ಮಾರುಕಟ್ಟೆಯಲ್ಲಿ ಚಕ್ರ ಮೊಗ್ಗಿನ ಬೆಲೆ ಕೆಜಿಗೆ 700 ರಿಂದ 2000 ರೂ. ಇದೆ. ಇದನ್ನು ನೀವು ಸಣ್ಣ ಗಿಡದಲ್ಲಿ ಬೆಳೆಸಬಹುದು. ಬೆಚ್ಚಗಿನ ಮತ್ತು ತೇವಾಂಶ ವಾತಾವರಣದಲ್ಲಿ ಬೆಳೆಯುತ್ತೆ. ಫಸಲು ಬರಲು 4-5 ವರ್ಷ ಬೇಕಾಗಬಹುದು.
ಪ್ರತಿ ಮನೆಯಲ್ಲೂ ಲವಂಗ ಬಳಸುತ್ತಾರೆ. ಇದನ್ನು ಪಾಟ್‌ನಲ್ಲಿ ಬೆಳೆಸಬಹುದು. ಬಿಸಿಲು-ತೇವಾಂಶದ ವಾತಾವರಣ ಸೂಕ್ತ. ಇದು ಉಷ್ಣವಲಯ ಸಸ್ಯವಾಗಿದ್ದು, ಬೆಳೆಯಲು ಸಮಯ ತೆಗೆದುಕೊಳ್ಳುತ್ತದೆ.
ಜಾಯಿಕಾಯಿಯನ್ನು ಬೆಚ್ಚಗಿನ, ತೇವಾಂಶವಿರುವ ವಾತಾವರಣದಲ್ಲಿ ಬೆಳೆಸಬಹುದು. ಈ ಗಿಡ ನೆಡುವಾಗ, ನೀರು ಸರಾಗವಾಗಿ ಹರಿದು ಹೋಗುವ ಮಣ್ಣನ್ನು ಬಳಸಿ. ಫಸಲು ಬರಲು 4-5 ವರ್ಷ ಬೇಕು.
ಕರಿಮೆಣಸನ್ನು 'ಕಪ್ಪು ಬಂಗಾರ' ಅಂತಲೇ ಕರೆಯುತ್ತಾರೆ. ಇದನ್ನು ಪಾಟ್‌ನಲ್ಲಿ ಸುಲಭವಾಗಿ ಬೆಳೆಸಬಹುದು. ಇದನ್ನು ಬೆಳೆಸಲು ಜೇಡಿ ಮಣ್ಣು ಉತ್ತಮ. ಆದರೆ, ಗಿಡ ನೇರ ಸೂರ್ಯನ ಬಿಸಿಲಿಗೆ ಇಡಬೇಡಿ, ಇಲ್ಲದಿದ್ದರೆ ಹಾಳಾಗಬಹುದು.
ದಾಲ್ಚಿನ್ನಿ ಅಥವಾ ಚಕ್ಕೆ ತುಂಬಾ ದುಬಾರಿ. ಇದನ್ನು ಬೆಳೆಸಲು ಮರಳು ಮಿಶ್ರಿತ ಮಣ್ಣು ಮತ್ತು ದಿನಕ್ಕೆ 5 ಗಂಟೆ ಬಿಸಿಲು ಬೇಕು. ಪಾಟ್ ಸ್ವಲ್ಪ ದೊಡ್ಡದಾಗಿರಲಿ. ತಾಳ್ಮೆ ಇರಲಿ, ಇದು ಫಸಲು ನೀಡಲು 3-4 ವರ್ಷ ಬೇಕಾಗುತ್ತದೆ.
ಎಲ್ಲ ಮನೆಯಲ್ಲೂ ಏಲಕ್ಕಿ ಬಳಸುತ್ತಾರೆ. ಇದನ್ನು ಬೆಳೆಸಲು 1 ಅಡಿ ಆಳದ ಪಾಟ್ ಬೇಕು. ಪರೋಕ್ಷ ಸೂರ್ಯನ ಬೆಳಕು ಉತ್ತಮ. ಫಲವತ್ತಾದ ಮಣ್ಣು ಮತ್ತು ಎರೆಹುಳು ಗೊಬ್ಬರ ಬಳಸಿ. ಫಸಲು ನೀಡಲು 1-2 ವರ್ಷ ಬೇಕಾಗಬಹುದು.
ವೆನಿಲ್ಲಾವನ್ನು ಕಟಿಂಗ್ಸ್ ಮೂಲಕ ಬೆಳೆಸಬಹುದು. ಇದನ್ನು ನೆಡಲು ಆರ್ಕಿಡ್ ತೊಗಟೆ, ಕೋಕೋ ಪೀಟ್ ಮತ್ತು ಪರ್ಲೈಟ್ ಮಿಶ್ರಣ ಬಳಸಿ. ಕಡಿಮೆ ಬಿಸಿಲು, ಹೆಚ್ಚು ತೇವಾಂಶ ಬೇಕು. ಕೇಸರಿ ನಂತರದ ಅತಿ ದುಬಾರಿ ಮಸಾಲೆ ಪದಾರ್ಥ.