Health
ನಿದ್ರೆ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ. ಸಾಕಷ್ಟು ನಿದ್ರೆ ಇಲ್ಲದಿದ್ದರೆ ಅದರ ಋಣಾತ್ಮಕ ಪರಿಣಾಮ ಬೀರಬಹುದು.
ಆರೋಗ್ಯ ತಜ್ಞರ ಪ್ರಕಾರ, 0-3 ತಿಂಗಳ ಮಕ್ಕಳು ದಿನಕ್ಕೆ 17 ಗಂಟೆಗಳು, 12 ತಿಂಗಳ ಮಕ್ಕಳು 16 ಗಂಟೆಗಳವರೆಗೆ, 2 ವರ್ಷದ ಮಕ್ಕಳು 11 ರಿಂದ 14 ಗಂಟೆಗಳ ಕಾಲ ನಿದ್ರೆ ಮಾಡಬೇಕು.
0-3 ತಿಂಗಳ ಮಕ್ಕಳು ದಿನಕ್ಕೆ 14 ರಿಂದ 17 ಗಂಟೆಗಳು, 4 ರಿಂದ 12 ತಿಂಗಳ ಮಕ್ಕಳು 16 ಗಂಟೆಗಳವರೆಗೆ ಮತ್ತು 2 ವರ್ಷದ ಮಕ್ಕಳು 11 ರಿಂದ 14 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ವರದಿಯ ಪ್ರಕಾರ, 3-5 ವರ್ಷದ ಮಕ್ಕಳು 10 ರಿಂದ 13 ಗಂಟೆಗಳು, 6-12 ವರ್ಷದವರು 9-12 ಗಂಟೆಗಳು ಮತ್ತು 13 ರಿಂದ 17 ವರ್ಷದವರು 8-10 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ರೋಗ ನಿಯಂತ್ರಣ ಕೇಂದ್ರದ ಪ್ರಕಾರ, 18-60 ವರ್ಷ ವಯಸ್ಸಿನವರು ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಸಂಶೋಧನೆಯ ಪ್ರಕಾರ, 61-64 ವರ್ಷ ವಯಸ್ಸಿನವರು ದಿನಕ್ಕೆ 7-9 ಗಂಟೆಗಳ ಕಾಲ ನಿದ್ರೆ ಮಾಡಬೇಕು.
65 ವರ್ಷಕ್ಕಿಂತ ಮೇಲ್ಪಟ್ಟವರು 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.