Kannada

ಪಾಸಿಟಿವ್ ಎನರ್ಜಿ ನೀಡುತ್ತೆ

ಮನಿ ಪ್ಲಾಂಟ್ ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಪಾಸಿಟಿವ್ ಎನರ್ಜಿ ನೀಡುವ ಗಿಡವೂ ಹೌದು. ವಸಂತ ಕಾಲದಲ್ಲಿ ಈ ಗಿಡ ವೇಗವಾಗಿ ಚಿಗುರುತ್ತದೆ.

Kannada

ವೇಗವಾಗಿ ಬೆಳೆಯುತ್ತೆ

ಒಂದು ವೇಳೆ ನಿಮ್ಮ ಗಿಡದ ಬೆಳವಣಿಗೆ ಕುಂಠಿತವಾಗಿದ್ದರೆ ಕೇವಲ ಗೊಬ್ಬರವಷ್ಟೇ ಅಲ್ಲದೆ, ಮನೆಯಲ್ಲಿರುವ ಈ ಕೆಳಗಿನ ಪದಾರ್ಥಗಳನ್ನು ಗಿಡದ ಬುಡಕ್ಕೆ ಹಾಕುವ ಮೂಲಕ ಅದರ ವೇಗವನ್ನು ಹೆಚ್ಚಿಸಬಹುದು.

Image credits: Getty
Kannada

ಕಾಫಿ ಪುಡಿಯ ನೀರು

ಕಾಫಿಯಲ್ಲಿರುವ ಆಂಟಿಆಕ್ಸಿಡೆಂಟ್‌ ಮನಿ ಪ್ಲಾಂಟ್ ಬೆಳವಣಿಗೆ ವೇಗಗೊಳಿಸುತ್ತೆ. 1 ಲೀಟರ್ ನೀರಿಗೆ 1 ಚಮಚ ಕಾಫಿ ಪುಡಿ ಬೆರೆಸಿ ಗಿಡದ ಬುಡಕ್ಕೆ ಹಾಕಿ. 10-15 ದಿನಕ್ಕೊಮ್ಮೆ ಹೀಗೆ ಮಾಡಿದರೆ ಫಾಸ್ಟ್ ಆಗಿ ಬೆಳೆಯುತ್ತದೆ.  

Image credits: Instagram
Kannada

ಸೋಡಾ ನೀರು

ಅಡುಗೆ ಸೋಡಾ ಮಿಶ್ರಿತ ನೀರನ್ನು ಹಾಕುವುದರಿಂದ ಗಿಡದ ಬೇರುಗಳಿಗೆ ಶಕ್ತಿ ಸಿಗುತ್ತದೆ. 1 ಮಗ್ ನೀರಿಗೆ 1 ಚಮಚ ಅಡುಗೆ ಸೋಡಾ ಬೆರೆಸಿ ಗಿಡದ ಬುಡಕ್ಕೆ ಹಾಕಿ. ಕೆಲವೇ ದಿನಗಳಲ್ಲಿ ಹೊಸ ಎಲೆಗಳು ಬರಲು ಪ್ರಾರಂಭವಾಗುತ್ತವೆ.

Image credits: Social Media
Kannada

ಅರಿಶಿನದ ನೀರು

ಗಿಡದ ಬೇರುಗಳಿಗೆ ಶಿಲೀಂಧ್ರ ತಗುಲಿದರೆ ಬೆಳವಣಿಗೆ ನಿಲ್ಲುತ್ತದೆ. ಅರಿಶಿನವು ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ. ಅರಿಶಿನ ಮಿಶ್ರಿತ ನೀರನ್ನು ಹಾಕುವುದರಿಂದ ರೋಗಾಣುಗಳು ನಾಶವಾಗಿ ಗಿಡ ಆರೋಗ್ಯವಾಗಿ ಬೆಳೆಯುತ್ತದೆ.

