Food
ಹಸಿರು ಎಲೆ ತರಕಾರಿ ಪಾಲಕ್ ಮತ್ತು ಕೇಲ್, ಎಳ್ಳು, ಬಾದಾಮಿ ಮತ್ತು ಸಾಲ್ಮನ್ ಮತ್ತು ಸಾರ್ಡೀನ್‌ಗಳಂತಹ ಮೀನು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಮೂಳೆಯ ಆರೋಗ್ಯವನ್ನು ಬೆಂಬಲಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿವೆ
ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುವುದು ಸಾಮಾನ್ಯ. ಆರೋಗ್ಯಕರ ದೇಹ ಮತ್ತು ಬಲಿಷ್ಠ ಮೂಳೆಗಳಿಗಾಗಿ ಈ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿ.
ಬ್ರೊಕೊಲಿ, ಬೀನ್ಸ್, ಹೂಕೋಸು, ಪಾಲಕ್, ಸಿಹಿ ಗೆಣಸು, ಆಲೂಗಡ್ಡೆ, ಸೆಲರಿ, ಕ್ಯಾರೆಟ್ ಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಇದೆ. ಮೂಳೆಗಳಿಗೆ ಒಳ್ಳೆಯದು.
ಹಾಲು, ಚೀಸ್ ಮತ್ತು ಇತರ ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಇದೆ. ಒಂದು ಕಪ್ ಹಾಲಿನಲ್ಲಿ ಸಾಮಾನ್ಯವಾಗಿ 300 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಇದು ಮೊಸರು ಅಥವಾ ಚೀಸ್ ಗೆ ಸಮಾನ.
ಬಾದಾಮಿ, ಸೋಯಾ, ಓಟ್ಸ್ ಹಾಲಿನಲ್ಲಿ ಸಸ್ಯಜನ್ಯ ಕ್ಯಾಲ್ಸಿಯಂ ಇದೆ.
ಕ್ಯಾಲ್ಸಿಯಂ ಸಲ್ಫೇಟ್ ನಿಂದ ತಯಾರಿಸಿದ ತೋಫು(ಸೋಯಾ ಮೊಸರು) ಕ್ಯಾಲ್ಸಿಯಂ ಯುಕ್ತ. ಒಂದು ಕಪ್ ತೋಫು 250 ಮಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ.
ಮತ್ತಿ, ಸಾಲ್ಮನ್ ನಂತಹ ಮೀನುಗಳಲ್ಲಿ ಹೆಚ್ಚು ಕ್ಯಾಲ್ಸಿಯಂ ಇದೆ.
ಎಡಮಾಮ್ ಬೀನ್ಸ್ ಸೋಯಾಬೀನ್ಸ್ ನ ಒಂದು ವಿಧ. ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದೆ. ಒಂದು ಕಪ್ ಬೇಯಿಸಿದ ಎಡಮಾಮ್ ಬೀನ್ಸ್ ನಲ್ಲಿ 100 ಮಿಗ್ರಾಂ ಕ್ಯಾಲ್ಸಿಯಂ ಇದೆ.
ಹಸಿ ಮತ್ತು ಒಣಗಿದ ಅಂಜೂರದ ಹಣ್ಣುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುತ್ತದೆ. ಐದು ಒಣಗಿದ ಅಂಜೂರದ ಹಣ್ಣುಗಳಲ್ಲಿ ಸುಮಾರು 100 ಮಿಗ್ರಾಂ ಕ್ಯಾಲ್ಸಿಯಂ ಇದೆ.
ಒಣ ಹಣ್ಣುಗಳು, ಎಳ್ಳಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದೆ. ಹೀಗಾಗಿ ಡ್ರೈಫ್ರೂಟ್ ತಿನ್ನುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.