ಮ್ಯಾಗಿ ಅಂದರೆ ಅನೇಕರಿಗೆ ಇಷ್ಟ. ಎರಡು ನಿಮಿಷದಲ್ಲಿ ಮಾಡುವ ಈ ಮ್ಯಾಗಿಗೆ ಇನ್ನಷ್ಟು ಟೇಸ್ಟ್ ಬರಲು ಒಂದಷ್ಟು ಕ್ರಮಗಳನ್ನು ಅನುಸರಿಸಬೇಕು.
ಸಾಕಷ್ಟು ಮಾದರಿಯ ಮ್ಯಾಗಿಗಳಿವೆ. ಮನೆಯಲ್ಲಿ ಮಾಡುವಾಗ ಒಂದೆರಡು ಐಟಮ್ ಸೇರಿಸಿ ಮ್ಯಾಗಿ ಮಾಡಿದರೆ ತಿನ್ನಲು ಇನ್ನಷ್ಟು ರುಚಿ ಸಿಗುವುದು.
ಮ್ಯಾಗಿ ಟೇಸ್ಟ್ ಆಗಿ ಮಾಡಲು ಒಂದಷ್ಟು ಸಾಮಗ್ರಿಗಳನ್ನು ಸೇರಿಸಿಕೊಳ್ಳಬೇಕು.
ಮ್ಯಾಗಿ ಪ್ಯಾಕೇಟ್ ಒಡೆದು ಅದನ್ನು ನೀರಿನಲ್ಲಿ ಬೇಯಿಸಿಕೊಳ್ಳಿ.
ಮ್ಯಾಗಿಯ ನೀರನ್ನು ಸೋಸಿ ಇಟ್ಟುಕೊಳ್ಳಿ. ಆ ಮ್ಯಾಗಿಯಲ್ಲಿ ನೀರು ಇರಬಾರದು.
ನಿಮಗೆ ಬೇಕಾದಷ್ಟು ಸ್ಪ್ರಿಂಗ್ ಒನಿಯನ್ ( ಈರುಳ್ಳಿ ಸೊಪ್ಪು ಅಥವಾ ಈರುಳ್ಳಿ ಹೂವು ) ಹಾಗೂ ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ.
ಒಂದು ಚಮಚ Oregano, ಮೆಣಸಿನ ಹಿಟ್ಟು, ಚಿಲ್ಲಿ ಫ್ಲೆಕ್ಸ್, ರುಚಿಗೆ ತಕ್ಕಷ್ಟು ಉಪ್ಪು, ಸೋಯಾ ಸಾಸ್ ಜೊತೆಗೆ ಮ್ಯಾಗಿ ಮಸಾಲಾ ಹಾಕಿ.
ಬೇಯಿಸಿದ ಮ್ಯಾಗಿ ಬಿಟ್ಟು, ಉಳಿದೆಲ್ಲವನ್ನು ಒಂದು ಬಾಣೆಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ, ಸ್ವಲ್ಪ ಫ್ರೈ ಮಾಡಿಕೊಳ್ಳಿ.
ಈಗ ಮ್ಯಾಗಿ ಹಾಗೂ ಫ್ರೈ ಮಾಡಿದ ಎಲ್ಲ ಐಟಮ್ ಹಾಕಿ ಚೆನ್ನಾಗಿ ಕಲಿಸಿ.
ನೆನೆಸಿದ ಬಾದಾಮಿ ಏಕೆ ತಿನ್ನಬಾರದು? ಹೇಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು? ತಿಳಿಯಿರಿ
ಬಲವಾದ, ಆರೋಗ್ಯಕರ ಉಗುರುಗಳು ಬೇಕಾದರೆ ನೀವು ತಿನ್ನಲೇಬೇಕಾದ ಆಹಾರಗಳಿವು!
ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿ! ಈ ಅಪಾಯ ಗ್ಯಾರಂಟಿ!
Natural Weight Loss: ತೂಕ ಇಳಿಸಲು ಜಿಮ್, ವ್ಯಾಯಾಮ ಅಷ್ಟೇ ಅಲ್ಲ, ಈ ಪಾನೀಯ ಕುಡಿದರೆ ಸಾಕು!