Kannada

ಹೊಟ್ಟೆಯ ಬೊಜ್ಜು ಕರಗಿಸುವ 6 ಪಾನೀಯಗಳು

ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ 6 ಅದ್ಭುತ ಪಾನೀಯಗಳ ಮಾಹಿತಿ ಇಲ್ಲಿದೆ.

Kannada

ಗ್ರೀನ್ ಟೀ

ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಕರಗುತ್ತದೆ. ಇದರಲ್ಲಿರುವ 'ಕ್ಯಾಟೆಚಿನ್' (EGCG) ಎಂಬ ಆ್ಯಂಟಿಆಕ್ಸಿಡೆಂಟ್‌ಗಳು ತೂಕ ಇಳಿಸಲು ಸಹಾಯ ಮಾಡುತ್ತವೆ.

Image credits: Getty
Kannada

ಜೀರಿಗೆ ನೀರು

ಜೀರ್ಣಕ್ರಿಯೆ ಸುಧಾರಿಸಲು ಒಂದು ಚಮಚ ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಇದನ್ನು ಕುದಿಸಿ, ಸೋಸಿ, ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿರುವಾಗ ಕುಡಿಯಿರಿ.

Image credits: Getty
Kannada

ಶುಂಠಿ ನೀರು

ಶುಂಠಿ ನೀರು ತೂಕ ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ಬಹಳ ಸಹಕಾರಿ. ಇದು ಚಯಾಪಚಯ ಕ್ರಿಯೆಯನ್ನು (Metabolism) ಹೆಚ್ಚಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸುತ್ತದೆ.

Image credits: Getty
Kannada

ಮೆಂತ್ಯೆ ನೀರು

ಹಸಿವನ್ನು ನಿಯಂತ್ರಿಸಲು ಒಂದು ಚಮಚ ಮೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಸೋಸಿ ಕುಡಿಯಿರಿ.

Image credits: our own
Kannada

ನಿಂಬೆಹಣ್ಣಿನ ನೀರು

ದೇಹವನ್ನು ಹೈಡ್ರೇಟ್ ಆಗಿಡಲು ನಿಂಬೆಹಣ್ಣಿನ ನೀರು ಅತ್ಯುತ್ತಮ. ಇದು ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.

Image credits: Social Media
Kannada

ಚಕ್ಕೆ ನೀರು

ಚಕ್ಕೆ (ದಾಲ್ಚಿನ್ನಿ) ನೀರಿನಲ್ಲಿ ಕ್ಯಾಲೋರಿಗಳು ಇರುವುದಿಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಸಿಹಿ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ.

Image credits: pexels

ಒಡೆದ ಹಿಮ್ಮಡಿ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು.. ಅಲ್ಲಿ ಇಲ್ಲಿ ಏಕೆ ಹುಡುಕೋದು?

Iron Rich Foods: ರಕ್ತಹೀನತೆ ತಡೆಯಲು ನೀವು ತಿನ್ನಲೇಬೇಕಾದ 7 ಆಹಾರಗಳಿವು!

ಅಮೃತದಂತಹ ಮೊಸರು ಈ ಜನರಿಗೆ ವಿಷವಾಗುವುದು ಏಕೆ ಗೊತ್ತಾ?

Nutmeg Benefits: ಪ್ರತಿದಿನ ಜಾಯಿಕಾಯಿ ತಿಂದ್ರೆ ಸಿಗೋ ಅದ್ಭುತ ಲಾಭಗಳು ಇವು!