Health
ಅವಧಿ ಮುಗಿದ ಔಷಧಿ ಮಾತ್ರೆಗಳನ್ನು ಬಿಸಾಡುವ ಬದಲು, ಅವುಗಳನ್ನು 5 ವಿಧಾನಗಳಲ್ಲಿ ಬಳಸಬಹುದು. ಆಭರಣ ತಯಾರಿಕೆ, ಸ್ವಚ್ಛತೆ, ತೋಟಗಾರಿಕೆ, ಸಿಂಕ್‌ನ ಹೊಳಪು ಹೆಚ್ಚಿಸಲು ಪಾತ್ರೆ ತೊಳೆಯಲು ಬಳಸಬಹುದು.
ಮನೆಯಲ್ಲಿ ಹಲವು ಔಷಧಿಗಳು ಅವಧಿ ಮೀರಿರುತ್ತವೆ. ಅವುಗಳನ್ನು ಹೆಚ್ಚಿನವರು ಬಿಸಾಡುತ್ತಾರೆ. ಆದರೆ ಅವುಗಳನ್ನು ಬೇರೆ ರೀತಿಯಲ್ಲಿ ಬಳಸಬಹುದು.
ನಿಮ್ಮ ಪಾತ್ರೆ ತೊಳೆಯುವ ಸೋಪು ಅಥವಾ ಕೈ ತೊಳೆಯುವ ಲೋಷನ್ ಖಾಲಿಯಾಗಿದ್ದಲ್ಲಿ ಎಕ್ಸ್‌ಫೈರಿ ಆದ ಮಾತ್ರೆಗಳನ್ನು ಯೂಸ್ ಮಾಡಬಹುದು.
ಅವಧಿ ಮೀರಿದ ಔಷಧಿಯನ್ನು ಕೀಟನಾಶಕವಾಗಿ ಬಳಸಬಹುದು. ನೀವು ಈ ಔಷಧಿಗಳನ್ನು ಪುಡಿಮಾಡಿ ಬಳಸಬಹುದು. ಬಾಟಲಿಯಲ್ಲಿ ನೀರು ತುಂಬಿಸಿ, ಈ ಪುಡಿಯನ್ನು ಬೆರೆಸಿ ನಿಮ್ಮ ಗಿಡಗಳ ಮೇಲೆ ಸಿಂಪಡಿಸಿ.
ಅವಧಿ ಮೀರಿದ ಔಷಧಿಗಳನ್ನು ಬಿಸಿ ನೀರಿನಲ್ಲಿ ಬೆರೆಸಿ ದ್ರಾವಣ ತಯಾರಿಸಿ. ಇದಕ್ಕೆ ಅಡಿಗೆ ಸೋಡಾ ಸೇರಿಸಿ, ಸಿಂಕ್‌ಗೆ ಹಾಕಿ ಸ್ವಲ್ಪ ಸಮಯ ಬಿಡಿ ನಂತರ ತೊಳೆದರೆ ಸಿಂಕ್ ಪಳ ಪಳ ಹೊಳೆಯುವುದು.
ಒಂದು ಪಾತ್ರೆಯಲ್ಲಿ ನೀರು ಬಿಸಿಮಾಡಿ, ಅದರಲ್ಲಿ ಅವಧಿ ಮೀರಿದ ಔಷಧಿಗಳ ಹಾಕಿ ಕುದಿಸಿ. ಇದರಲ್ಲಿ ನಿಮ್ಮ ಕಬ್ಬಿಣ ಅಥವಾ ಬೆಳ್ಳಿ ಪಾತ್ರೆಗಳನ್ನು ಸ್ವಲ್ಪ ಹೊತ್ತು ಇಟ್ಟು ನಂತರ ಸ್ವಚ್ಛಗೊಳಿಸಿ.