ಮನುಷ್ಯನ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಅಂಗವೇ ಕಿಡ್ನಿ. ಹಲವು ಕಾರಣಗಳಿಂದ ಕಿಡ್ನಿಗಳ ಆರೋಗ್ಯ ಹದಗೆಡಬಹುದು. ಹಾಗಾದರೆ ಕಿಡ್ನಿಗಳು ಅಪಾಯದಲ್ಲಿವೆ ಎಂಬುದರ ಲಕ್ಷಣಗಳೇನು ಎಂಬುದನ್ನು ನೋಡೋಣ.
health-life Jan 10 2026
Author: Ashwini HR Image Credits:Getty
Kannada
ಹೀಗಿರುತ್ತೆ ಮೂತ್ರದ ಬಣ್ಣ
ಮೂತ್ರದ ಬಣ್ಣ ಗಾಢವಾಗಿರುವುದು, ಕಂದು ಬಣ್ಣ, ಗಾಢ ಹಳದಿ, ಗುಲಾಬಿ ಬಣ್ಣಕ್ಕೆ ತಿರುಗುವುದು ಕಿಡ್ನಿ ಅಪಾಯದಲ್ಲಿರುವುದರ ಸಂಕೇತವಾಗಿರಬಹುದು.
Image credits: Getty
Kannada
ರಕ್ತ ಕಾಣಿಸಿಕೊಂಡರೆ
ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕೂಡ ಕಿಡ್ನಿ ಅಪಾಯದಲ್ಲಿರುವುದರ ಲಕ್ಷಣವಾಗಿರಬಹುದು.
Image credits: Getty
Kannada
ಗಮನಿಸಬೇಕಾದ ವಿಷಯವಿದು
ಮೂತ್ರದ ಪ್ರಮಾಣ ಕಡಿಮೆಯಾಗುವುದು, ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜಿಸಬೇಕೆನಿಸಿದರೂ ಮೂತ್ರ ಬರದೇ ಇರುವುದು ಸಹ ಗಮನಿಸಬೇಕಾದ ವಿಷಯ.
Image credits: Getty
Kannada
ವೈದ್ಯರ ಸಲಹೆ ಪಡೆಯಿರಿ
ಕಿಡ್ನಿ ಕಾರ್ಯಕ್ಷಮತೆ ನಿಧಾನವಾದಾಗ ಕಾಲು, ಕೈ, ಕಣ್ಣಿನ ಕೆಳಗೆ ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಪಡೆಯಿರಿ.
Image credits: Getty
Kannada
ಚರ್ಮದ ಸಮಸ್ಯೆಗೆ ಕಾರಣ
ಕಿಡ್ನಿಗಳು ಫೇಲ್ಯೂರ್ ಆದಾಗ ದೇಹದ ತ್ಯಾಜ್ಯ ಮತ್ತು ಲವಣಗಳು ರಕ್ತದಲ್ಲಿ ಶೇಖರಗೊಳ್ಳುತ್ತವೆ. ಇದು ಚರ್ಮದ ಸಮಸ್ಯೆ ಮತ್ತು ತುರಿಕೆಗೆ ಕಾರಣವಾಗಬಹುದು.
Image credits: Getty
Kannada
ಆಯಾಸ, ದೌರ್ಬಲ್ಯ
ಆಯಾಸ ಮತ್ತು ದೌರ್ಬಲ್ಯಕ್ಕೆ ಹಲವು ಕಾರಣಗಳಿರಬಹುದು. ಆದರೆ ಕಿಡ್ನಿ ಸಂಬಂಧಿ ಸಮಸ್ಯೆಗಳಿದ್ದರೂ ಆಯಾಸ, ದೌರ್ಬಲ್ಯ ಕಾಣಿಸಿಕೊಳ್ಳಬಹುದು.
Image credits: Getty
Kannada
ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದರೆ ಸ್ವಯಂ ರೋಗನಿರ್ಣಯಕ್ಕೆ ಪ್ರಯತ್ನಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಂತರವೇ ರೋಗವನ್ನು ಖಚಿತಪಡಿಸಿಕೊಳ್ಳಿ.