Kannada

ಬಹಳ ಬೇಗನೆ ಆಕರ್ಷಿಸುತ್ತೆ

ಜೇನುತುಪ್ಪವು ತನ್ನ ಸಿಹಿಯಾದ ಸುವಾಸನೆಯಿಂದ ಇರುವೆಗಳನ್ನು ಬಹಳ ಬೇಗನೆ ಆಕರ್ಷಿಸುತ್ತದೆ. ಇನ್ನು ಇರುವೆಗಳು ತಮ್ಮ ಸಂವೇದನಾ ಶಕ್ತಿಯ ಮೂಲಕ ಅತಿ ದೂರದಲ್ಲಿರುವ ಸಿಹಿಯನ್ನೂ ಪತ್ತೆ ಹಚ್ಚಬಲ್ಲವು.

Kannada

ಇರುವೆಗಳಿಗೆ ಇಷ್ಟವಾಗಲ್ಲ

ಜೇನುತುಪ್ಪದ ಡಬ್ಬಿಯೊಳಗೆ 4-5 ಕಾಳುಮೆಣಸು ಹಾಕಿದಾಗ, ಆ ಘಾಟು ಜೇನುತುಪ್ಪದ ಸುವಾಸನೆ ಇರುವೆಗಳಿಗೆ ತಲುಪದಂತೆ ತಡೆಯುತ್ತದೆ. ಇರುವೆಗಳಿಗೆ ಈ ಘಾಟು ಇಷ್ಟವಾಗಲ್ಲ, ಹಾಗಾಗಿ ಬಾಟಲಿಯ ಹತ್ತಿರ ಸುಳಿಯಲು ಹೆದರುತ್ತವೆ.    

Image credits: Getty
Kannada

ಜೇನುತುಪ್ಪದ ರುಚಿ ಬದಲಾಗಲ್ಲ

ಕಾಳುಮೆಣಸನ್ನು ನೀವು ಇಡಿಯಾಗಿ (ಪುಡಿ ಮಾಡದೆ) ಹಾಕುವುದರಿಂದ, ಅದು ಜೇನುತುಪ್ಪದ ಜೊತೆ ಬೆರೆಯುವುದಿಲ್ಲ. ಇದರಿಂದ ಜೇನುತುಪ್ಪದ ಅಸಲಿ ರುಚಿ ಅಥವಾ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

Image credits: Our own
Kannada

ದೀರ್ಘಕಾಲದ ರಕ್ಷಣೆ

ಒಮ್ಮೆ ಹಾಕಿದ ಕಾಳುಮೆಣಸು ದೀರ್ಘಕಾಲದವರೆಗೆ ತನ್ನ ಘಾಟನ್ನು ಉಳಿಸಿಕೊಳ್ಳುವುದರಿಂದ ಪದೇ ಪದೇ ಬದಲಿಸುವ ಅಗತ್ಯವಿರುವುದಿಲ್ಲ.

Image credits: Getty
Kannada

ಲವಂಗದ ಬಳಕೆ

ಕಾಳುಮೆಣಸಿನ ಬದಲಾಗಿ 2-3 ಲವಂಗಗಳನ್ನು ಕೂಡ ಬಳಸಬಹುದು. ಲವಂಗದ ಸುವಾಸನೆಯೂ ಇರುವೆಗಳಿಗೆ ಆಗಿಬರುವುದಿಲ್ಲ.

Image credits: Getty
Kannada

ಬಾಟಲಿಯ ಅಂಚು ಸ್ವಚ್ಛವಿರಲಿ

ಜೇನುತುಪ್ಪ ಬಳಸಿದ ನಂತರ ಬಾಟಲಿಯ ಬಾಯಿ ಮತ್ತು ಅಂಚುಗಳಲ್ಲಿ ಜೇನುತುಪ್ಪದ ಹನಿಗಳು ಉಳಿಯದಂತೆ ಒದ್ದೆ ಬಟ್ಟೆಯಿಂದ ಒರೆಸಿ. ಇದು ಇರುವೆಗಳನ್ನು ಆಹ್ವಾನಿಸುವುದನ್ನು ತಪ್ಪಿಸುತ್ತದೆ.

Image credits: Getty
Kannada

ಅರಿಶಿನ

ಬಾಟಲಿಯನ್ನು ಇಡುವ ಜಾಗದ ಸುತ್ತ ಸ್ವಲ್ಪ ಅರಿಶಿನ ಪುಡಿ ಹಾಕಿದರೂ ಇರುವೆಗಳು ಬರುವುದಿಲ್ಲ.

Image credits: Getty

ಕಡ್ಡಿಯಿಂದ ಕರಿಬೇವು ಗಿಡ ಬೆಳೆಸುವ ಸಿಂಪಲ್ ಸ್ಟೆಪ್ಸ್

ಹಣ್ಣುಗಳ ಮೇಲೆ ಈ ಸ್ಟಿಕ್ಕರ್, ನಂಬರ್ ಯಾಕಿರುತ್ತೆ? ಯೋಚಿಸಿದ್ದೀರಾ?

ಸಮ್ಮರ್ ವೆಕೇಷನ್‌ನಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಟ್ರೈ ಮಾಡಿ ಈ 6 ಡ್ರೆಸ್‌!

ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!