Health
ವೈದ್ಯಕೀಯ ಕ್ಷೇತ್ರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ 29 ವರ್ಷದ ಯುವಕನ ದೇಹವು ಕ್ರಮೇಣ ಕಲ್ಲಾಗುತ್ತಿದೆ. ಇದು ಎಷ್ಟು ವಿಚಿತ್ರವಾದ ಕಾಯಿಲೆ ಎಂದರೆ ವೈದ್ಯರು ಸಹ ಶಾಕ್ ಆಗಿದ್ದಾರೆ..
ನ್ಯೂಯಾರ್ಕ್ ನಲ್ಲಿ ಪ್ರಕರಣ ವರದಿಯಾಗಿದ್ದು,. ಜೋ ಸೂಚ್ ಎಂಬ ಯುವಕನ ದೇಹ ಕ್ರಮೇಣ ಕಲ್ಲಿನಂತಗುತ್ತಿದೆ. ಇದು ಫೈಬ್ರೊಡಿಸ್ಪ್ಲಾಸಿಯಾ ಆಸ್ಸಿಫಿಕನ್ಸ್ ಪ್ರೊಗ್ರೆಸಿವಾ (FOP) ಎಂದು ಕರೆಯಲ್ಪಡುವ ಸಿಂಡ್ರೋಮ್ ಆಗಿದೆ.
ಈ ರೋಗದಲ್ಲಿ, ನಡೆಯಲು ಸಾಧ್ಯವಿಲ್ಲ. ವೈದ್ಯರು ಇದನ್ನು ಅನುವಂಶಿಕ ಕಾಯಿಲೆ ಎನ್ನುತ್ತಾರೆ. ಆದರೆ ಇದು ತುಂಬಾ ಅಪರೂಪ, ಇದು 2 ಮಿಲಿಯನ್ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ..
ಜೋ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ತಿಳಿಸಿದ್ದು, ವಿಶ್ವದಲ್ಲಿ ಈವರೆಗೆ ಕೇವಲ 800 ಜನರು ಮಾತ್ರ ಈ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರಂತೆ.
ಇಲ್ಲಿಯವರೆಗೆ, ಈ ರೋಗಕ್ಕೆ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ತನ್ನ ಮೂಳೆಗಳು ಬೆಳೆದಾಗಲೆಲ್ಲಾ, ತನ್ನ ದೇಹಕ್ಕೆ ಚಾಕು ಹಾಕಿದ ಅನುಭವ ಆಗುತ್ತೆ ಎನ್ನುತ್ತಾರೆ ಜೋ ಸೂಚ್.
ಸ್ಟೋನ್ ಮ್ಯಾನ್ ಸಿಂಡ್ರೋಮ್ ಒಂದು ಆನುವಂಶಿಕ ಕಾಯಿಲೆಯಾಗಿದ್ದು, ಇದರಲ್ಲಿ ಸ್ನಾಯುಗಳು, ಅಸ್ಥಿರಜ್ಜುಗಳು ಕ್ರಮೇಣ ಮೂಳೆಗಳಾಗಿ ಬದಲಾಗುತ್ತವೆ, ಇದರಿಂದಾಗಿ ವ್ಯಕ್ತಿಯು ನಡೆಯಲು ಕಷ್ಟವಾಗುತ್ತದೆ.
ಈ ಸಿಂಡ್ರೋಮ್ ಅನ್ನು ಸುಲಭವಾಗಿ ಗುರುತಿಸಬಹುದು. ಆದರೆ ಸಾಮಾನ್ಯ ಜನರಿಗೆ ಈ ಸಮಸ್ಯೆ ಬಗ್ಗೆ ತಿಳಿದಿಲ್ಲ, ಹಾಗಾಗಿ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ನವಜಾತ ಶಿಶುವಿನ ಕಾಲ್ಬೆರಳುಗಳು ಮತ್ತು ಹೆಬ್ಬೆರಳಿನ ಸೂಕ್ಷ್ಮತೆಗಳನ್ನು ನೋಡುವ ಮೂಲಕ ರೋಗ ಲಕ್ಷಣ ತಿಳಿಯಬಹುದು. ಅಲ್ಲದೆ, ಮಗುವಿಗೆ ವಯಸ್ಸಾದಂತೆ, ರೋಗಲಕ್ಷಣಗಳು ಹೆಚ್ಚು ತೀವ್ರವಾಗುತ್ತವೆ.
ಈ ರೋಗದಲ್ಲಿ ಅಂಗಾಂಶಗಳು ನಿಧಾನವಾಗಿ ಮುಂಡ, ಬೆನ್ನು, ಸೊಂಟ ಮತ್ತು ಕೈಕಾಲುಗಳಿಗೆ ಆವರಿಸುತ್ತೆ. ಒಬ್ಬ ವ್ಯಕ್ತಿಯು ನಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೂ ಇದು ಸಂಭವಿಸುತ್ತಲೇ ಇರುತ್ತದೆ.
ವೈದ್ಯಕೀಯ ವಿಜ್ಞಾನ ಮೂಳೆಗಳ ಬೆಳವಣಿಗೆಯನ್ನು ನಿಧಾನಗೊಳಿಸುವ ಕೆಲವು ಔಷಧಿಗಳನ್ನು ಕಂಡುಹಿಡಿದಿದೆ. ಆದರೆ, ಇದು ಸಂಪೂರ್ಣವಾಗಿ ಪರಿಣಾಮಕಾರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಇನ್ನೂ ಕಾಡುತ್ತಿದೆ.