Kannada

ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಇವೇ

ಪ್ರಪಂಚದಾದ್ಯಂತ ಅನೇಕ ರೀತಿಯ ಹಾವುಗಳಿವೆ. ಅವುಗಳಲ್ಲಿ ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ಹಾವುಗಳು ಯಾವುವು ಎಂಬುದನ್ನು ನಾವಿಂದು ತಿಳಿಯೋಣ.

Kannada

ಬ್ಲಾಕ್ ಮಾಂಬಾ

ಬ್ಲಾಕ್ ಮಾಂಬಾ ಅತ್ಯಂತ ಅಪಾಯಕಾರಿ ಹಾವು. ಎಲಾಪಿಡೆ (Elapidae) ಕುಟುಂಬಕ್ಕೆ ಸೇರಿದ ಈ ಹಾವು ಕಚ್ಚಿದರೆ, ಕೇವಲ ಕೆಲವೇ ನಿಮಿಷಗಳಲ್ಲಿ ಮನುಷ್ಯ ಪ್ರಾಣ ಬಿಡುತ್ತಾನೆ.

Image credits: Getty
Kannada

ಬೂಮ್‌ಸ್ಲ್ಯಾಂಗ್

ಬೂಮ್‌ಸ್ಲ್ಯಾಂಗ್ (Boomslang) ಕೊಲುಬ್ರಿಡೆ (Colubridae) ಕುಟುಂಬಕ್ಕೆ ಸೇರಿದ ಅತ್ಯಂತ ವಿಷಕಾರಿ ಹಾವು. ಇದು ಕಚ್ಚಿದ ತಕ್ಷಣ ದೇಹದಲ್ಲಿ ತೀವ್ರ ರಕ್ತಸ್ರಾವ ಶುರುವಾಗುತ್ತದೆ.

Image credits: Getty
Kannada

ಕಾಳಿಂಗ ಸರ್ಪ

ಕಾಳಿಂಗ ಸರ್ಪ (King Cobra) ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು. ಇದು ವಿಷಕಾರಿ ಹಾವುಗಳ ಪೈಕಿ ಅತಿ ಉದ್ದವಾದ ಹಾವು ಎಂಬ ಹೆಗ್ಗಳಿಕೆ ಹೊಂದಿದೆ.

Image credits: Getty
Kannada

ಈಸ್ಟರ್ನ್ ಡೈಮಂಡ್‌ಬ್ಯಾಕ್

ಈಸ್ಟರ್ನ್ ಡೈಮಂಡ್‌ಬ್ಯಾಕ್ (Eastern Diamondback) ಹಾವನ್ನು ಕೂಡ ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

Image credits: Getty
Kannada

ಗಬೂನ್ ವೈಪರ್

ಗಬೂನ್ ವೈಪರ್ (Gaboon Viper) ಕೂಡ ಅತಿ ಹೆಚ್ಚು ವಿಷಕಾರಿ. ಇದು ಕಚ್ಚಿದಾಗ ಎಷ್ಟು ಪ್ರಮಾಣದ ವಿಷವನ್ನು ದೇಹಕ್ಕೆ ಸೇರಿಸುತ್ತದೆ ಎಂಬುದರ ಮೇಲೆ ಮನುಷ್ಯನ ಪ್ರಾಣ ನಿಂತಿರುತ್ತದೆ.

Image credits: Getty
Kannada

ಇನ್‌ಲ್ಯಾಂಡ್ ತೈಪಾನ್

ಇನ್‌ಲ್ಯಾಂಡ್ ತೈಪಾನ್ (Inland Taipan) ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಹಾವು. ಈ ಅಪಾಯಕಾರಿ ಹಾವು ಹೆಚ್ಚಾಗಿ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ.

Image credits: Getty

Cauliflower Benefits: ಹೂಕೋಸು ತಿನ್ನಲ್ವಾ? ಹಾಗಾದ್ರೆ ಈ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಮಿಸ್ ಮಾಡಿಕೊಳ್ತೀರಾ!

ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಪರಿಹಾರಕ್ಕೆ ಈ ಆಹಾರ ಸೇವಿಸಿ

ಕೇವಲ 1 ಗ್ರಾಂ ಚಿನ್ನದ ಕಿವಿಯೋಲೆ ಡಿಸೈನ್ಸ್, ನೋಡಿದ್ರೆ ಫಿದಾ ಆಗ್ತೀರಾ!

ಪ್ರತಿಯೊಬ್ಬ ಮಹಿಳೆಯರ ಹ್ಯಾಂಡ್‌ಬ್ಯಾಗ್‌ನಲ್ಲಿ ಇರಲೇಬೇಕಾದ 5 ವಸ್ತುಗಳು