Kannada

ಆರೋಗ್ಯಕ್ಕೆ ಬೆಲ್ಲ

ಬೆಲ್ಲ ಆರೋಗ್ಯಕ್ಕೆ ತುಂಬಾ ಲಾಭದಾಯಕವಾದ ಒಂದು ವಸ್ತುವಾಗಿದ್ದು. ಉತ್ತಮ ಆರೋಗ್ಯಕ್ಕಾಗಿ ಇದನ್ನು ಸಕ್ಕರೆ ಬದಲಾಗಿ ಸೇವಿಸುತ್ತಾರೆ. ಇದು ರುಚಿಯೂ ಉತ್ತಮ. ಆರೋಗ್ಯಕ್ಕೂ ಉತ್ತಮ

Kannada

ಬೆಲ್ಲದ ಪ್ರಯೋಜನ

ಬೆಲ್ಲ ಕೇವಲ ಸಿಹಿ ತಿನಿಸುಗಳಲ್ಲಿ ಮಾತ್ರವಲ್ಲ, ಇದು ತರಕಾರಿ, ಪಲ್ಯ, ಪದಾರ್ಥಗಳಿಗೂ ಸಿಹಿ ರುಚಿಯನ್ನು ಬ್ಯಾಲೆನ್ಸ್ ಮಾಡಲು ಬೆಲ್ಲ ಸಹಾಯ ಮಾಡುತ್ತದೆ. .

Image credits: Getty
Kannada

ಬೆಲ್ಲ ಕರಗಿ ನೀರಾಗಿದೆಯೆ?

ಆದರೆ ಕೆಲವೊಮ್ಮೆ ಏರ್ ಟೈಟ್ ಡಬ್ಬದಲ್ಲಿ ಇಟ್ಟರೂ ಸಹ ಬೆಲ್ಲ ಗಾಳಿ ಮತ್ತು ತೇವಾಂಶದಿಂದಾಗಿ ಅಂಟಲು ಮತ್ತು ಕರಗಲು ಪ್ರಾರಂಭಿಸುತ್ತದೆ. ಅದಲ್ಲಿ ಫಂಗಸ್ ಕೂಡ ಬೆಳೆಯುತ್ತದೆ. ಇದರಿಂದ ಬೆಲ್ಲದ ಗುಣಮಟ್ಟ ಹಾಳಾಗುತ್ತದೆ.

Image credits: Getty
Kannada

ಸುಲಭ ಕಿಚನ್ ಟ್ರಿಕ್ಸ್ ಟ್ರೈ ಮಾಡಿ

ಕೆಲವು ಸುಲಭ ಕಿಚನ್ ಟ್ರಿಕ್ಸ್ ಬಳಸಿ, ಬೆಲ್ಲವನ್ನು ಪೂರ್ತಿ ವರ್ಷಗಳವರೆಗೆ ಹಾಳಾಗದಂತೆ ಕಾಪಾಡುವುದು ಹೇಗೆ? ವರ್ಷ ಪೂರ್ತಿ ಫ್ರೆಶ್ ಆಗಿ, ಡ್ರೈ ಆಗಿಡುವುದು ಹೇಗೆ ಎನ್ನುವುದನ್ನು ತಿಳಿಸುತ್ತೇವೆ.

Image credits: Getty
Kannada

ಗಾಜಿನ ಡಬ್ಬದಲ್ಲಿ ಇರಿಸಿ

ಬೆಲ್ಲವನ್ನು ಯಾವತ್ತೂ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಬಾರದು. ಬದಲಾಗಿ ಸ್ವಚ್ಚವಾದ ಗಾಜಿನ ಜಾರ್ ಅಥವಾ ಮಣ್ಣಿನ ಪಾತ್ರೆಯಲ್ಲಿ ಸ್ಟೋರ್ ಮಾಡಿ. ಇದರಿಂದ ಬೆಲ್ಲಕ್ಕೆ ತೇವಾಂಶ ತಲುಪುವುದಿಲ್ಲ.

