ಅನೇಕರು ಪ್ರತಿದಿನ ಮೊಟ್ಟೆ ತಿನ್ನುತ್ತಾರೆ. ಆದರೆ ಪ್ರತಿ ನಿತ್ಯ ಸೇವಿಸುವುದರಿಂದ ಏನಾಗಬಹುದು ಎಂಬುದರ ಬಗ್ಗೆ ಆರೋಗ್ಯ ತಜ್ಞರು ತಿಳಿಸಿರುವ ಮಾಹಿತಿ ಇಲ್ಲಿದೆ ನೋಡಿ.
ಮೊಟ್ಟೆಯು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವಾಗಿದೆ. ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಅನ್ನು ಒದಗಿಸುವ ಆಹಾರವಾಗಿದೆ.
ಪ್ರತಿದಿನ ಮೊಟ್ಟೆ ತಿನ್ನುವುದು ಒಳ್ಳೆಯದೇ? ಇದರ ಬಗ್ಗೆ ಅನೇಕರಿಗೆ ಸಂದೇಹ ಅಥವಾ ಗೊಂದಲವಿರುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವವರು ಆರೋಗ್ಯ ತಜ್ಞರ ಸಲಹೆಯ ಮೇರೆಗೆ ಮಾತ್ರ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಬೇಕು.
ಕೆಲವರು ಮೊಟ್ಟೆಯನ್ನು ಅತಿಯಾಗಿ ಸೇವಿಸುತ್ತಾರೆ. ಈ ಅಭ್ಯಾಸದಿಂದ ದೇಹದ ತೂಕ ಹೆಚ್ಚಾಗಬಹುದು. ವಿಶೇಷವಾಗಿ ಮೊಟ್ಟೆಯ ಹಳದಿ ಲೋಳೆಯಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ.
ಮೊಟ್ಟೆಯಲ್ಲಿ ಫೈಬರ್, ಪ್ರೋಟೀನ್ ನಂತಹ ಪೋಷಕಾಂಶಗಳು ಹೆಚ್ಚಾಗಿರುತ್ತವೆ. ಮೊಟ್ಟೆಯನ್ನು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು.
ಆರೋಗ್ಯಕರ ಸಮತೋಲಿತ ಆಹಾರದ ಭಾಗವಾಗಿ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಸೇವಿಸುವುದು ವಯಸ್ಕರಿಗೆ ಸುರಕ್ಷಿತ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹೃದಯ ಸಂಬಂಧಿ ಕಾಯಿಲೆಗಳಿರುವವರು ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಇರುವವರು ಮೊಟ್ಟೆಯನ್ನು ಅತಿಯಾಗಿ ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ.
ಅತೀಯಾಗಿ ಕೋಲ್ಡ್ ಡ್ರಿಂಕ್ಸ್ ಕುಡಿತೀರಾ? ಅಪಾಯ ಗ್ಯಾರಂಟಿ
ಚಹಾ ಕುಡಿದ ನಂತರ ಈ 8 ತಪ್ಪು ಮಾಡಲೇಬೇಡಿ!
ನೇರಳೆ ಎಲೆಕೋಸಿನ ಆರೋಗ್ಯ ಪ್ರಯೋಜನಗಳಿವು
ಉತ್ತಮ ನಿದ್ದೆಗಾಗಿ ರಾತ್ರಿ ಯಾವ ಭಂಗಿಯಲ್ಲಿ ಮಲಗಬೇಕು?