Kannada

ಸೌತೆಕಾಯಿ

ಮನೆಯಲ್ಲೇ ಸೌತೆಕಾಯಿ ಬೆಳೆದು ಉತ್ತಮ ಇಳುವರಿ ಪಡೆಯಬೇಕೆ? ಹಾಗಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

Kannada

ಸೂರ್ಯನ ಬೆಳಕು

ಸೌತೆಕಾಯಿ ಗಿಡಕ್ಕೆ ಸೂರ್ಯನ ಬೆಳಕು ಚೆನ್ನಾಗಿ ಬೀಳಬೇಕು. ನೀರು ನಿಲ್ಲದ ಜಾಗವನ್ನು ಆಯ್ಕೆ ಮಾಡಿ. ಮಣ್ಣನ್ನು ಹದ ಮಾಡಿ, ಅದಕ್ಕೆ ಸಗಣಿ ಗೊಬ್ಬರ, ಬೇವಿನ ಹಿಂಡಿ ಮತ್ತು ಮೂಳೆ ಪುಡಿ ಸೇರಿಸಿ ಪಾತಿ ಮಾಡಿ.

Image credits: pixabay
Kannada

ಒಂದೊಂದು ಪಾತಿಗೆ 3-4 ಬೀಜ

ಬೀಜಗಳನ್ನು 4-5 ಅಡಿ ಅಂತರದಲ್ಲಿ ಸಾಲಾಗಿ ನೆಡಿ. ಪ್ರತಿ ಪಾತಿಗೆ 3-4 ಬೀಜಗಳನ್ನು ಹಾಕಿ. ಬಿತ್ತುವ ಮುನ್ನ ಬೀಜಗಳನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದರೆ ಬೇಗನೆ ಮೊಳಕೆಯೊಡೆಯುತ್ತವೆ.

Image credits: pixabay
Kannada

ಹೊದಿಕೆ ಹಾಕಿ

ಗಿಡಗಳು ಬೆಳೆಯಲು ಪ್ರಾರಂಭಿಸಿದಾಗ, ಪಾತಿಯ ಸುತ್ತಲೂ ಹಸಿರು ಎಲೆಗಳು ಅಥವಾ ಒಣಗಿದ ಎಲೆಗಳನ್ನು ಬಳಸಿ ಹೊದಿಕೆ (ಮಲ್ಚಿಂಗ್) ಮಾಡಿ. ಇದರಿಂದ ತೇವಾಂಶ ಉಳಿಯುತ್ತದೆ.

Image credits: pixabay
Kannada

ಚಪ್ಪರ ಹಾಕಿ

ಬಳ್ಳಿಗಳು ಹಬ್ಬಲು ಶುರುವಾದಾಗ ಚಪ್ಪರ ಹಾಕಿ ಅಥವಾ ಹಗ್ಗ ಕಟ್ಟಿ ಮೇಲಕ್ಕೆ ಹಬ್ಬಿಸಿ. ಬಳ್ಳಿಗಳು ನೆಲಕ್ಕೆ ತಾಗದಿದ್ದರೆ ಸೌತೆಕಾಯಿಗಳು ಕೊಳೆಯುವುದಿಲ್ಲ.

Image credits: pixabay
Kannada

ನೀರುಣಿಸುವುದು

ಸೌತೆಕಾಯಿ ಗಿಡಕ್ಕೆ ಪ್ರತಿದಿನ ನಿಯಮಿತವಾಗಿ ನೀರುಣಿಸಬೇಕು. ಆದರೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಕಾಯಿ ಬಿಡುವ ಸಮಯದಲ್ಲಿ ನೀರು ಕಡಿಮೆಯಾದರೆ ಸೌತೆಕಾಯಿ ಕಹಿಯಾಗುವ ಸಾಧ್ಯತೆ ಇರುತ್ತದೆ.

Image credits: pixabay
Kannada

ಸಾವಯವ ಗೊಬ್ಬರ

ಬಳ್ಳಿ ಹಬ್ಬುವಾಗ ಕಡಲೆ ಹಿಂಡಿ, ಜೀವಾಮೃತ ಅಥವಾ ಗಂಜಿನೀರಿನಲ್ಲಿ ಸಗಣಿ ಬೆರೆಸಿ ಸಾವಯವ ಗೊಬ್ಬರವಾಗಿ ಗಿಡದ ಬುಡಕ್ಕೆ ಹಾಕಿ.

