Kannada

ನೂತನ ಸಿಡಿಎಸ್ ನೇಮಕ

CDS ಅನಿಲ್ ಚೌಹಾಣ್ ಉತ್ತರಾಧಿಕಾರಿಯಾಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ನೂತನ ಸಿಡಿಎಸ್ ಆಗಿ ಕೇಂದ್ರ ಸರ್ಕಾರ ನೇಮಿಸಿದೆ.

Kannada

ನೌಕಾಪಡೆಗೂ ಹೊಸ ಮುಖ್ಯಸ್ಥ

ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದು, ಮೇ 31ರಂದು ಅಧಿಕಾರ ಸ್ವೀಕರಿಸಲಿದ್ದಾರೆ.ಡಿಸೆಂಬರ್ 31, 2028ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

Image credits: X
Kannada

ಮೇ.30ಕ್ಕೆ ಅನಿಲ್‌ ಚೌಹಾಣ್‌ ಅವಧಿ ಮುಕ್ತಾಯ

ಪ್ರಸ್ತುತ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿ ಮೇ 30ಕ್ಕೆ ಮುಕ್ತಾಯವಾಗಲಿದ್ದು, ನಂತರ ರಾಜಾ ಸುಬ್ರಮಣಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Image credits: ‍X
Kannada

ಹೆಚ್ಚುವರಿ ಜವಾಬ್ದಾರಿ

ಸುಬ್ರಮಣಿ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮತ್ತು ಮುಂದಿನ ಆದೇಶದವರೆಗೆ ಮಿಲಿಟರಿ ವ್ಯವಹಾರಗಳ ಇಲಾಖೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

Image credits: ‍
Kannada

ಸುಬ್ರಮಣಿ ಅವರ ಅನುಭವ

40 ವರ್ಷಗಳ ಸುದೀರ್ಘ ವೃತ್ತಿಜೀವನ ಹೊಂದಿರುವ ಇವರು, ಸೇನೆಯ ವೈಸ್ ಚೀಫ್ ಆಗಿ ಮತ್ತು ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 

Image credits: ‍
Kannada

ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ

ಪ್ರಸ್ತುತ ಸೆಪ್ಟೆಂಬರ್ 2025 ರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Image credits: ‍
Kannada

ಘರ್ವಾಲ್‌ ರೈಫಲ್ಸ್‌ ಬೆಟಾಲಿಯನ್‌

1985ರ ಡಿಸೆಂಬರ್‌ 14 ರಂದು ಘರ್ವಾಲ್‌ ರೈಫಲ್ಸ್‌ನ 8ನೇ ಬೆಟಾಲಿಯನ್‌ಗೆ ಇವರು ಕಮೀಷನ್ಡ್‌ ಆಗಿದ್ದರು. ಇಂಗ್ಲೆಂಡ್‌ ಹಾಗೂ ಭಾರತದ ವಿವಿಗಳಲ್ಲಿ ಹಲವು ಪದವಿ ಪಡೆದಿದ್ದಾರೆ.

Image credits: ‍
Kannada

ಆಪರೇಷನ್‌ ರೈನೋ

ಅಸ್ಸಾಂನಲ್ಲಿ ಆಪರೇಷನ್‌ ರೈನೋ ಭಾಗವಾಗಿ 16 ಘರ್ವಾಲ್‌ ರೈಫಲ್ಸ್‌ ಬೆಟಾಲಿಯನ್‌ಅನ್ನು ಮುನ್ನಡೆಸಿದ್ದ ಅನುಭವ ಹೊಂದಿದ್ದಾರೆ.

Image credits: ‍

ಬ್ಯಾಚುಲರ್ ಸುವೇಂದು ಅಧಿಕಾರಿ ಮದುವೆ ಆಗದಿರಲು ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!

ಹಾಡಿನಿಂದಲ್ಲ, ಈ ಬ್ಯುಸಿನೆಸ್‌ನಿಂದ ಕೋಟಿ ಕೋಟಿ ಗಳಿಸಿದ ಆಶಾ ಭೋಸ್ಲೆ!

1 ವರ್ಷದಲ್ಲಿ 11843 ಜನರಿಂದ 1 ಕೋಟಿ ದಂಡ ಕಲೆಕ್ಟ್ ಮಾಡಿದ ಟಿಟಿಇ

ನಿತೀಶ್‌ ಕುಮಾರ್ ರಾಜೀನಾಮೆ ಬೆನ್ನಲ್ಲೇ ಮುನ್ನೆಲೆಗೆ ಬಂದ ನಿಶಾಂತ್ ಕುಮಾರ್ ಯಾರು?