Health
ಸಿಹಿ ಕುಂಬಳಕಾಯಿ (ಚೀನಿ) ಬೀಜಗಳಲ್ಲಿ ನಮ್ಮ ಶರೀರಕ್ಕೆ ಅವಶ್ಯಕವಾದ ಹಲವು ಪೋಷಕಾಂಶಗಳಿವೆ. ಮುಖ್ಯವಾಗಿ ಮೆಗ್ನೀಷಿಯಂ, ಜಿಂಕ್, ಕಬ್ಬಿಣ, ಪೊಟ್ಯಾಶಿಯಂ, ವಿಟಮಿನ್ ಸಿ, ಫೈಬರ್, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು ಹೇರಳ.
ಚೀನಿಕಾಯಿ ಬೀಜಗಳನ್ನು ಪ್ರತಿದಿನ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಏಕೆಂದರೆ ಇದರಲ್ಲಿ ಮೆಗ್ನೀಷಿಯಂ, ಪೊಟ್ಯಾಶಿಯಂ ಇರುತ್ತದೆ. ಇವು ಬಿಪಿಯನ್ನು ನಿಯಂತ್ರಿಸುತ್ತವೆ.
ವಿಟಮಿನ್ ಸಿ, ಜಿಂಕ್ ಇರುವ ಸಿಹಿಕುಂಬಳಕಾಯಿ ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಮೆಗ್ನೀಷಿಯಂ ಇರುವ ಸಿಹಿಕುಂಬಳಕಾಯಿ ಬೀಜಗಳು ಎಲುಬುಗಳಿಗೆ ಒಳ್ಳೆಯದು.
ಫೈಬರ್ ಇರುವ ಸಿಹಿಕುಂಬಳಕಾಯಿ ಬೀಜಗಳು ಮಲಬದ್ಧತೆ ಕಡಿಮೆ ಮಾಡುತ್ತವೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.
ಚೀನಿಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಚೀನಿಕಾಯಿ ಬೀಜಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ.
ಚೀನಿಕಾಯಿ ಬೀಜಗಳು ಮೆಲಟೋನಿನ್ ಉತ್ಪಾದನೆಗೆ ಸಹಾಯ ಮಾಡಿ ಉತ್ತಮ ನಿದ್ರೆಯನ್ನು ನೀಡುತ್ತದೆ.
ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವುದರಿಂದ ಚರ್ಮಕ್ಕೆ ಒಳ್ಳೆಯದು.