Food

ಚೀನಿಯರೇ ಮೊದಲು ಸಾರಾಯಿ ಸೇವಿಸಿದವರು

ಚೀನಾದಲ್ಲಿ ಕ್ರಿಸ್ತ ಪೂರ್ವ 7,000 ವರ್ಷಗಳ ಹಿಂದೆಯೇ ಮದ್ಯ ತಯಾರಿಸಿದ ಕುರುಹುಗಳು ಕಂಡುಬಂದಿವೆ. ಚೀನಾ ಜಿಯಾಹು ಪಟ್ಟಣದಲ್ಲಿ ಮಣ್ಣಿನ ಮಡಕೆಗಳಲ್ಲಿ ಮದ್ಯದ ಅವಶೇಷಗಳು ಸಿಕ್ಕಿವೆ.

ಜಾರ್ಜಿಯಾದಲ್ಲೂ ಮದ್ಯದ ಕುರುಹುಗಳು

ಹಾಗೆಯೇ ಯುರೋಪ್‌ನಲ್ಲಿ ಪುರಾತನ ಮದ್ಯವೂ ಜಾರ್ಜಿಯಾದಲ್ಲಿ ಪತ್ತೆಯಾಗಿದೆ ಕ್ರಿಸ್ತ ಪೂರ್ವ. 6,000 ವರ್ಷ ಹಿಂದೆಯೇ ದ್ರಾಕ್ಷಿಯಿಂದ ಈ ಮದ್ಯ ತಯಾರಿಸಲಾಗುತ್ತಿತ್ತು.

ಇರಾನ್‌ನಲ್ಲಿ 5,400 BCಯಷ್ಟು ಹಿಂದೆಯೇ ಮದ್ಯವಿತ್ತು

ಇರಾನ್‌ನ ಜಾಗ್ರೋಸ್ ಬೆಟ್ಟಗಳಲ್ಲಿ 5,400 BCಯಷ್ಟು ಹಿಂದೆಯೇ ಮದ್ಯದ ಕುರುಹುಗಳು ಕಂಡುಬಂದಿವೆ. ಇಲ್ಲಿ ಮಣ್ಣಿನ ಮಡಕೆಗಳಲ್ಲಿ ದ್ರಾಕ್ಷಿ ಮದ್ಯದ ಅವಶೇಷಗಳು ಪತ್ತೆಯಾಗಿವೆ.

ಮೆಸೊಪಟ್ಯಾಮಿಯ (ಇರಾಕ್)

ಪ್ರಾಚೀನ ಮೆಸೊಪಟ್ಯಾಮಿಯ (ಈಗಿನ ಇರಾಕ್)ನಲ್ಲಿ ಮದ್ಯದ ಕುರುಹುಗಳು ಕಂಡುಬರುತ್ತವೆ. ಇಲ್ಲಿ ಬಾರ್ಲಿಯಿಂದ ಬಿಯರ್ ತಯಾರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಮದ್ಯವನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲೂ ಬಳಸಲಾಗುತ್ತಿತ್ತು.

ಈಜಿಪ್ಟ್‌ನಲ್ಲಿ ಮದ್ಯದ ಶಾಸನಗಳು

ಪ್ರಾಚೀನ ಈಜಿಪ್ಟ್‌ನಲ್ಲೂ ಮದ್ಯದ ಕುರುಹುಗಳು ಕಂಡುಬಂದಿವೆ. ಇಲ್ಲಿ ದ್ರಾಕ್ಷಿ ಮತ್ತು ಬಾರ್ಲಿಯಿಂದ ಮದ್ಯ ತಯಾರಿಸಲಾಗುತ್ತಿತ್ತು. ಈಜಿಪ್ಟ್ ಶಾಸನಗಳಲ್ಲಿ ಮದ್ಯ ತಯಾರಿಯ ವಿಧಾನದ ಬಗ್ಗೆಯೂ ಮಾಹಿತಿ ಇದೆ.

ಪ್ರಾಚೀನ ಭಾರತದಲ್ಲಿ ಸುರಾಪಾನ

ಭಾರತದಲ್ಲೂ ವೇದಕಾಲದಿಂದಲೂ ಸೋಮರಸ, ಸುರಾಪಾನ ಇದ್ದವು ಎಂಬುದಕ್ಕೆ ಕುರುಹುಗಳಿವೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಬಳಸಲಾಗುತ್ತಿತ್ತು.

ಗ್ರೀಸ್, ರೋಮ್

ಪ್ರಾಚೀನ ಗ್ರೀಸ್ ಮತ್ತು ರೋಮ್‌ಗಳಲ್ಲಿ ಮದ್ಯದ ಅಸ್ತಿತ್ವವಿತ್ತು. ಇಲ್ಲಿ ಮದ್ಯದ ದೇವರು ಡಯೋನಿಸಸ್‌ನನ್ನು ಪೂಜಿಸಲಾಗುತ್ತಿತ್ತು. ರೋಮ್‌ನಲ್ಲೂ ಧಾರ್ಮಿಕ , ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮದ್ಯ ನೀಡಲಾಗುತ್ತಿತ್ತು.

ಅರ್ಮೇನಿಯಾ

ಅರ್ಮೇನಿಯಾದಲ್ಲಿ 4,100 BCಯಷ್ಟು ಹಿಂದಿನ ಮದ್ಯದ ಪುರಾತನ ಕುರುಹುಗಳು ಪತ್ತೆಯಾಗಿವೆ.

ಜರ್ಮನಿ

ಜರ್ಮನಿಯ ರೈನ್‌ಲ್ಯಾಂಡ್ ಪ್ರದೇಶದಲ್ಲಿ 1867ರಲ್ಲಿ ಉತ್ಖನನದ ಸಮಯದಲ್ಲಿ ಶತಮಾನಗಳಷ್ಟು ಹಳೆಯದಾದ (ಹದಿನೇಳು ಶತಮಾನಗಳು) ಮದ್ಯದ ಬಾಟಲಿ ಪತ್ತೆಯಾಗಿದೆ.

ಮದ್ಯ ಸೇವಿಸಿದ ಮೊದಲ ವ್ಯಕ್ತಿ ಯಾರು?

ಮದ್ಯ ಸೇವಿಸಿದ ಮದ್ಯ ಮಾಡಿದ ಮೊದಲಿಗರು ಚೀನಿಗರೇ ಎಂಬುದು ಇತಿಹಾಸದಲ್ಲಿ ದಾಖಲಾದ ಕುರುಹುಗಳಿಂದ ತಿಳಿದು ಬರುವ ಅಂಶ

Find Next One