Health
ನಿಮ್ಮ ದಿನವನ್ನು ತುಪ್ಪ ಕಾಫಿಯೊಂದಿಗೆ ಪ್ರಾರಂಭಿಸಿ, ಹೌದು, ನೀವು ಎಂದಾದರೂ ತುಪ್ಪದ ಕಾಫಿ ಬಗ್ಗೆ ಕೇಳಿದ್ದೀರ? ಕುಡಿದಿಲ್ಲವೇ. ತುಪ್ಪದ ಕಾಫಿಯಿಂದ ಏನೆಲ್ಲ ಪ್ರಯೋಜನೆಗಳಿವೆ ನೋಡೋಣ
ತುಪ್ಪದ ಕಾಫಿ ಎಂದರೇನು? ಹೆಸರೇ ಸೂಚಿಸುವಂತೆ, ಕಪ್ಪು ಕಾಫಿಗೆ ತುಪ್ಪವನ್ನು ಸೇರಿಸಿದಾಗ ನಿಮಗೆ ತುಪ್ಪದ ಕಾಫಿ ಸಿಗುತ್ತದೆ
ತುಪ್ಪ ಕಾಫಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ಕಾಫಿಯಲ್ಲಿ ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ತುಪ್ಪವನ್ನು ಆಹಾರದ ಭಾಗವನ್ನಾಗಿ ಮಾಡುವುದರಿಂದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾಫಿಯಲ್ಲಿ ತುಪ್ಪವನ್ನು ಸೇರಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು(Fatty acids) ಜೀರ್ಣಾಂಗದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಕಾಫಿಯಲ್ಲಿ ತುಪ್ಪವನ್ನು ಸೇರಿಸುವುದರಿಂದ ಮೆದುಳಿನ ಆರೋಗ್ಯ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.