ಅಸಿಡಿಟಿಯಿಂದ ಪರಿಹಾರ ಪಡೆಯಲು ಇಲ್ಲಿ ಆರು ಸುಲಭ ಮಾರ್ಗಗಳನ್ನು ನೀಡಲಾಗಿದೆ. ಇವು ನಿಮ್ಮ ಅಡುಗೆ ಮನೆಯಲ್ಲೇ ಸಿಗುತ್ತವೆ.
ಅಜ್ವೈನ್‌ನಲ್ಲಿ ಥೈಮೋಲ್ ಎಂಬ ಬಯೋಕೆಮಿಕಲ್ ಮತ್ತು ಸಕ್ರಿಯ ಕಿಣ್ವಗಳಿವೆ. ಇವು ಹೊಟ್ಟೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಊಟದ ನಂತರ ಒಂದು ಚಮಚ ಸೋಂಪು ಕಾಳನ್ನು ಜಗಿಯುವುದರಿಂದ ಅಸಿಡಿಟಿ ಸಮಸ್ಯೆಯನ್ನು ದೂರ ಮಾಡಬಹುದು.
ತುಳಸಿ ಎಲೆಗಳನ್ನು ಜಗಿಯುವುದು ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವುದರಿಂದ ಗ್ಯಾಸ್ ಮತ್ತು ಅಜೀರ್ಣದಿಂದ ತ್ವರಿತ ಪರಿಹಾರ ಸಿಗುತ್ತದೆ.
ಶುಂಠಿ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಅಸಿಡಿಟಿ ನಿವಾರಣೆಯಾಗುವುದಲ್ಲದೆ, ವಿವಿಧ ಜೀರ್ಣಕಾರಿ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಅಜೀರ್ಣದಿಂದಾಗಿ ಆಸಿಡ್ ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗಿ ಉಂಟಾಗುತ್ತದೆ. ಊಟಕ್ಕೆ ಮೊದಲು ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಅಸಿಡಿಟಿಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಮೊಸರು ತಿಂದ್ರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಹೊಟ್ಟೆ ಉರಿಯಿಂದ ಪಾರಾಗಲು ಇಲ್ಲಿವೆ 6 ಸರಳ ಮನೆಮದ್ದುಗಳು
ಮಹಿಳೆಯರು ಡಾರ್ಕ್ ಚಾಕೊಲೇಟ್ ತಿಂದ್ರೆ ಸಿಗುತ್ತೆ ಈ 7 ಪ್ರಯೋಜನ
Yellow Teeth: ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು 7 ಸುಲಭ ಮನೆಮದ್ದುಗಳು!