ಮನೆಯಲ್ಲಿ ಸೊಳ್ಳೆಗಳ ಕಾಟವಾ? ಓಡಿಸಲು ಸೂಪರ್ ಟಿಪ್ಸ್ ಇಲ್ಲಿದೆ.
Image credits: Freepik
ಕರ್ಪೂರ
ಕರ್ಪೂರ: ಮನೆಯಿಂದ ಸೊಳ್ಳೆಗಳನ್ನು ಓಡಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ 3-4 ಕರ್ಪೂರವನ್ನು ಹಾಕಿಟ್ಟರೆ ಸೊಳ್ಳೆಗಳು ಓಡಿಹೋಗುತ್ತವೆ.
Image credits: Freepik
ತುಳಸಿ ಗಿಡ
ತುಳಸಿ ಗಿಡ ಸೊಳ್ಳೆಗಳನ್ನು ನೈಸರ್ಗಿಕವಾಗಿಯೇ ಓಡಿಸುತ್ತದೆ. ಏಕೆಂದರೆ ಇದರಿಂದ ಬರುವ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ.
Image credits: Getty
ನಿಂಬೆ ಮತ್ತು ಲವಂಗ
ಇದಕ್ಕಾಗಿ ಒಂದು ನಿಂಬೆಯನ್ನು ಎರಡು ಭಾಗಗಳಾಗಿ ಕತ್ತರಿಸಿ ಅದರಲ್ಲಿ ಲವಂಗವನ್ನು ಇಡಬೇಕು. ಇವುಗಳಿಂದ ಬರುವ ವಾಸನೆ ಸೊಳ್ಳೆಗಳನ್ನು ಓಡಿಸುತ್ತದೆ.
Image credits: Pinterest
ಬೆಳ್ಳುಳ್ಳಿ
ಬೆಳ್ಳುಳ್ಳಿಯ ಘಾಟಾದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲವಾದ್ದರಿಂದ, ಅವುಗಳನ್ನು ಓಡಿಸಲು ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಹಾಕಿ ಅದರಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ, ಆ ನೀರನ್ನು ಮನೆ ತುಂಬಾ ಸಿಂಪಡಿಸಬೇಕು.
Image credits: Getty
ಕಾಫಿ ಪುಡಿ
ಮನೆಯಲ್ಲಿ ನೀರು ನಿಂತಿದ್ದರೆ ಅದರ ಮೇಲೆ ಕಾಫಿ ಪುಡಿ ಹಾಕಿದರೆ ಸೊಳ್ಳೆಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತವೆ.
Image credits: Getty
ಸೋಪ್ ನೀರು
ಒಂದು ಕಪ್‌ನಲ್ಲಿ ಸೋಪ್ ನೀರು ತೆಗೆದುಕೊಂಡು ಅದನ್ನು ಮನೆಯ ಮಧ್ಯದಲ್ಲಿ ಇಟ್ಟರೆ ಸೊಳ್ಳೆಗಳು ಅದರಲ್ಲಿ ಬಿದ್ದು ಸಾಯುತ್ತವೆ.