Kannada

ನೇರಳೆ ಎಲೆಕೋಸು ಇಷ್ಟವೇ?

ನೇರಳೆ ಎಲೆಕೋಸು ನಿಮಗೆ ಇಷ್ಟವೇ? ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

Kannada

ನೇರಳೆ ಎಲೆಕೋಸು

ಹಸಿರು ಎಲೆಕೋಸಿಗಿಂತ ಆರೋಗ್ಯ ಪ್ರಯೋಜನಗಳಲ್ಲಿ ನೇರಳೆ ಎಲೆಕೋಸು ಮುಂದಿದೆ. ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ಇಳಿಸಲು ಉತ್ತಮ.

Kannada

ನಾರಿನಂಶ

ನಾರಿನಂಶ, ಪ್ರೋಟೀನ್, ವಿಟಮಿನ್ ಸಿ, ಕೆ, ಎ, ಫೋಲೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಕಾರ್ಬೋಹೈಡ್ರೇಟ್, ಮೆಗ್ನೀಷಿಯಮ್ ಇತ್ಯಾದಿ ನೇರಳೆ ಎಲೆಕೋಸಿನಲ್ಲಿದೆ.

Kannada

ಹೃದ್ರೋಗದ ಸಾಧ್ಯತೆ ಕಡಿಮೆ

ಪೋಷಕಾಂಶಗಳಿಂದ ಸಮೃದ್ಧವಾದ ನೇರಳೆ ಎಲೆಕೋಸಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯ ವಿಟಮಿನ್‌ಗಳಿವೆ. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ಮತ್ತು ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Kannada

ಎಲುಬುಗಳಿಗೆ ರಕ್ಷಣೆ

ನೇರಳೆ ಎಲೆಕೋಸಿನಲ್ಲಿರುವ ವಿಟಮಿನ್ ಸಿ, ಕೆ, ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

Kannada

ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ

ನೇರಳೆ ಎಲೆಕೋಸಿನಲ್ಲಿರುವ ಆಹಾರದ ನಾರು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

Kannada

ಕಣ್ಣುಗಳಿಗೆ ರಕ್ಷಣೆ

ಕಣ್ಣುಗಳ ಆರೋಗ್ಯಕ್ಕೆ ನೇರಳೆ ಎಲೆಕೋಸು ತುಂಬಾ ಒಳ್ಳೆಯದು. ದೃಷ್ಟಿ ಸುಧಾರಿಸುವುದರ ಜೊತೆಗೆ ಕಣ್ಣಿನ ಪೊರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Kannada

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ವಿಟಮಿನ್ ಸಿ ಹೇರಳವಾಗಿರುವ ತರಕಾರಿಯಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೇರಳೆ ಎಲೆಕೋಸಿನಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಉತ್ತಮ ನಿದ್ದೆಗಾಗಿ ರಾತ್ರಿ ಯಾವ ಭಂಗಿಯಲ್ಲಿ ಮಲಗಬೇಕು?

ಜೀರ್ಣಕ್ರಿಯೆಗೆ ಅಪಾಯಕಾರಿ ಈ ಮಿಕ್ಸಿಂಗ್ ಆಹಾರ

ನಿಂತು ನೀರು ಕುಡಿಯುವುದರಿಂದ ಮೊಣಕಾಲು ನೋವು ಬರುತ್ತದೆಯೇ?

ಅತಿಯಾದ್ರೆ ಅಮೃತವೂ ವಿಷ; ಪ್ರೋಟೀನ್ ಸೇವನೆಯ 7 ಅಪಾಯಗಳು ತಿಳ್ಕೊಳ್ಳಿ!