Health
ಆರೋಗ್ಯಕರ ಮೂತ್ರಪಿಂಡದ ಕಾರ್ಯಚಟುವಟಿಕೆಗೆ ಸಾಕಷ್ಟು ನೀರು ಕುಡಿಯುವುದು ವಾಸ್ತವವಾಗಿ ನಿರ್ಣಾಯಕವಾಗಿದೆ. ಮೂತ್ರಪಿಂಡ ಸಮಸ್ಯೆಗಳನ್ನ ಹೇಗೆ ಗುರುತಿಸಬಹುದು ಅನ್ನೋದು ಇಲ್ಲಿ ತಿಳಿಯೋಣ.
ಬದಲಾದ ಜೀವನಶೈಲಿ, ಸೇವಿಸುವ ಆಹಾರದಲ್ಲಿನ ಬದಲಾವಣೆಗಳಿಂದಾಗಿ ಇತ್ತೀಚೆಗೆ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಮೂತ್ರಪಿಂಡಗಳ ಕಾರ್ಯಕ್ಷಮತೆ ಹದಗೆಡುತ್ತಿರುವುದನ್ನು ಕೆಲವು ಲಕ್ಷಣಗಳ ಮೂಲಕ ಮೊದಲೇ ಗುರುತಿಸಬಹುದು. ವಿಶೇಷವಾಗಿ ನೀರು ಕುಡಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಣಗಳು ಇದಕ್ಕೆ ಸಂಕೇತವಾಗಿ ಹೇಳಬಹುದು.
ನೀರು ಕುಡಿದ ತಕ್ಷಣ ಮೂತ್ರಪಿಂಡಗಳು ಇರುವ ಜಾಗದಲ್ಲಿ ನೋವು ಕಾಣಿಸಿಕೊಂಡರೆ, ಸೂಜಿಯಿಂದ ಚುಚ್ಚಿದಂತೆ ಅನಿಸಿದರೆ ತಕ್ಷಣ ಎಚ್ಚರವಹಿಸಬೇಕು. ವೈದ್ಯರನ್ನು ಸಂಪರ್ಕಿಸಿ ಸಂಬಂಧಿತ ಚಿಕಿತ್ಸೆಗಳನ್ನು ಪಡೆಯಬೇಕು.
ನೀರು ಕುಡಿದ ತಕ್ಷಣ ಹಠಾತ್ತಾಗಿ ಆಯಾಸ, ನಿಶ್ಯಕ್ತಿ ಅನಿಸಿದರೂ ಮೂತ್ರಪಿಂಡಗಳು ಹಾನಿಗೊಳಗಾಗಿವೆ ಎಂಬುದರ ಸಂಕೇತವೆಂದು ಭಾವಿಸಬೇಕು. ನೀರು ಕುಡಿದ ತಕ್ಷಣ ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡಬೇಕಾಗಿ ಬರುವುದೇ ಇದಕ್ಕೆ ಕಾರಣ.
ಎಷ್ಟೇ ನೀರು ಕುಡಿದರೂ ಮೂತ್ರ ಕಡಿಮೆ ಬರುತ್ತದೆ ಎಂದರೆ ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ತಜ್ಞರು ಹೇಳುತ್ತಾರೆ. ಮೂತ್ರಪಿಂಡಗಳು ನೀರನ್ನು ಸರಿಯಾಗಿ ಫಿಲ್ಟರ್ ಮಾಡದಿದ್ದರೆ ಇಂಥಸಮಸ್ಯೆಗಳು ಬರುತ್ತವೆ.
ನಿರಂತರ ವಾಂತಿ ಬರುತ್ತಿದ್ದರೂ, ನೀರು ಕುಡಿದ ತಕ್ಷಣ ಹೊಟ್ಟೆಯಲ್ಲಿ ಏನೋ ಅಸ್ವಸ್ಥತೆ ಇದ್ದರೂ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿವೆ ಎಂದು ಅರ್ಥಮಾಡಿಕೊಳ್ಳಬೇಕು.
ನೀರು ಕುಡಿದ ತಕ್ಷಣ ಮೂತ್ರ ವಿಸರ್ಜನೆ ಮಾಡಬೇಕಾದರೆ ಅದನ್ನು ಲಘುವಾಗಿ ಪರಿಗಣಿಸಬಾರದು. ಇದು ಕೂಡ ಮೂತ್ರಪಿಂಡಗಳು ಹಾನಿಗೊಳಗಾಗಿವೆ ಎಂಬುದಕ್ಕೆ ಸಂಕೇತವೆಂದು ಭಾವಿಸಬೇಕು.
ಗಮಮಿಸಿ: ಈ ವಿವರಗಳೆಲ್ಲವೂ ಕೇವಲ ಪ್ರಾಥಮಿಕ ಮಾಹಿತಿಗೆ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಂದೇಹಗಳಿದ್ದರೂ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ.