Health
ಮಧುಮೇಹದ ಲಕ್ಷಣಗಳು ಮಧ್ಯಾಹ್ನದ ಊಟ ಸೇವಿಸುವ ಮುಂಚೆ ದೇಹ ತೋರಿಸಬಹುದು. ಅವುಗಳನ್ನು ತಿಳಿದುಕೊಳ್ಳೋಣ.
ಮಧ್ಯಾಹ್ನದ ಊಟಕ್ಕೂ ಮುನ್ನ ವಿಪರೀತ ಬಾಯಾರಿಕೆ ಕೆಲವೊಮ್ಮೆ ಮಧುಮೇಹದ ಸೂಚನೆಯಾಗಿರಬಹುದು.
ಬೆಳಗಿನ ಉಪಾಹಾರ ಚೆನ್ನಾಗಿ ಸೇವಿಸಿದ್ದರೂ ಮಧ್ಯಾಹ್ನ ಸಹಿಸಲು ಆಗದ ಹಸಿವು ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾದ ಸೂಚನೆಯಾಗಿರಬಹುದು.
ಮಧ್ಯಾಹ್ನ ಊಟದ ಮುನ್ನ ವಿಪರೀತ ಆಯಾಸ, ಬಳಲಿಕೆ ಇವುಗಳು ಮಧುಮೇಹದ ಸೂಚನೆಯಾಗಿರಬಹುದು.
ಹೆಚ್ಚಾಗಿ ಮೂತ್ರ ವಿಸರ್ಜನೆ, ಗಾಯಗಳು ನಿಧಾನವಾಗಿ ಒಣಗುವುದು, ಮಂದ ದೃಷ್ಟಿ, ಕಾರಣವಿಲ್ಲದೆ ದೇಹದ ತೂಕ ಕಡಿಮೆಯಾಗುವುದು, ಯಾವಾಗಲೂ ಒಂದಲ್ಲ ಒಂದು ತೊಂದರೆಗಳು ಎದುರಾಗುವುದು ಮುಂತಾದವು ಮಧುಮೇಹದ ಲಕ್ಷಣಗಳಾಗಿವೆ.
ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಡಿಹೈಡ್ರೇಷನ್‌ಗೆ ಕಾರಣವಾಗುತ್ತದೆ. ಇದರಿಂದ ಚರ್ಮ ಒಣಗಬಹುದು.
ಕೈಕಾಲುಗಳಲ್ಲಿ ಮರಗಟ್ಟುವಿಕೆ, ಪಾದಗಳಲ್ಲಿ ನೋವು, ಕಾಲುಗಳಲ್ಲಿ ನಿರಂತರ ಸಮಸ್ಯೆ ಮುಂತಾದವು ಮಧುಮೇಹದ ಲಕ್ಷಣವಾಗಿರಬಹುದು.
ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ರೋಗನಿರ್ಣಯಕ್ಕೆ ಪ್ರಯತ್ನಿಸದೆ ಕಡ್ಡಾಯವಾಗಿ ವೈದ್ಯರನ್ನು 'ಸಂಪರ್ಕಿಸಿ'. ಇದಾದ ನಂತರ ಮಾತ್ರ ರೋಗವನ್ನು ದೃಢೀಕರಿಸಿ.