ಸಸ್ಯಗಳನ್ನು ಬೆಳೆಸುವುದು ಮತ್ತು ಅವುಗಳನ್ನು ನೋಡಿಕೊಳ್ಳುವುದು ಸಂತೋಷದ ವಿಚಾರ. ಹಾಗಾದ್ರೆ ಮನೆಯಲ್ಲಿ ಸ್ನೇಕ್ ಪ್ಲಾಂಟ್ ಬೆಳೆಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.
life Aug 05 2025
Author: Ashwini HR Image Credits:Getty
Kannada
ಗಾಳಿಯನ್ನ ಶುದ್ಧೀಕರಿಸುತ್ತೆ
ಗಾಳಿಯಲ್ಲಿರುವ ಫಾರ್ಮಾಲ್ಡಿಹೈಡ್, ಬೆಂಜೀನ್ ಮುಂತಾದ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಮೂಲಕ ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸುತ್ತದೆ.
Image credits: Getty
Kannada
ಆಮ್ಲಜನಕ ಬಿಡುಗಡೆ ಮಾಡುತ್ತೆ
ರಾತ್ರಿಯ ಸಮಯದಲ್ಲಿ ಸ್ನೇಕ್ ಪ್ಲಾಂಟ್ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಈ ಸಸ್ಯವನ್ನು ಮಲಗುವ ಕೋಣೆಯಲ್ಲಿ ಮತ್ತು ಖಾಲಿ ಮೂಲೆಗಳಲ್ಲಿ ಬೆಳೆಸುವುದು ಒಳ್ಳೆಯದು.
Image credits: Getty
Kannada
ಆರೈಕೆ
ಸ್ನೇಕ್ ಪ್ಲಾಂಟ್‌ಗೆ ಕಡಿಮೆ ಆರೈಕೆ ಮಾತ್ರ ಅಗತ್ಯವಿದೆ. ಎರಡು ವಾರಗಳಿಗೊಮ್ಮೆ ಸಸ್ಯಕ್ಕೆ ನೀರು ಹಾಕಬಹುದು.
Image credits: Getty
Kannada
ಬೆಳಕು
ಯಾವುದೇ ಬೆಳಕಿನಲ್ಲಿ ಸ್ನೇಕ್ ಪ್ಲಾಂಟ್ ಸುಲಭವಾಗಿ ಬೆಳೆಯುತ್ತದೆ. ಕಡಿಮೆ ಬೆಳಕಿನಲ್ಲಿಯೂ ಸ್ನೇಕ್ ಪ್ಲಾಂಟ್ ಬದುಕಬಲ್ಲದು.
Image credits: Getty
Kannada
ಸೌಂದರ್ಯ
ಇದರ ಉದ್ದವಾದ ಎಲೆಗಳು ಸ್ನೇಕ್ ಪ್ಲಾಂಟ್ ಅನ್ನು ಇತರ ಸಸ್ಯಗಳಿಂದ ಭಿನ್ನವಾಗಿಸುತ್ತದೆ. ಮನೆಯೊಳಗಿನ ಖಾಲಿ ಮೂಲೆಗಳಲ್ಲಿ ಬೆಳೆಸುವುದು ಒಳ್ಳೆಯದು.
Image credits: Getty
Kannada
ಆರ್ದ್ರತೆ ನಿಯಂತ್ರಣ
ಮನೆಯೊಳಗಿನ ಆರ್ದ್ರತೆಯನ್ನು ನಿಯಂತ್ರಿಸಲು ಸ್ನೇಕ್ ಪ್ಲಾಂಟ್‌ಗೆ ಸಾಧ್ಯವಿದೆ. ಆದ್ದರಿಂದ ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಸ್ನೇಕ್ ಪ್ಲಾಂಟ್ ಅನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದು.
Image credits: Getty
Kannada
ಕೀಟಗಳು ದೂರ
ಸ್ನೇಕ್ ಪ್ಲಾಂಟ್ ಕೀಟಗಳನ್ನು ದೂರವಿಡುತ್ತದೆ. ಸೊಳ್ಳೆ ಮತ್ತು ಇತರ ಕೀಟಗಳ ಕಾಟ ಇದ್ದರೆ ಈ ಸಸ್ಯವನ್ನು ಬೆಳೆಸಿ ನೋಡಿ.