Health
ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಒಣ ಚರ್ಮದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಚಳಿಗೆ ಮುಖ, ಕೈಗಳು, ಕಾಲುಗಳು ಬಿರುಕು ಬಿಡುತ್ತವೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಉತ್ತಮ ಸಲಹೆಗಳು ಇಲ್ಲಿವೆ.
ಓಟ್ಸ್ ಪೇಸ್ಟ್ ಮಾಡಿ ದೇಹಕ್ಕೆ ಹಚ್ಚಿಕೊಳ್ಳಿ. ಇದು ಒಣ ಚರ್ಮವನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ತೇವವಾಗಿರಿಸುತ್ತದೆ.
ಒಣ ಚರ್ಮವನ್ನು ಕಡಿಮೆ ಮಾಡಲು ಕೊಬ್ಬರಿ ಎಣ್ಣೆ ಸಹಾಯ ಮಾಡುತ್ತದೆ. ಸ್ನಾನ ಮಾಡುವ ಮೊದಲು ದೇಹಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ.
ಪೆಟ್ರೋಲಿಯಂ ಜೆಲ್ ಒಣ ಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಣ ಚರ್ಮವನ್ನು ಕಡಿಮೆ ಮಾಡುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಬ್ಲೂಬೆರ್ರಿ, ಟೊಮೆಟೊ, ಕ್ಯಾರೆಟ್, ಬೀನ್ಸ್, ಕಡಲೆಕಾಯಿ, ಬೇಳೆಕಾಳುಗಳನ್ನು ಸೇವಿಸಿ.
ಮಾಂಸಹಾರಿಗಳಾಗಿದ್ದಲ್ಲಿ ಸಾಲ್ಮನ್, ಐಲ, ಟ್ಯೂನ ಮುಂತಾದ ಮೀನುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
ಸ್ನಾನದ ನಂತರ ಕೈ, ಕಾಲುಗಳಿಗೆ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ದಿನಕ್ಕೆ ಎರಡು ಬಾರಿ ಹಚ್ಚಿ.
ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ
ಗ್ಯಾಸ್ ಟ್ರಬಲ್, ಹೊಟ್ಟೆ ಉಬ್ಬರ.. ರಾತ್ರಿ ನಿದ್ದೆ ಇಲ್ವಾ? ಇವು ತಿನ್ನಲೇಬೇಡಿ!
ಈ ಕಾರಣಗಳಿಗಾಗಿ ದಿನ ಬೆಳಗ್ಗೆ ಕೊತ್ತಂಬರಿ ಬೀಜದ ನೀರು ಕುಡಿಯಬೇಕು! ಏನಾಗುತ್ತೆ?
ಜ್ವರ ಬಂದಾಗ ಈ 7 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!