ನಿಮಗೂ ಮಾಂಸಾಹಾರ ಅಂದ್ರೆ ಇಷ್ಟಾನ? ಅದಕ್ಕಾಗಿ ಪ್ರತಿದಿನ ಮಾಂಸಾಹಾರ ಸೇವನೆ ಮಾಡ್ತೀರಾ? ಹಾಗಿದ್ರೆ ನೀವು ಇದನ್ನ ಪೂರ್ತಿಯಾಗಿ ಓದಬೇಕು.
ಮಾಂಸಾಹಾರ ತಿನ್ನೋದರಿಂದ ಆರೋಗ್ಯಕ್ಕೆ ಪ್ರಯೋಜನ ಇದೆ ಅದು ಸುಳ್ಳಲ್ಲ, ಆದರೆ ಅದನ್ನು ಪ್ರತಿದಿನ ತಿನ್ನೋದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ.
ಮಾಂಸಾಹಾರ ತಿನ್ನೋದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡೋದಕ್ಕೆ ಶುರುಮಾಡುತ್ತೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನ ಓದಿದ್ರೆ, ನಾನ್ ವೆಜ್ ಆಹಾರಕ್ಕೆ ಕಡಿವಾಣ ಹಾಕಬಹುದು.
ಪ್ರತಿದಿನ ಮಾಂಸಾಹಾರವನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ ಅನ್ನೋದನ್ನು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗಾಗಿ ಪ್ರತಿನಿತ್ಯ ನಾನ್ ವೆಜ್ ತಿನ್ನೋದನ್ನು ತಪ್ಪಿಸಿ.
ಮಾಂಸಾಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿ ಇರುತ್ತದೆ, ಇದನ್ನು ನೀವು ನಿತ್ಯ ಸೇವಿಸೋದ್ರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. .
ಅಲ್ಲದೆ, ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ, ಇದು ಗ್ಯಾಸ್-ಮಲಬದ್ಧತೆ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು. ಇದರಿಂದ ನಿಮ್ಮ ಹೊಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
ಹೆಚ್ಚು ಕೆಂಪು ಮಾಂಸವನ್ನು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ರೆಡ್ ಮೀಟ್ ಅವಾಯ್ಡ್ ಮಾಡಿ. ಇಲ್ಲವಾದರೆ ನಿಮ್ಮ ಆರೋಗ್ಯವನ್ನು ನೀವೇ ಕೆಡಿಸಿದಂತಾಗುತ್ತದೆ.
ಅಷ್ಟೇ ಅಲ್ಲ, ಪ್ರತಿದಿನ ಮಾಂಸಾಹಾರವನ್ನು ತಿನ್ನುವುದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಹಾರ್ಮೋನ್ ಅಸಮತೋಲನದಿಂದ ಹಲವು ಸಮಸ್ಯೆಗಳು ಕಾಡುತ್ತವೆ.
ಮತ್ತೊಂದು ವಿಷ್ಯ ಗೊತ್ತಾ? ಮಾಂಸಾಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಇರುತ್ತೆ. ಹಾಗಾಗಿ ನೀವು ಅಧಿಕ ಪ್ರೋಟೀನ್ ತಿನ್ನುವುದು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇನ್ನು ಕೊನೆಯದಾಗಿ ಅತಿಯಾದ ನಾನ್ ವೆಜ್ ತಿನ್ನೋದ್ರಿಂದ ಲಿವರ್ ಮೇಲೆ ಒತ್ತಡ ಉಂಟಾಗುತ್ತೆ. ಯಕೃತ್ತಿನ ಮೇಲೆ ಅತಿಯಾದ ಒತ್ತಡವು ಫ್ಯಾಟಿ ಲಿವರ್ ಸಮಸ್ಯೆಗಳಿಗೆ ಕಾರಣವಾಗಬಹುದು.