ಅದೊಂದು ಪೌಡರ್ ಸಾಕ್ರೀ.. ಬೆಂಡೆಕಾಯಿ ಲೋಳೆ ಆಗೋದಿಲ್ಲ, ಬೇಕಿದ್ರೆ ಮಾಡಿ ನೋಡಿ!
kitchen Apr 02 2026
Author: Padmashree Bhat Image Credits:instagram
Kannada
ಲೋಳೆ ಆಗುತ್ತೆ
ಬೆಂಡೆಕಾಯಿ ಕಟ್ ಮಾಡುವಾಗ ಲೋಳೆಯಾಗುವುದು. ಹೀಗೆ ಆಗದಂತೆ ತಡೆಯಲು ಒಂದಿಷ್ಟು ವಿಧಾನಗಳಿವೆ.
Image credits: instagram
Kannada
ತೊಳೆಯುವಾಗ ಎಚ್ಚರ
ಬೆಂಡೆಕಾಯಿಯನ್ನು ನೀರಿನಲ್ಲಿ ಹಾಕಿ ತೊಳೆದ ತಕ್ಷಣ ಹೆಚ್ಚಬೇಡಿ. ಇದರಿಂದ ಲೋಳೆ ಆಗುವುದು
Image credits: instagram
Kannada
ಒರೆಸಿ
ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದ ನಂತರ ಒಂದು ಕಾಟನ್ ಬಟ್ಟೆಯಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಆಗ ನೀರಿನಂಶ ಇಲ್ಲ ಎಂದರೆ ಲೋಳೆ ಕಡಿಮೆಯಾಗುತ್ತದೆ.
Image credits: instagram
Kannada
ಹುರಿಯುವಾಗ
ಒಲೆ ಮೇಲಿಟ್ಟ ಬಾಣಲೆಗೆ ಎಣ್ಣೆ, ಸಾಸಿವೆ ಒಗ್ಗರಣೆ ಹಾಕಿದ ನಂತರ ಹೆಚ್ಚಿದ ಬೆಂಡೆಕಾಯಿಯನ್ನು ಹಾಕಬೇಕು, ಸ್ವಲ್ಪ ಸಮಯದ ಬಳಿಕ ಅದರ ಬಣ್ಣ ಬದಲಾಗುವುದು
Image credits: instagram
Kannada
ಫಸ್ಟ್ ಉಪ್ಪು ಬೇಡ
ಬೆಂಡೆಕಾಯಿಗೆ ಮೊದಲೇ ಉಪ್ಪನ್ನು ಹಾಕಬೇಡಿ. ಮೊದಲೇ ಉಪ್ಪು ಹಾಕಿದರೆ ಬೆಂಡೆಕಾಯಿ ಹೆಚ್ಚು ನೀರು ಬಿಟ್ಟು, ಇನ್ನಷ್ಟು ಲೋಳೆಯಾಗುತ್ತದೆ. ಬೆಂಡೆಕಾಯಿಗೆ ವಾಟೆಕಾಯಿ ಪುಡಿ ಹಾಕಿದ 2 ನಿಮಿಷದ ಬಳಿಕ ಉಪ್ಪನ್ನು ಸೇರಿಸಿ.