Kannada

ಹೃದಯದ ಆರೋಗ್ಯ

ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಕೆಲವು ತರಕಾರಿಗಳನ್ನು ಸೇವಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಉಪಯುಕ್ತವಾಗಿದೆ

Kannada

ಕ್ಯಾರೆಟ್

ಕ್ಯಾರೆಟ್ ಉತ್ತಮ ಆರೋಗ್ಯಕರ ತರಕಾರಿ. ಇದರಲ್ಲಿ ನಾರಿನಂಶ ಮತ್ತು ಬೀಟಾ ಕ್ಯಾರೋಟಿನ್ ಹೇರಳವಾಗಿದೆ. ನೀವು ಕ್ಯಾರೆಟ್ ತಿಂದರೆ ನಿಮ್ಮ ಶರೀರದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ತೂಕ ಕೂಡ ಇಳಿಯುತ್ತದೆ.

Image credits: Getty
Kannada

ಟೊಮಾಟೊ

ಟೊಮಾಟೊ ಕೂಡ ತೂಕ ಮತ್ತು ಕೊಲೆಸ್ಟ್ರಾಲ್ ಇಳಿಸಲು ಸಹಾಯ ಮಾಡುತ್ತದೆ. ಟೊಮಾಟೊದಲ್ಲಿರುವ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕ.

Image credits: Getty
Kannada

ಪಾಲಕ್

ಪಾಲಕ್ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್‌ಗಳು ಮತ್ತು ನಾರಿನಂಶ ಹೊಂದಿರುವ ಪಾಲಕ್‌ನ್ನು ಆಹಾರದಲ್ಲಿ ಸೇರಿಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

Image credits: Getty
Kannada

ಬ್ರೊಕೊಲಿ

ಬ್ರೊಕೊಲಿಯಲ್ಲಿ ನಾರಿನಂಶ, ಪ್ರೋಟೀನ್ ಹೇರಳವಾಗಿವೆ. ಇದನ್ನು ಆಹಾರದಲ್ಲಿ ಸೇರಿಸಿದರೆ ತೂಕ ಮತ್ತು ಕೊಲೆಸ್ಟ್ರಾಲ್ ಎರಡೂ ಕಡಿಮೆಯಾಗುತ್ತದೆ.

Image credits: Getty
Kannada

ಬೆಂಡೆಕಾಯಿ

ಬೆಂಡೆಕಾಯಿಯಲ್ಲಿ ನಾರಿನಂಶ ಹೆಚ್ಚಿದೆ. ಈ ತರಕಾರಿಯನ್ನು ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ತೂಕ ಕಡಿಮೆಯಾಗುತ್ತದೆ.

Image credits: Getty
Kannada

ಬೀಟ್ರೂಟ್

ಬೀಟ್ರೂಟ್ ಅನ್ನು ಅನೇಕರು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ನಾರಿನಂಶ ಹೆಚ್ಚಿದೆ. ಇವು ಕೊಲೆಸ್ಟ್ರಾಲ್ ಮತ್ತು ತೂಕ ಇಳಿಸಲು ಪರಿಣಾಮಕಾರಿ.

Image credits: Getty
Kannada

ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ಬೀಟಾ ಕ್ಯಾರೋಟಿನ್, ನಾರಿನಂಶ ಹೇರಳವಾಗಿವೆ. ಇವುಗಳನ್ನು ತಿಂದರೆ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯ ಆರೋಗ್ಯವಾಗಿರುತ್ತದೆ.

Image credits: Getty

ಸ್ಮೋಕಿಂಗ್ ಬಿಡ್ಬೇಕು ಆದ್ರೆ ಆಗ್ತಿಲ್ಲ ಅನ್ನೋರಿಗೆ ಇಲ್ಲಿದೆ ನಟ ಶಾರುಖ್ ಟಿಪ್ಸ್

ಯೂರಿಕ್ ಆಸಿಡ್ ಕಡಿಮೆ ಮಾಡಲು ಡ್ರೈಪ್ರೂಟ್ಸ್‌ ತಪ್ಪದೇ ತಿನ್ನಿ, ಈ ಕಾಯಿಲೆ ತಪ್ಪಿಸಿ

ಈ ಸಮಸ್ಯೆ ಇರೋರು ದಿನಾ ಬ್ಲ್ಯಾಕ್ ಕಾಫಿ ಕುಡಿಯೋದು ಒಳ್ಳೆಯದಲ್ಲ!

ಇದು ನೆಲ್ಲಿಕಾಯಿ ಸೀಸನ್: ನಿತ್ಯವೂ ಒಂದು ನೆಲ್ಲಿಕಾಯಿ ತಿನ್ನಿ ಮ್ಯಾಜಿಕ್ ನೋಡಿ