Image credits: pixabay
Kannada

ಬೂದಿ ಬಳಕೆ

ಗಿಡದಲ್ಲಿ ಕಾಯಿ ಕಟ್ಟುವ ಸಮಯದಲ್ಲಿ ಪಾತಿಯ ಸುತ್ತಲೂ ಬೂದಿಯನ್ನು ಉದುರಿಸಿದರೆ, ಹೆಚ್ಚು ಹೂವು ಮತ್ತು ಕಾಯಿಗಳು ಬಿಡಲು ಸಹಾಯವಾಗುತ್ತದೆ.

Image credits: pixabay
Kannada

ಕವರ್ ಮಾಡಿ ರಕ್ಷಿಸಿ

ಸೌತೆಕಾಯಿ ಕೃಷಿಗೆ ಹಣ್ಣಿನ ನೊಣಗಳ ಕಾಟ ಹೆಚ್ಚು. ಕಾಯಿಗಳು ಚಿಕ್ಕದಾಗಿರುವಾಗಲೇ ಪೇಪರ್ ಕವರ್ ಅಥವಾ ಪ್ಲಾಸ್ಟಿಕ್ ಕವರ್ ಬಳಸಿ ಮುಚ್ಚಿ ರಕ್ಷಿಸಿ.

Image credits: pixabay
Kannada

ಬೇವಿನೆಣ್ಣೆ-ಬೆಳ್ಳುಳ್ಳಿ ಮಿಶ್ರಣ

ಗಿಡಹೇನು ಮತ್ತು ಬಿಳಿ ನೊಣಗಳನ್ನು ತಡೆಯಲು ಶೇ.2ರಷ್ಟು ಬೇವಿನೆಣ್ಣೆ-ಬೆಳ್ಳುಳ್ಳಿ ಮಿಶ್ರಣ ಅಥವಾ ಸೋಪಿನ ದ್ರಾವಣವನ್ನು ವಾರಕ್ಕೊಮ್ಮೆ ಸಂಜೆ ವೇಳೆ ಸಿಂಪಡಿಸಿ.

Image credits: pixabay
Kannada

ಕಟಾವು

ಗಿಡ ಹೂವು ಬಿಡಲು ಪ್ರಾರಂಭಿಸಿದ 45-50 ದಿನಗಳಲ್ಲಿ ಮೊದಲ ಕಟಾವು ಮಾಡಬಹುದು. ಕಟಾವು ತಡವಾದರೆ ಕಾಯಿಗಳು ಬಲಿತು ಗಟ್ಟಿಯಾಗುತ್ತವೆ. ಹೀಗಾಗಿ ಹದಕ್ಕೆ ಬಂದ ತಕ್ಷಣ ಕೀಳಬೇಕು.

Image credits: pixabay

2 ಗ್ರಾಂನಲ್ಲಿ ಸಿಗುವ ಸುಂದರವಾದ ಚಿನ್ನದ ಉಂಗುರ ಡಿಸೈನ್ಸ್‌; ಒಮ್ಮೆ ಟ್ರೈ ಮಾಡಿ..!

Fennel Seeds: ಊಟದ ಬಳಿಕ ಸ್ವಲ್ಪ ಸೋಂಪು ಕಾಳು ತಿಂದ್ರೆ ಬೆಟರ್ ಅನ್ಸುತ್ತೆ!

Kids Brain Food: ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಈ 7 ಆಹಾರಗಳನ್ನು ತಪ್ಪದೇ ಕೊಡಿ

Coriander: ಮಣ್ಣು, ಕುಂಡ ಎರಡೂ ಬೇಡ; ವೇಸ್ಟ್ ಪ್ಲಾಸ್ಟಿಕ್ ಬಾಟಲಿಯಲ್ಲೇ ಗೊಂಚಲು ಕೊತ್ತಂಬರಿ ಬೆಳೆಸಿ!