ಕಟ್ ಮಾಡ್ಕೊಂಡ ಈ ತರಕಾರಿಗೆ ಸ್ವಲ್ಪ ಉಪ್ಪು, ಅರಿಷಿಣ, ಸ್ವಲ್ಪ ಖಾರದಪುಡಿ, ಮೊಸರು ಹಾಕಿ, ಅಕ್ಕಿ ಬೇಕಾದಷ್ಟು ಹಿಟ್ಟು ಹಾಕಿ ಕಲಸಿಕೊಳ್ಳಿ. ಇದಕ್ಕೆ ನೀರು ಹಾಕುವುದು ಬೇಡ.
Image credits: Our own
Kannada
ನೀರು ಬೇಡ
ಸವತೆಕಾಯಿಯಲ್ಲೂ ನಿರು ಇರುವುದು. ಹೀಗಾಗಿ ಎಕ್ಸ್ಟ್ರಾ ನೀರು ಬೇಡ. ಇವುಗಳೆಲ್ಲವನ್ನು ಮಿಕ್ಸ್ ಮಾಡಿ ಹದವಾಗಿ ಕಲಸಿ, ಹಿಟ್ಟು ಗಟ್ಟಿ ಇರಬೇಕು.
Image credits: Our own
Kannada
ಎಷ್ಟು ಸಮಯ ಬೇಕು?
ಈ ಹಿಟ್ಟು ಕಲಸಿ ಅರ್ಧ ದಿನ ಅಥವಾ ಒಂದು ರಾತ್ರಿ ಕಳೆದರೆ ತುಂಬ ಚೆನ್ನ. ಆಮೇಲೆ ಬಾಳೆಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ ಅದರ ಮೇಲೆ ರೊಟ್ಟಿ ತಟ್ಟುವ ಹಾಗೆ ಈ ಹಿಟ್ಟನ್ನು ತಟ್ಟಿ. ಪ್ಲೇಟ್ ಮೇಲೆಯೂ ಇದನ್ನು ಮಾಡಬಹುದು.
Image credits: meta ai
Kannada
ರೊಟ್ಟಿ ಥರ ತಟ್ಟಿ!
ರೊಟ್ಟಿ ಅಷ್ಟು ತೆಳ್ಳಗೆ ಆಗೋದು ಬೇಡ, ಆದರೆ ತುಂಬ ದಪ್ಪವೂ ಬೇಡ. ಬೇಯಲು ಅನುಕೂಲ ಆಗುವಂತೆ ವೃತ್ತಾಕಾರದಲ್ಲಿ ಹಚ್ಚಿ, ಅದರ ಮಧ್ಯೆ ಸಣ್ಣದಾಗಿ ಮೂರು ಕಡೆ ತೂತು ಮಾಡಿ
Image credits: meta ai
Kannada
ಒಪಡೆ ರೆಡಿ!
ಕಾವಲಿ ಮೇಲೆ ತಾಲಿಪಟ್ಟು ಹಾಕಿ, ಅದಕ್ಕೆ ಎಣ್ಣೆ ಅಥವಾ ಬೆಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿದರೆ ಸವಿ ಸವಿಯಾಗಿ ತಿನ್ನಲು ತಾಳಿಪೀಟು ರೆಡಿ.
Image credits: meta ai
Kannada
ಚಟ್ನಿ ಬೇಕು
ತಾಲಿಪಟ್ಟುಗೆ ಚಟ್ನಿ ಅಥವಾ ಬೆಲ್ಲ ಇದ್ದರೆ ತುಂಬ ರುಚಿಯಾಗಿರುತ್ತದೆ.