ರತನ್ ಟಾಟಾ ಅವರು ತಮ್ಮ ಕೊನೆಕ್ಷಣದವರೆಗೂ ಬಹಳ ಚಟುವಟಿಕೆಯಿಂದ ಇದ್ದಂತಹ ವ್ಯಕ್ತಿ. ಬದುಕನ್ನು ತಮ್ಮದೇ ರೀತಿಯಲ್ಲಿ ನೋಡುತ್ತಾ ಸದಾ ಸಕ್ರಿಯವಾಗಿದ್ದ ಅವರ ವ್ಯಕ್ತಿತ್ವ ಅನೇಕರಿಗೆ ಮಾದರಿ
Image credits: social media
ರತನ್ ಟಾಟಾ
ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದ ಅವರು ತಮ್ಮ ಸಾವಿಗೂ ಕೆಲ ದಿನಗಳ ಮೊದಲು ಮಾಧ್ಯಮಗಳಲ್ಲಿ ಹಬ್ಬಿದ್ದ ಅನಾರೋಗ್ಯದ ವರದಿಗೂ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದರು.
Image credits: Getty
ಶಿಸ್ತಿನ ಜೀವನಶೈಲಿ
ಶಿಸ್ತಿನ ಜೀವನಶೈಲಿಯನ್ನು ರೂಢಿಸಿಕೊಂಡಿದ್ದ ಅವರು ಪೌಷ್ಟಿಕ ಮತ್ತು ಸರಳ ಆಹಾರಕ್ಕೆ ಆದ್ಯತೆ ನೀಡಿದ್ದರು.
Image credits: google
ಷೆಫ್ ಪರ್ವೇಜ್ ಪಟೇಲ್
ಟಾಟಾ ಮನೆಯಲ್ಲಿ ಮಾಡಿದ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಿದ್ದರು ಎಂದು ಟಾಟಾ ಇಂಡಸ್ಟ್ರೀಸ್‌ನ ಪಾಕತಜ್ಞ ಪರ್ವೇಜ್ ಪಟೇಲ್ ಹೇಳಿದ್ದಾರೆ.
Image credits: google
ಸಹೋದರಿಯ ಅಡುಗೆ ಇಷ್ಟ
ತಮ್ಮ ಸಹೋದರಿ ಮಾಡುತ್ತಿದ್ದ ಸಾಂಪ್ರದಾಯಿಕ ಅಡುಗೆಯನ್ನು ರತನ್ ಟಾಟಾ ಹೆಚ್ಚು ಇಷ್ಟಪಡುತ್ತಿದ್ದರು.ಆದರೆ ಇಷ್ಟ ಎಂದು ಯಾವುದನ್ನೂ ಅತಿಯಾಗಿ ತಿನ್ನುವ ಅಭ್ಯಾಸ ಅವರಿಗಿರಲಿಲ್ಲ,
Image credits: google
ಖಟ್ಟಾ-ಮೀಠಾ ಮಸೂರ್ ದಾಲ್
ಖಟ್ಟಾ-ಮೀಠಾ ಮಸೂರ್ ದಾಲ್ ಹಾಗೂ, ಮಟನ್ ಪಲಾವ್ ರತನ್ ಟಾಟಾ ಅವರ ಇಷ್ಟದ ಖಾದ್ಯಗಳಾಗಿದ್ದವು.
Image credits: google
ದೋಸೆ ಇಷ್ಟ
ಕಾಫಿ ಅವರಿಷ್ಟದ ಪಾನೀಯವಾಗಿದ್ದರೆ. ವಿವಿಧ ರೀತಿಯ ದೋಸೆಗಳು ಕೂಡ ಅವರ ಫೇವರೇಟ್ ಲಿಸ್ಟ್‌ನಲ್ಲಿದ್ದವು.