Health
ಹಾಲಿನಲ್ಲಿ ಅರಿಶಿನಿ ಹಾಕಿ ಕುಡಿಯುವುದು ಹೇಗೆ ಆರೋಗ್ಯಕರವಾಗಿರುತ್ತೋ ಅದೇ ರೀತಿ ಅರಿಶಿನವನ್ನು ಬೆರೆಸಿದ ಕಾಫಿಯನ್ನು ಕುಡಿಯುವುದನ್ನು ನಿಮ್ಮ ದಿನಚರಿಯ ಭಾಗವಾಗಿಸಿಕೊಳ್ಳಿ, ಏಕೆಂದರೆ,
ಕಾಫಿ ಮಾಡುವಾಗ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ. ಅರಿಶಿನ ಕಾಫಿ ಕುಡಿಯುವುದರಿಂದ ಆಗುವ ಲಾಭಗಳೇನು ಎಂದು ಕೇಳುತ್ತೀರಾ? ನಿಮ್ಮ ಪ್ರಶ್ನೆಗೆ ಇಲ್ಲಿವೆ ಉತ್ತರ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಸಂಧಿವಾತ, ಸ್ನಾಯು ನೋವು ಮುಂತಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಅರಿಶಿನ ಕಾಫಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳು ಸೋಂಕುಗಳು, ಶೀತ ಮುಂತಾದವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ, ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಪರಿಹಾರವಾಗಿದೆ ಅರಿಶಿನ ಕಾಫಿ.
ಕಾಫಿಯಲ್ಲಿರುವ ಕೆಫೀನ್ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ, ಮೆದುಳಿನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಅಲ್ಝೈಮರ್, ಪಾರ್ಕಿನ್ಸನ್ಸ್ ಮುಂತಾದ ಕಾಯಿಲೆಗಳನ್ನು ತಡೆಯುತ್ತದೆ.
ಅರಿಶಿನದ ಉರಿಯೂತ ನಿವಾರಕ, ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.