ಚಹಾ ಕುಡಿದ ನಂತರ ಹಣ್ಣುಗಳನ್ನು ಸೇವಿಸಬಾರದು. ಚಹಾದಲ್ಲಿರುವ ಟ್ಯಾನಿನ್‌ಗಳು ಹಣ್ಣುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್, ಆಮ್ಲೀಯತೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನೀವು ಚಹಾ ಕುಡಿದ ನಂತರ ತಂಪು ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಬಿಸಿ ಚಹಾ ಕುಡಿದ ನಂತರ ತಂಪು ಪದಾರ್ಥಗಳನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಚಹಾ ಕುಡಿದ ನಂತರ ಅರಿಶಿನದಿಂದ ತಯಾರಿಸಿದ ಆಹಾರವನ್ನು ಸೇವಿಸಿದರೆ ಕೆಲವು ರಾಸಾಯನಿಕ ಕ್ರಿಯೆಗಳು ನಡೆದು ಜೀರ್ಣಕ್ರಿಯೆಯನ್ನು ಹಾಳುಮಾಡುತ್ತದೆ.
ಚಹಾ ಕುಡಿದ ನಂತರ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗುತ್ತವೆ.
ಚಹಾ ಕುಡಿದ ನಂತರ ಮೊಸರು ಮತ್ತು ಮಜ್ಜಿಗೆ ಸೇವಿಸಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಜೊತೆಗೆ, ಅವುಗಳ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಮಸ್ಯೆ ಉಂಟಾಗುತ್ತದೆ.
ಚಹಾ ಕುಡಿದ ನಂತರ ಕೋಲ್ಡ್ ಡ್ರಿಂಕ್ಸ್ ಕುಡಿದರೆ, ನಿಮಗೆ ಶೀತ, ಕೆಮ್ಮು ಮತ್ತು ಜ್ವರ ಬರುವ ಸಾಧ್ಯತೆ ಇದೆ.
ಚಹಾ ಕುಡಿದ ನಂತರ ಕಬ್ಬಿಣದ ಅಂಶವಿರುವ ಆಹಾರವನ್ನು ಸೇವಿಸಿದರೆ, ಕಬ್ಬಿಣದ ಅಂಶ ಹೀರಿಕೊಳ್ಳುವಲ್ಲಿ ಸಮಸ್ಯೆ ಉಂಟಾಗುತ್ತದೆ.