ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು
ಶ್ವಾಸಕೋಶವನ್ನು ಶುದ್ಧೀಕರಿಸಲು ಉಗಿ ಚಿಕಿತ್ಸೆ ಅಥವಾ ನೀರಿನ ಹಬೆಯ ಉಸಿರಾಟ ಒಂದು ಉತ್ತಮ ಮಾರ್ಗ. ತುಳಸಿ ಹಾಕಿ ನೀರನ್ನು ಕುದಿಸಿ ಉಗಿ ಪಡೆಯುವುದು ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ.
ಬಿಸಿ ಅರಿಶಿನ ಹಾಲು ಕುಡಿಯುವುದರಿಂದ ಶ್ವಾಸಕೋಶದ ವಿಷವನ್ನು ಹೊರಹಾಕಲು ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರಾಣಾಯಾಮವು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿದಿನ 10-15 ನಿಮಿಷ ಪ್ರಾಣಾಯಾಮ ಮಾಡಿ.
ವಿವಿಧ ಹರ್ಬಲ್ ಚಹಾಗಳು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಆಹಾರವು ಮಾಲಿನ್ಯ ಮತ್ತು ವಿಷಕಾರಿ ವಸ್ತುಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ ಶ್ವಾಸಕೋಶವನ್ನು ರಕ್ಷಿಸುತ್ತದೆ.
ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಉರಿಯೂತದ ಅಪಾಯವನ್ನು ಕಡಿಮೆ ಮಾಡುವ ಮೂಲಕ ಶ್ವಾಸಕೋಶದ ಆರೋಗ್ಯವನ್ನು ಬೆಂಬಲಿಸುತ್ತದೆ.
ಶೀತ ಮತ್ತು ಇತರ ಶ್ವಾಸಕೋಶ ಸಂಬಂಧಿ ಸೋಂಕುಗಳಿಂದ ರಕ್ಷಣೆ ಪಡೆಯಲು ಉಗಿ ಅಥವಾ ಹಬೆ ಪಡೆಯುವುದು ತ್ವರಿತ ಪರಿಹಾರವನ್ನು ನೀಡುತ್ತದೆ.
ವಿಟಮಿನ್ ಸಿ ಮತ್ತು ಇತರ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವ ಕಿತ್ತಳೆ, ನಿಂಬೆ, ದ್ರಾಕ್ಷಿಹಣ್ಣುಗಳು ಶ್ವಾಸಕೋಶದ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಈ ಸಮಸ್ಯೆ ಇರೋರು ತುಳಸಿ ಚಹಾ ಕುಡಿಯದಿರೋದೆ ಬೆಸ್ಟ್
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದ್ರೆ ಏನಾಗುತ್ತೆ ಲಕ್ಷಣಗಳೇನು?
ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಬೆಳ್ಳುಳ್ಳಿ ನೀರಿನ ಸೇವನೆ: ಎಷ್ಟೊಂದು ಲಾಭ ..!
ಪ್ರತಿದಿನ ನಾನ್ ವೆಜ್ ತಿನ್ನೋದ್ರಿಂದ ನಿಮ್ಮ ಪ್ರಾಣಕ್ಕೆ ಬರುತ್ತೆ ಕಂಟಕ!