image credits: Freepik
Kannada

8. ನಿಮ್ಮ ಭಂಗಿಯನ್ನು ಬದಲಾಯಿಸಿ

ನೇರವಾಗಿ ನಿಲ್ಲುವುದು ಅಥವಾ ಕುಳಿತುಕೊಳ್ಳುವುದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸರಿಯಾದ ಭಂಗಿಯಿಂದ ದೇಹದಲ್ಲಿ ಆಮ್ಲಜನಕದ ಹರಿವು ಸುಧಾರಿಸಿ, ಮೂಡ್ ಬೇಗನೆ ಬದಲಾಗುತ್ತದೆ.

Image credits: Freepik
Kannada

9. 20 ಸೆಕೆಂಡ್ ಸ್ಕ್ರೀನ್‌ನಿಂದ ದೂರವಿರಿ

ಕೆಲಸದ ನಡುವೆ ಸಣ್ಣ ಬ್ರೇಕ್ ತೆಗೆದುಕೊಳ್ಳುವುದು ಡಿಜಿಟಲ್ ಆಯಾಸವನ್ನು ಕಡಿಮೆ ಮಾಡುತ್ತದೆ. 20 ಸೆಕೆಂಡ್ ಸ್ಕ್ರೀನ್‌ನಿಂದ ಕಣ್ಣು ತೆಗೆಯುವುದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿ, ಕಿರಿಕಿರಿ ತಪ್ಪಿಸುತ್ತದೆ.

Image credits: Freepik
Kannada

10. ಒಳ್ಳೆಯ ವಿಚಾರ ನೆನಪಿಸಿಕೊಳ್ಳಿ

ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಳ್ಳುವುದರಿಂದ ಮೆದುಳಿನಲ್ಲಿ ಡೋಪಮೈನ್ ಬಿಡುಗಡೆಯಾಗುತ್ತದೆ. ಎಷ್ಟೇ ಒತ್ತಡದ ದಿನವಾಗಿದ್ದರೂ, ಈ ಸಣ್ಣ ಅಭ್ಯಾಸ ನಿಮ್ಮ ಮನಸ್ಸಿಗೆ ತಕ್ಷಣದ ಖುಷಿ ನೀಡುತ್ತದೆ.

Image credits: Freepik

Dark Circles: ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್‌ಗೆ ಗುಡ್‌ಬೈ ಹೇಳಿ.. ಈ ಮನೆಮದ್ದು ಸಾಕು!

Kurta Sets: ಇಂದಿನ ಯುವತಿಯರು ಇಷ್ಟಪಡುವ ಟ್ರೆಂಡಿ ಕುರ್ತಾ ಸೆಟ್‌ಗಳು!

Gold Rings: 2 ಗ್ರಾಂನಲ್ಲಿ ಸಿಗುವ ಬ್ಯೂಟಿಫುಲ್ ಸಿಂಗಲ್ ಸ್ಟೋನ್ ಉಂಗುರಗಳಿವು!

ಕೇವಲ 5 ಗ್ರಾಂನಲ್ಲಿ ಚಿನ್ನದ ಬ್ರೇಸ್‌ಲೆಟ್; ಇಲ್ಲಿದೆ ಸೂಪರ್ ಡಿಸೈನ್ಸ್