Kannada

ಕೇವಲ ಒಂದು ನಿಮಿಷದಲ್ಲಿ ಇರುವೆಗಳನ್ನು ಓಡಿಸಲು ಟಿಪ್ಸ್!

ಮನೆಯಲ್ಲಿ ಇರುವೆಗಳ ಕಾಟ ಹೆಚ್ಚಾಗಿದ್ದರೆ, ಈ ಸುಲಭವಾದ ಮನೆಮದ್ದುಗಳನ್ನು ಬಳಸಿ ನೋಡಿ.

Kannada

ಕಾಫಿ ಪುಡಿ ಮತ್ತು ನಿಂಬೆ ರಸ

ಒಂದು ಬಟ್ಟಲಿನಲ್ಲಿ ಸ್ವಲ್ಪ ಕಾಫಿ ಪುಡಿಗೆ ನಿಂಬೆ ರಸವನ್ನು ಬೆರೆಸಿ. ಈ ಮಿಶ್ರಣವನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಇರುವೆಗಳು ಒಳಗೆ ಬರುವುದಿಲ್ಲ.

Image credits: Getty
Kannada

ಪುದೀನಾ ಎಲೆಗಳು

ಇರುವೆಗಳಿಗೆ ಪುದೀನಾದ ವಾಸನೆ ಇಷ್ಟವಾಗುವುದಿಲ್ಲ. ಹಾಗಾಗಿ, ಮನೆಯ ಮೂಲೆಗಳಲ್ಲಿ ತಾಜಾ ಪುದೀನಾ ಎಲೆಗಳನ್ನು ಇಡುವುದರಿಂದ ಇರುವೆಗಳ ಕಾಟ ತಪ್ಪಿಸಬಹುದು.

Image credits: Freepik
Kannada

ಚಕ್ಕೆ ಪುಡಿ (ದಾಲ್ಚಿನ್ನಿ)

ಬಾಗಿಲಿನ ಸಂದುಗಳು, ಕಿಟಕಿಗಳು ಮತ್ತು ಕಪಾಟುಗಳ ಬಳಿ ಚಕ್ಕೆ ಪುಡಿಯನ್ನು ಉದುರಿಸಿ. ಇದರ ಘಾಟು ವಾಸನೆಗೆ ಇರುವೆಗಳು ಆ ಜಾಗದತ್ತ ಸುಳಿಯುವುದಿಲ್ಲ.

Image credits: Pinterest
Kannada

ನಿಂಬೆ ರಸ ಮತ್ತು ನೀರು

ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಇರುವೆಗಳನ್ನು ದೂರವಿಡುತ್ತದೆ. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ನಿಂಬೆ ರಸ ಸೇರಿಸಿ, ಇರುವೆಗಳು ಬರುವ ಜಾಗಗಳಿಗೆ ಸಿಂಪಡಿಸಿ.

Image credits: pinterest
Kannada

ಬಿಳಿ ವಿನೆಗರ್

ಸ್ಪ್ರೇ ಬಾಟಲಿಯಲ್ಲಿ ಸಮಪ್ರಮಾಣದ ನೀರು ಮತ್ತು ಬಿಳಿ ವಿನೆಗರ್ ಬೆರೆಸಿ. ಇರುವೆಗಳು ಹೆಚ್ಚಾಗಿ ಓಡಾಡುವ ಜಾಗಗಳಿಗೆ ಇದನ್ನು ಸ್ಪ್ರೇ ಮಾಡಿದರೆ ಅವು ತಕ್ಷಣ ಓಡಿಹೋಗುತ್ತವೆ.

Image credits: social media
Kannada

ಇರುವೆ ನಾಶಕ ಪುಡಿ

ಮಾರುಕಟ್ಟೆಯಲ್ಲಿ ಸಿಗುವ ಇರುವೆ ನಾಶಕ ಪುಡಿಯನ್ನು ಸಹ ನೀವು ಬಳಸಬಹುದು. ಇದು ಮನೆಯಿಂದ ಇರುವೆಗಳನ್ನು ಶಾಶ್ವತವಾಗಿ ಓಡಿಸಲು ಸಹಾಯ ಮಾಡುತ್ತದೆ.

Image credits: Freepik

ನವರಾತ್ರಿ ಬಣ್ಣಗಳ ಅನುಸಾರ ನೀವು ಟ್ರೈ ಮಾಡಿ ಅನುಪಮಾ ಗೌಡ ಸೀರೆ-ಬ್ಲೌಸ್ ಸ್ಟೈಲ್

Venomous Snakes: ಕಚ್ಚಿದರೆ ಕೆಲವೇ ನಿಮಿಷಗಳಲ್ಲಿ ಸಾವು: ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಇವೇ

Cauliflower Benefits: ಹೂಕೋಸು ತಿನ್ನಲ್ವಾ? ಹಾಗಾದ್ರೆ ಈ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಮಿಸ್ ಮಾಡಿಕೊಳ್ತೀರಾ!

ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಪರಿಹಾರಕ್ಕೆ ಈ ಆಹಾರ ಸೇವಿಸಿ