ಜನರು ಯಾವಾಗಲೂ ಮತ್ತೊಬ್ಬರು ಹೇಗಿದ್ದೀರಾ ಎಂದು ಕೇಳಿದಾಗ 'ನಾನು ಚೆನ್ನಾಗಿದ್ದೀನಿ', ಫೈನ್ ಎಂದೇ ಹೇಳುತ್ತಾರೆ. ಮತ್ತೊಬ್ಬರ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.
Image credits: Freepik
Kannada
ಐದೇ ನಿಮಿಷದಲ್ಲಿ ಬರ್ತೀನಿ
ಯಾವುದೇ ಸ್ಥಳವಾಗಿ ಹೋಗುವಾಗ ತಡವಾದರೆ, ಅಲ್ಲೆಲ್ಲರೂ ಕಾಯುತ್ತಿದ್ದು ಎಲ್ಲಿದ್ದೀಯಾ ಎಂದು ಕೇಳಿದರೆ ಬಹುತೇಕರು ಇನ್ನು ಐದೇ ನಿಮಿಷದಲ್ಲಿ ಅಲ್ಲಿರ್ತೀನಿ ಎನ್ನುತ್ತಾರೆ. ಆದರೆ ಅವರು ಇನ್ನೂ ತಡವಾಗುವಷ್ಟು ದೂರವಿರುತ್ತಾರೆ.
Image credits: Freepik
Kannada
ಟ್ರಾಫಿಕ್‌ನಲ್ಲಿದ್ದೇನೆ
ಆಫೀಸ್‌ಗೆ ತಡವಾಗುವ ಹೆಚ್ಚಿನವರು ಕೊಡುವ ರೀಸನ್ ಇದು. ಸಿಕ್ಕಾಪಟ್ಟೆ ಟ್ರಾಫಿಕ್ ಇದೆ. ಟ್ರಾಫಿಕ್‌ನಲ್ಲಿ ಸಿಕ್ಕಾಕೊಂಡಿದ್ದೇನೆ ಅನ್ನೋದು. ಎಷ್ಟೋ ಬಾರಿ ಇದು ಸುಳ್ಳಾಗಿರುತ್ತದೆ.
Image credits: Freepik
Kannada
ನನಗೆ ನೆನಪಿಲ್ಲ
ಕಷ್ಟದ ಪ್ರಶ್ನೆಗೆ ಆನ್ಸರ್ ಮಾಡಲು ಬಾರದಿದ್ದಾಗ ಕೆಲವರು ನನಗೆ ನೆನಪಿಲ್ಲ ಎನ್ನುತ್ತಾರೆ. ಗೊತ್ತಿಲ್ಲ ಎನ್ನಲು ಹಿಂಜರಿಯುತ್ತಾರೆ.
Image credits: Freepik
Kannada
ಮೆಸೇಜ್ ನೋಡಿಲ್ಲ
ಮೆಸೇಜ್‌ಗೆ ರಿಪ್ಲೈ ಕೊಡದ ಹಲವರು ನಾನು ಮೆಸೇಜ್ ನೋಡಿಲ್ಲ ಎಂದೇ ಹೇಳುತ್ತಾರೆ. ನಾನು ಮೆಸೇಜ್ ನೋಡಿಲ್ಲವಾದ ಕಾರಣ ನಿನಗೆ ರಿಪ್ಲೈ ಕೊಡಲು ಸಾಧ್ಯವಾಗಿಲ್ಲ ಅನ್ನೋ ಎಕ್ಸ್‌ಕ್ಯೂಸ್ ಕೊಡುತ್ತಾರೆ.
Image credits: Freepik
Kannada
ತಮಾಷೆ ಮಾಡ್ತಿದ್ದೀನಿ ಅಷ್ಟೆ
ಯಾವುದೇ ಮಾತನ್ನು ಸಡನ್ನಾಗಿ ಹೇಳಿಬಿಟ್ಟಾಗ, ಇದರಿಂದ ಮತ್ತೊಬ್ಬರಿಗೆ ಹರ್ಟ್ ಆಯ್ತು ಅಂತ ಗೊತ್ತಾದಾಗ ಸಾಮಾನ್ಯವಾಗಿ ಈ ಸುಳ್ಳನ್ನು ಹೇಳುತ್ತಾರೆ.