Kannada

ಅಸಿಡಿಟಿಯಿಂದ ಪರಿಹಾರ ಪಡೆಯಲು 6 ಸುಲಭ ಮಾರ್ಗ

ಅಸಿಡಿಟಿ ಅಥವಾ ಹೊಟ್ಟೆ ಉರಿಯ ಸಮಸ್ಯೆ ಸಾಮಾನ್ಯ. ಇದಕ್ಕಾಗಿ ಪದೇ ಪದೇ ಮಾತ್ರೆ ತೆಗೆದುಕೊಳ್ಳುವ ಬದಲು, ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. 

Kannada

ಓಂ ಕಾಳು

ಓಂ ಕಾಳಿನಲ್ಲಿ ಸಕ್ರಿಯ ಕಿಣ್ವಗಳು ಮತ್ತು ಬಯೋಕೆಮಿಕಲ್ ಥೈಮೋಲ್ ಇರುತ್ತದೆ. ಇವು ಹೊಟ್ಟೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
Image credits: unsplash
Kannada

ಸೋಂಪು

ಊಟದ ನಂತರ ಒಂದು ಚಮಚ ಸೋಂಪು ಜಗಿಯುವುದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿ.
Image credits: Getty
Kannada

ತುಳಸಿ ಎಲೆಗಳು

ತುಳಸಿ ಎಲೆಗಳನ್ನು ಜಗಿಯುವುದು ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವುದು ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ತ್ವರಿತ ಪರಿಹಾರ ನೀಡುತ್ತದೆ.
Image credits: instagram
Kannada

ಶುಂಠಿ

ಶುಂಠಿ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ಇದು ವಿವಿಧ ಜೀರ್ಣಕಾರಿ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
Image credits: instagram
Kannada

ಲವಂಗ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
Image credits: gemini
Kannada

ಆ್ಯಪಲ್ ಸೈಡರ್ ವಿನೆಗರ್

ಆ್ಯಸಿಡ್ ರಿಫ್ಲಕ್ಸ್ ಹೆಚ್ಚಾಗಿ ಅಜೀರ್ಣದಿಂದ ಉಂಟಾಗುತ್ತದೆ. ಊಟಕ್ಕೂ ಮುನ್ನ ಆ್ಯಪಲ್ ಸೈಡರ್ ವಿನೆಗರ್ ಕುಡಿಯುವುದು ಅಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Image credits: Getty

ಮಹಿಳೆಯರು ಡಾರ್ಕ್ ಚಾಕೊಲೇಟ್ ತಿಂದ್ರೆ ಸಿಗುತ್ತೆ ಈ 7 ಪ್ರಯೋಜನ

Yellow Teeth: ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು 7 ಸುಲಭ ಮನೆಮದ್ದುಗಳು!

Papaya Benefits: ರಾತ್ರಿ ಪಪ್ಪಾಯಿ ತಿಂದ್ರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೋದೇನು?

ನಿಮಗೆ ಯೌವ್ವನ, ಫಿಟ್ ಬಾಡಿ ಬೇಕಾ? ಅನಾನಸ್ ಹಣ್ಣನ್ನು ಈ ಸಮಯದಲ್ಲಿ ತಿನ್ನಿ!