ವಾಷಿಂಗ್ ಮೆಷಿನ್ ಬಂದಮೇಲೆ ಬಟ್ಟೆ ಒಗೆಯುವ ಕೆಲಸ ಸುಲಭವಾಯಿತು. ವಾಷಿಂಗ್ ಮೆಷಿನ್ ಬಳಸುವಾಗ ಗಮನಿಸಬೇಕಾದ ಅಂಶಗಳೇನು ಎಂದು ತಿಳಿಯೋಣ.
ವಾಷಿಂಗ್ ಮೆಷಿನ್ನಲ್ಲಿ ಅತಿಯಾಗಿ ಸೋಪ್ ಪುಡಿ ಹಾಕುವುದರಿಂದ ಉಪಕರಣದಲ್ಲಿ ಸೋಪು ಜಮೆಯಾಗುತ್ತದೆ ಮತ್ತು ಅದು ಬಟ್ಟೆಯಲ್ಲಿ ಅಂಟಿಕೊಳ್ಳುತ್ತದೆ.
ಮನೆಯಲ್ಲಿ ಸಾಕುವ ಪ್ರಾಣಿಗಳ ಬಟ್ಟೆಗಳನ್ನು ವಾಷಿಂಗ್ ಮೆಷಿನ್ನಲ್ಲಿ ಒಗೆಯುವುದನ್ನು ತಪ್ಪಿಸಿ. ಅವುಗಳ ರೋಮಗಳು ಮೆಷಿನ್ನಲ್ಲಿ ಉಳಿಯುವ ಸಾಧ್ಯತೆ ಹೆಚ್ಚು.
ಸಿಲ್ಕ್ ನಂತಹ ತೆಳುವಾದ ಬಟ್ಟೆಗಳನ್ನು ಎಂದಿಗೂ ವಾಷಿಂಗ್ ಮೆಷಿನ್ನಲ್ಲಿ ಒಗೆಯಬೇಡಿ. ಇದು ಬಟ್ಟೆಗಳು ಹಾಳಾಗಲು ಕಾರಣವಾಗುತ್ತದೆ.
ವಾಟರ್ ರೆಸಿಸ್ಟೆಂಟ್ ಬಟ್ಟೆಗಳನ್ನು ವಾಷಿಂಗ್ ಮೆಷಿನ್ನಲ್ಲಿ ಹಾಕುವುದನ್ನು ತಪ್ಪಿಸಿ. ಇದು ಉಪಕರಣದ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ.
ಭಾರವಾದ ಕಂಬಳಿಗಳನ್ನು ಎಂದಿಗೂ ವಾಷಿಂಗ್ ಮೆಷಿನ್ನಲ್ಲಿ ಒಗೆಯಬೇಡಿ. ಇದು ಮೆಷಿನ್ನ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು.
ಕಲೆಯಾದ ಬಟ್ಟೆಗಳನ್ನು ಹಾಗೆಯೇ ವಾಷಿಂಗ್ ಮೆಷಿನ್ನಲ್ಲಿ ಹಾಕಬೇಡಿ. ಕಲೆಗಳನ್ನು ತೆಗೆದ ನಂತರ ಮಾತ್ರ ವಾಷಿಂಗ್ ಮೆಷಿನ್ನಲ್ಲಿ ಹಾಕಿ.
ಲೆದರ್, ರಬ್ಬರ್ ನಂತಹ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ವಾಷಿಂಗ್ ಮೆಷಿನ್ನಲ್ಲಿ ಒಗೆಯಬೇಡಿ. ಇದು ಬಟ್ಟೆಗಳು ಹಾಳಾಗಲು ಕಾರಣವಾಗುತ್ತದೆ.
ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಲೇಬೇಕಾದ ಸಸ್ಯಗಳಿವು
ಹ್ಯಾಂಗಿಂಗ್ ಪಾಟ್‌ಗಳ ಸಸ್ಯಲೋಕ, ನೀವು ಮನೆಯಲ್ಲಿ ಬೆಳೆಸಬಹುದಾದ ಹೂಗಿಡಗಳಿವು!
ಮಳೆಗಾಲದ ರೋಗಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಸರಳ ಟಿಪ್ಸ್
ಮನೆಯಲ್ಲಿ ಸ್ನೇಕ್ ಪ್ಲಾಂಟ್ ಇದ್ರೆ ಇಷ್ಟೆಲ್ಲಾ ಪ್ರಯೋಜನ ನೋಡಿ!