Image credits: Getty
Kannada

ಅದಕ್ಕೂ ಮುನ್ನ ಇದನ್ನ ಮಾಡಿ

ಬೆಲ್ಲವನ್ನು ಡಬ್ಬದಲ್ಲಿ ಹಾಕುವ ಮುನ್ನ ಒಂದು ಶುದ್ಧವಾದ, ಒಣಗಿದ ಬಿಳಿ ಹತ್ತಿ ಬಟ್ಟೆಯಲ್ಲಿ ಕಟ್ಟಿ ಇಡಿ. ಈ ಹತ್ತಿ ಬಟ್ಟೆ ತೇವಾಂಶವನ್ನು ಹೀರಿಕೊಂಡು ಬೆಲ್ಲ ಕರಗುವುದನ್ನು ತಪ್ಪಿಸುತ್ತದೆ.

Image credits: Getty
Kannada

ಬೇ ಎಲೆಯನ್ನು ಬಳಸಿ

ಬೆಲ್ಲದ ಡಬ್ಬಿಯಲ್ಲಿ 2-3 ಬೇ ಎಲೆಗಳನ್ನು ಹಾಕಿ. ಈ ಎಲೆ ಪ್ರಾಕೃತಿಕವಾಗಿ ತೇವಾಂಶವನ್ನು ಹೀರುತ್ತದೆ. ಹಾಗೂ ಎಲೆಗಳ ಪರಿಮಳದಿಂದ ಇರುವೆಗಳು ಸಹ ಹತ್ತಿರ ಬರುವುದಿಲ್ಲ.

Image credits: freepik
Kannada

ಫಂಗಸ್ ನಿಂದ ರಕ್ಷಿಸಲು ಟ್ರಿಕ್ಸ್

ನೀವು ಬೆಲ್ಲವನ್ನು ಫಂಗಸ್ ನಿಂದ ರಕ್ಷಿಸಲು ಬಯಸಿದರೆ, ಡಬ್ಬದಲ್ಲಿ 1-2 ಒಣಗಿದ ಅರಶಿನದ ಕೊಂಬನ್ನು ಹಾಕಿ. ಇದು ಬೆಲ್ಲವನ್ನು ದೀರ್ಘಾವದಿವರೆಗೂ ಸುರಕ್ಷಿತವಾಗಿರಿಸುತ್ತದೆ.

Image credits: freepik
Kannada

ಬೆಲ್ಲ ಅಂಟಾದರೆ ಏನು ಮಾಡುವುದು?

ಒಂದು ವೇಳೆ ಬೆಲ್ಲ ನೀರಾಗುತ್ತಿದೆ, ಅಂಟಾಗಿದೆ ಎಂದು ನಿಮಗೆ ಅನಿಸಿದರೆ, ಕೂಡಲೆ ಅದನ್ನು ಡಬ್ಬದಿಂದ ಹೊರ ತೆಗೆದು, ಬಿಸಿಲಿನಲ್ಲಿ ಇಡಿ. ಇದರಿಂದ ಬೆಲ್ಲ ಮತ್ತೆ ಗಟ್ಟಿಯಾಗುತ್ತದೆ.

Image credits: Getty

Pressure Cooker: ನೀವು ಹೀಗೆ ಮಾಡಿದ್ರೆ ಪ್ರೆಶರ್ ಕುಕ್ಕರ್‌ನಿಂದ ನೀರು ಹೊರಬರಲ್ಲ

Kitchen Design: ನಿಮ್ಮ ಕಿಚನ್ ಕ್ಯಾಬಿನೆಟ್‌ಗೆ ಕ್ಲಾಸಿ ಲುಕ್ ನೀಡುವ 7 ಟ್ರೆಂಡಿ ಕಲರ್ ಕಾಂಬಿನೇಷನ್‌ಗಳು ಇಲ್ಲಿವೆ

ZZ Plant: ಬೆಡ್‌ರೂಮ್‌ನಲ್ಲಿ ಈ ಗಿಡ ಬೆಳೆಸಿದರೆ ಸಿಗುತ್ತೆ 7 ಅದ್ಭುತ ಪ್ರಯೋಜನ!

ಕುಕ್ಕರ್​ ಬಳಸಿ ಸುಲಭದಲ್ಲಿ ಮಾಡಿ ಲಿಂಬು ಉಪ್ಪಿನಕಾಯಿ: ಹಂತ ಹಂತದ ಮಾಹಿತಿ