ನಿಮ್ಮ ಮೆದುಳು ನೀವು ಹೇಳಿರುವ ಎಲ್ಲವನ್ನೂ ಸಹ ಕೇಳಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಮತ್ತೆ ಮತ್ತೆ ನಿಮ್ಮ ಬಗ್ಗೆ ಹೇಳಿರುವುದು ಮೆದುಳು ಫಿಕ್ಸ್ ಮಾಡುತ್ತೆ.
ನೀವು ಪ್ರತಿದಿನ ‘ನನಗೆ ಜೀವನ ಸಾಕಾಗಿದೆ’, ನಾನು ನತದೃಷ್ಟೆ, ನನ್ನಿಂದ ಏನೂ ಪ್ರಯೋಜನ ಇಲ್ಲ ಅಂದುಕೊಂಡರೆ, ನಿಮ್ಮ ನರಮಂಡಲ ಅದನ್ನು ನಂಬಿ ಬಿಡುತ್ತೆ.
ನೀವು ಹೇಳುವ ಪದಗಳು ಕೇವಲ ನಿಮ್ಮ ಭಾವನೆಗಳಲ್ಲ. ಅವು ನಿಮ್ಮ ಮೆದುಳಿಗೆ ಏನು ನೀರೀಕ್ಷೆ ಮಾಡಬೇಕು ಅನ್ನೋದನ್ನು ತಿಳಿಸುತ್ತೆ. ಮೆದುಳು ಅದನ್ನೇ ನಂಬುತ್ತೆ.
ನೀವು ಪದೇ ಪದೇ ನಿಮ್ಮ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದರೆ ಒತ್ತಡ ಹೆಚ್ಚಾಗುತ್ತದೆ, ಆತಂಕ ಹೆಚ್ಚುತ್ತೆ ಜೊತೆಗೆ ಅಸಾಹಯಕತೆ ಕಾಡಲು ಶುರುವಾಗುತ್ತೆ.
ಹಾಗಾಗಿ ನೀವು ಹೀಲ್ ಆಗಬೇಕು ಅಂತ ಇದ್ದರೆ, ಮೊದಲಿಗೆ ನಿಮ್ಮ ಮಾತಿನ ಕಡೆಗೆ ಗಮನ ಇರಲಿ. ಯಾವಾಗಲೂ ನಿಮ್ಮ ಬಗ್ಗೆ ಒಳ್ಳೆಯದನ್ನೆ ಮಾತನಾಡಿ.
ನೆಗೆಟಿವ್ ಪದಗಳ ಬದಲಾಗಿ, ನಾನು ಹೀಲ್ ಆಗ್ತೀದ್ದೀನಿ, ನಾನ ಶಕ್ತಿಶಾಲಿಯಾಗಿದ್ದೇನೆ, ನಾನು ಅದೃಷ್ಟವಂತೆ ಅನ್ನೋದನ್ನು ಹೇಳಿ. ಮನಸ್ಸು ಅದನ್ನ ನಂಬುತ್ತೆ, ನೀವು ಬದಲಾಗುವಿರಿ.
ನಿಮ್ಮೊಂದಿಗೆ ನೀವು ಮಾತನಾಡಿ, ನಿಮಗೆ ನೀವು ಧೈರ್ಯ ತುಂಬಿ, ಸ್ಟ್ರಾಂಗ್ ಇರುವಂತೆ ಬಿಂಬಿಸಿ, ನಿಮ್ಮ ಮನಸ್ಸು ದೇಹ, ಎಲ್ಲವೂ ನೀವು ಹೇಳಿದಂತೆ ಕೇಳುತ್ತೆ.
ಕಾಫಿ ಸೇವನೆಯಿಂದ ಹೃದಯ ಸಂಬಂಧಿ ರೋಗ 40% ರಷ್ಟು ಕಡಿಮೆ, ಅಧ್ಯಯನದಲ್ಲಿ ಬಹಿರಂಗ!
ಮೂತ್ರದ ಬಣ್ಣ ಹೀಗಿದ್ದರೆ ಕಿಡ್ನಿಗಳು ಅಪಾಯದಲ್ಲಿವೆ ಎಂದರ್ಥ
ರಾತ್ರಿ ಮಲಗುವ ಮುನ್ನ ಜೀರಿಗೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ?
ಹೋಟೆಲ್‌ಗಳಲ್ಲಿ ಬೆಡ್ ಮೇಲೆ ಬಿಳಿ ಬೆಡ್‌ಶೀಟ್‌ಗಳೇ ಏಕಿರುತ್ತವೆ?