Image credits: Getty
Kannada

ಎಪ್ಸಮ್ ಸಾಲ್ಟ್

ಎಪ್ಸಮ್ ಸಾಲ್ಟ್ ಅತ್ಯುತ್ತಮ ಟಾನಿಕ್ ಇದ್ದಂತೆ. ನೀರಿನಲ್ಲಿ ಬೆರೆಸಿ ಗಿಡದ ಬುಡಕ್ಕೆ ಹಾಕಿ. ಇದರ ಜೊತೆಗೆ ಮಣ್ಣನ್ನು ಸ್ವಲ್ಪ ಸಡಿಲಗೊಳಿಸಿ ವರ್ಮಿಕಾಂಪೋಸ್ಟ್ ಗೊಬ್ಬರ ಹಾಕಿದರೆ ಬೆಳವಣಿಗೆಗೆ ಹೆಚ್ಚಿನ ವೇಗ ಸಿಗುತ್ತದೆ.

Image credits: Pinterest
Kannada

ಟೀ ಪುಡಿಯ ಬಳಕೆ

ಟೀ ಪುಡಿಯು ಮನಿ ಪ್ಲಾಂಟ್‌ಗೆ ಉತ್ತಮ ಜೈವಿಕ ಗೊಬ್ಬರ. ಟೀ ಮಾಡಿದ ನಂತರ ಉಳಿಯುವ ಪುಡಿಯನ್ನು ತೊಳೆದು ಗಿಡಕ್ಕೆ ಹಾಕಬಹುದು. ಟೀ ಪುಡಿ ಬೆರೆಸಿದ ನೀರನ್ನೂ ಹಾಕಬಹುದು. ಇದು ಗಿಡವನ್ನು ಸದಾ ಹಸಿರಾಗಿರುವಂತೆ ಮಾಡುತ್ತದೆ. 

Image credits: Social Media
Kannada

ಅತಿಯಾಗಿ ಹಾಕಬೇಡಿ

ಮನಿ ಪ್ಲಾಂಟ್‌ಗೆ ಅತಿಯಾಗಿ ನೀರು ಹಾಕಬೇಡಿ. ಸರಿಯಾದ ಪ್ರಮಾಣದ ಸೂರ್ಯನ ಬೆಳಕು ಮತ್ತು ಮೇಲೆ ತಿಳಿಸಿದ ಪೋಷಕಾಂಶಗಳನ್ನು ನೀಡಿದರೆ ನಿಮ್ಮ ಮನೆಯ ಮನಿ ಪ್ಲಾಂಟ್ ಅತಿ ಕಡಿಮೆ ಸಮಯದಲ್ಲಿ ಸೊಂಪಾಗಿ ಬೆಳೆಯುತ್ತದೆ.

Image credits: unsplans

ಬ್ರೈನ್ ಟ್ಯೂಮರ್ ಪತ್ತೆಗೆ ಬಂತು ಹೊಸ ಬ್ಲಡ್ ಟೆಸ್ಟ್! ಶೇ. 90ರಷ್ಟು ನಿಖರ ಫಲಿತಾಂಶ

ಸಖತ್ ಟ್ರೆಂಡಿಂಗ್‌ನಲ್ಲಿರೋ 6 ಅಫ್ಘಾನಿ ಸಲ್ವಾರ್ ಸೂಟ್: ರೆಡಿಮೇಡ್‌ನಲ್ಲೂ ಲಭ್ಯ!

2 ಗ್ರಾಂ ಚಿನ್ನದಲ್ಲಿ ಪೆಟಲ್ ಇಯರಿಂಗ್ಸ್.. ಮಗಳಿಗಾಗಿ ಇಲ್ಲಿದೆ ಕ್ಯೂಟ್ ಡಿಸೈನ್ಸ್!

ಸೊಂಟ ಸಣ್ಣ ಕಾಣಬೇಕೇ? ಇಲ್ಲಿವೆ ದಿವ್ಯಾಂಕಾರ 7 ಸೀರೆ ಸ್ಟೈಲಿಂಗ್ ಸೀಕ್ರೆಟ್ಸ್ !