ಚಳಿಗಾಲದಲ್ಲಿ ಜನರು ಆರೋಗ್ಯ ಸುಧಾರಣೆಗಾಗಿ ಒಣ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ನೀವೂ ತ್ವಚೆ ಹೊಳಪು ಹೆಚ್ಚಿಸಲು ಅಂಜೂರವನ್ನು ಸೇವಿಸಬಹುದು.
ತ್ವಚೆಗೇನು ಲಾಭ?
ಚಳಿಗಾಲದಲ್ಲಿ ಆರೋಗ್ಯದ ಸುಧಾರಣೆಗಾಗಿ ಒಣ ಹಣ್ಣನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ನೀವೂ ತ್ವಚೆಯಲ್ಲಿ ಹೊಳಪು ಹೆಚ್ಚಿಸಿಕೊಲ್ಳಲು ಅಂಜೂರದ ಹಣ್ಣನ್ನು ಅಥವಾ ಒಣಗಿದ ಅಂಜೂರವನ್ನು ಸೇವಿಸಬಹುದು.
ಉತ್ಕರ್ಷಣ ನಿರೋಧಕ
ಅಂಜೂರ ಉತ್ಕರ್ಷಣ ನಿರೋಧಕವಾಗಿದ್ದು, ಮುಕ್ತ ರಾಡಿಕಲ್‌ಗಳನ್ನು ನಿವಾರಿಸುತ್ತದೆ. ಇದರಿಂದ ತ್ವಚೆ ಸುಕ್ಕೂ ಕಡಿಮೆಯಾಗುತ್ತವೆ. ಪ್ರತಿದಿನ ಅಂಜೂರವನ್ನು ಸೇವಿಸುವುದರಿಂದ ತ್ವಚೆಯಲ್ಲಿ ಹೊಳಪು ಬರುತ್ತದೆ.
ಕಪ್ಪು ಕಲೆ ದೂರ
ಅಂಜೂರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆಯ ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಕಲೆಗಳಿಲ್ಲದಂತೆ ಮಾಡುತ್ತದೆ. ವಿಟಮಿನ್ ಸಿ ಹೊಳಪನ್ನು ನೀಡುವ ಕೆಲಸ ಮಾಡುತ್ತದೆ, ಇದರಿಂದ ತ್ವಚೆ ಹೊಳೆಯುತ್ತದೆ.
ಉರಿಯೂತ ನಿವಾರಕ ಗುಣ
ಮೊಡವೆಗಳಿಂದ ತ್ವಚೆಯಲ್ಲಿ ಊತ ಮತ್ತು ಕೆಂಪು ಬಣ್ಣ ಬರುತ್ತದೆ. ಅಂಜೂರದಲ್ಲಿ ಉರಿಯೂತ ನಿವಾರಕ ಗುಣ ಇರುವುದರಿಂದ ತ್ವಚೆಯ ಊತವನ್ನು ಕಡಿಮೆ ಮಾಡಿ ಮೊಡವೆಗಳನ್ನು ನಿವಾರಿಸುತ್ತದೆ.
ನೆನೆಸಿಟ್ಟ ಅಂಜೂರ ಸೇವಿಸಿ
ಅಂಜೂರವನ್ನು ರಾತ್ರಿಯಿಡೀ ನೀರು ಅಥವಾ ಹಾಲಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ತ್ವಚೆ, ಕೂದಲಿನ ಜೊತೆಗೆ ದೇಹಕ್ಕೂ ಶಕ್ತಿ ಸಿಗುತ್ತದೆ. ಅಂಜೂರ ರಕ್ತಹೀನತೆಯನ್ನು ಕೂಡ ನಿವಾರಿಸುತ್ತದೆ,
ಎಕ್ಸ್‌ಫೋಲಿಯೇಟ್ ಮಾಡಿ
ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡಲು ಅಂಜೂರವನ್ನು ಜಜ್ಜಿ ಸ್ವಲ್ಪ ಸಕ್ಕರೆ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈಗ ಸ್ವಲ್ಪ ಹೊತ್ತು ತ್ವಚೆಯ ಮೇಲೆ ಹಚ್ಚಿ. ನಿಮ್ಮ ತ್ವಚೆಯ ಕೊಳೆ ತೆಗೆಯುತ್ತದೆ.